Financial Gains and Business Luck ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ: ವಿಶ್ವಾವಸು ನಾಮ ಸಂವತ್ಸರ ದಕ್ಷಿಣಾಯನ ಹೇಮಂತ ಋತು ಪುಷ್ಯ ಮಾಸ ಶುಕ್ಲ ಪಕ್ಷದ ಪಾಡ್ಯಮಿ ತಿಥಿ. ಮೂಲ ನಕ್ಷತ್ರವು ರಾತ್ರಿ 1.15 ರ ವರೆಗೆ ಇರಲಿದ್ದು ಆನಂತರ ಪೂರ್ವಾಷಾಢ ನಕ್ಷತ್ರವು ಆರಂಭವಾಗಲಿದೆ. ರಾಹುಕಾಲವು ಬೆಳಿಗ್ಗೆ 9.00 ರಿಂದ 10.30 ರ ವರೆಗೆ ಇರಲಿದ್ದು ಯಮಗಂಡ ಕಾಲವು ಮಧ್ಯಾಹ್ನ 1.30 ರಿಂದ 3.00 ರ ವರೆಗೆ ಇರಲಿದೆ. ಶುಭ ಘಳಿಗೆ ಸಂಜೆ 6.08 ರಿಂದ ಆರಂಭವಾಗಿ ರಾತ್ರಿ 7.54 ರ ವರೆಗೆ ಇರಲಿದೆ.

ಶಿವಮೊಗ್ಗ: ಹೋಟೆಲ್‌ಗಳಲ್ಲಿ ರಾಸಾಯನಿಕ ಬಣ್ಣ, ಟೇಸ್ಟಿಂಗ್ ಪೌಡರ್ ಬಳಕೆ ವಿರುದ್ಧ NSUI ಆಕ್ರೋಶ
ಇವತ್ತಿನ ರಾಶಿಫಲ/Financial Gains and Business Luck
ಮೇಷ : ವಾಣಿಜ್ಯ ವ್ಯವಹಾರಗಳಲ್ಲಿ ಲಾಭದಾಯಕ ವಾತಾವರಣ, ಕೈಗೆತ್ತಿಕೊಂಡ ಪ್ರತಿಯೊಂದು ಕೆಲಸ ನಿರೀಕ್ಷಿತ ಯಶಸ್ಸನ್ನು ಕಾಣಲಿವೆ. ವೃತ್ತಿಜೀವನ ಮತ್ತು ಉದ್ಯೋಗದ ಸ್ಥಳದಲ್ಲಿ ಎದುರಿಸುತ್ತಿದ್ದ ಜಟಿಲ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲಿದ್ದಾರೆ. ಯಾವುದಾದರೂ ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಹಿತೈಷಿಗಳ ಮಾರ್ಗದರ್ಶನ ಪಡೆಯುವುದು ಯಶಸ್ಸಿನ ಹಾದಿಯನ್ನು ಸುಗಮಗೊಳಿಸುತ್ತದೆ. ತುರ್ತು ಸಂದರ್ಭದಲ್ಲಿ ಹಣಕಾಸಿನ ನೆರವು ದೊರೆಯಲಿದೆ.
ವೃಷಭ : ಮನಸ್ಸಿಗೆ ನೆಮ್ಮದಿ ಸಿಗುವಂತಹ ಘಟನೆಗಳು ಘಟಿಸಲಿವೆ. ವ್ಯಾಪಾರ ವೃದ್ಧಿಯಾಗಲಿವೆ. ಉದ್ಯೋಗಾಕಾಂಕ್ಷಿಗಳಿಗೆ ನೂತನ ಕೆಲಸ, ಕಚೇರಿಯಲ್ಲಿ ಗೌರವ ಮತ್ತು ಸ್ಥಾನಮಾನ ಹೆಚ್ಚಾಗಲಿವೆ. ಬಹಳ ದಿನಗಳಿಂದ ಸತಾಯಿಸುತ್ತಿದ್ದ ಸಮಸ್ಯೆ ಇಂದು ಬಗೆಹರಿಯಲಿದ್ದು, ಬೆಲೆಬಾಳುವ ವಸ್ತುಗಳನ್ನು ಖರೀದಿಸುವ ಸಾಧ್ಯತೆ,.
ಮಿಥುನ : ಈ ದಿನ ಸವಾಲಿನಿಂದ ಕೂಡಿದೆ, ಕೆಲಸದ ನಿಮಿತ್ತ ಅನಗತ್ಯವಾಗಿ ಅಲೆದಾಟ, ಮನೆಯಲ್ಲಿ ಮತ್ತು ಕೆಲಸದ ಸ್ಥಳದಲ್ಲಿ ಹೊಸ ರೀತಿಯ ಸಮಸ್ಯೆ, ಸಾಲದ ಹೊರೆ, ಹಣಕಾಸಿನ ವಿಚಾರದಲ್ಲಿ ಜಾಗರೂಕರಾಗಿರಬೇಕು. ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸುವುದು ಉತ್ತಮ.
ಕರ್ಕಾಟಕ : ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅವಶ್ಯಕವಾಗಿದ್ದು, ಅಸ್ಥಿರವಾದ ಆಲೋಚನೆಗಳು, ಕಾರ್ಯಕ್ಷೇತ್ರದಲ್ಲಿ ಹಿನ್ನಡೆ ಅನುಭವಿಸುವ ಸಂಭವವಿದೆ. ಕುಟುಂಬದ ಸದಸ್ಯರ ನಡುವೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಸ್ವಲ್ಪ ಮಟ್ಟದ ನೆಮ್ಮದಿ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಸಾಧಾರಣ

ಶಿವಮೊಗ್ಗ: ಕಾಂಗ್ರೆಸ್ ಪ್ರತಿಭಟನೆ ವೇಳೆ ಕಳ್ಳರ ಕೈಚಳಕ; ಮಹಿಳಾ ಎಎಸ್‌ಐ ಚಿನ್ನದ ಸರ ಕಳವು
ಸಿಂಹ : ವಿದ್ಯಾಭ್ಯಾಸದ ಪ್ರಗತಿಯಿಂದ ಸಂತಸದ ಸುದ್ಧಿ. ಉದ್ಯೋಗದಲ್ಲಿ ಇವರು ಹಂಬಲಿಸುತ್ತಿದ್ದ ಬಡ್ತಿ ಅಥವಾ ಪ್ರಗತಿ ಕಂಡುಬರಲಿದ್ದು, ಸಮಾಜದಲ್ಲಿ ಮನ್ನಣೆ ಸಿಗಲಿದೆ. ವ್ಯಾಪಾರ ವಿಸ್ತರಣೆಗೆ ಸ್ನೇಹಿತರಿಂದ ಸೂಕ್ತ ಹಣಕಾಸಿನ ಬೆಂಬಲ, ಅನಾರೋಗ್ಯ
ಕನ್ಯಾ : ಆರ್ಥಿಕ ವ್ಯವಹಾರಗಳಲ್ಲಿ ಇಂದು ಅದೃಷ್ಟ ಕೈಹಿಡಿಯಲಿದ್ದು, ಹಳೆಯ ಸ್ನೇಹಿತರಿಂದ ಶುಭ ಸಮಾಚಾರ ಸಿಗಲಿದೆ. ಉದ್ಯೋಗದ ಸ್ಥಳದಲ್ಲಿ ಮೇಲಧಿಕಾರಿಗಳಿಂದ ಮೆಚ್ಚುಗೆಯ ಮಾತು, ಹೊಸ ವಾಹನ ಖರೀದಿ. ವ್ಯಾಪಾರದಲ್ಲಿ ಧನಲಾಭ.
ತುಲಾ : ಖರ್ಚಿನ ಬಾಬ್ತು ಹೆಚ್ಚಾಗಲಿದ್ದು, ಕುಟುಂಬದ ಸದಸ್ಯರೊಂದಿಗೆ ಮಾತಿನ ಚಕಮಕಿ ನಡೆಯುವ ಸಾಧ್ಯತೆ ಇದೆ. ಕಚೇರಿಯಲ್ಲಿ ಅಧಿಕಾರಿಗಳ ಕೋಪಕ್ಕೆ ಗುರಿಯಾಗುವ ಸಂದರ್ಭ ಬರಬಹುದು.ವ್ಯಾಪಾರದಲ್ಲಿ ಸಾಮಾನ್ಯ ದಿನ, ಓಡಾಟ ಜಾಸ್ತಿ.

ವೃಶ್ಚಿಕ : ವ್ಯವಹಾರದಲ್ಲಿ ಪಾಲುದಾರರೊಂದಿಗೆ ಇದ್ದ ಕಿರಿಕಿರಿಗಳಿಂದ ಮುಕ್ತಿ ಹೊಂದಲಿದ್ದಾರೆ. ಕೆಲಸದ ಗಡಿಬಿಡಿಯಲ್ಲಿ ತಪ್ಪುಗಳಾಗದಂತೆ ನೋಡಿಕೊಳ್ಳುವುದು ಜಾಗ್ರತೆ ವಹಿಸಿ. ಕುಟುಂಬದವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ದಿನವಿಡಿ ಶ್ರಮದದಿನ, ಪ್ರಯಾಣದಲ್ಲಿ ಮೈಮರೆಯಬೇಡಿ.
(Financial Gains and Business Luck) ಧನು : ಆಕಸ್ಮಿಕವಾಗಿ ಹಣ ಕೈ ಸೇರುವ ಯೋಗವಿದ್ದು, ಕುಟುಂಬದವರ ಸಹಕಾರದಿಂದ ಬಾಕಿ ಉಳಿದಿದ್ದ ಕಠಿಣ ಕೆಲಸಗಳನ್ನು ಪೂರ್ಣಗೊಳಿಸಲಿದ್ದಾರೆ. ಹೊಸ ವ್ಯಕ್ತಿಗಳ ಪರಿಚಯ, ಬಂಧುಗಳಿಂದ ಆಶ್ಚರ್ಯಕರ ಸಂಗತಿ ತಿಳಿದು ಬರಲಿದೆ.
ಶಿವಮೊಗ್ಗದಲ್ಲಿ ಇವತ್ತು ಏನೆಲ್ಲಾ ನಡೆಯಿತು ಇ-ಪೇಪರ್ ಓದಿ
ಮಕರ: ಉದ್ಯೋಗದಲ್ಲಿ ವರ್ಗಾವಣೆಯಾಗುವ ಸೂಚನೆ, ಆದಾಯದ ಮೂಲ, ದೈವಿಕ ಕಾರ್ಯಗಳಲ್ಲಿ ಆಸಕ್ತಿ, ಮಾನಸಿಕ ಕ್ಲೇಶ, ಉಳಿದಂತೆ ದಿನ ಎಂಧಿನಂತೆ ಇರಲಿದೆ. ವ್ಯಾಪಾರ ವಹಿವಾಟಲ್ಲಿ ಸಾಧರಣ ದಿನ. ಉದ್ಯೋಗದಲ್ಲಿ ಕಾಮನ್ ಡೇ
ಕುಂಭ : ಶುಭ ಸಮಾರಂಭಗಳಲ್ಲಿ ಭಾಗವಹಿಸುವ ಅವಕಾಶ, ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಹೊಸ ಉದ್ಯೋಗದ ಹುಡುಕಾಟದಲ್ಲಿರುವವರಿಗೆ ಯಶಸ್ಸು, ವ್ಯಾಪಾರ ಮತ್ತು ಉದ್ಯೋಗದಲ್ಲಿ ಸಾಮಾನ್ಯ ದಿನ.

ಮೀನ : ಕೌಟುಂಬಿಕ ಸಮಸ್ಯೆ, ಶ್ರಮಕ್ಕೆ ತಕ್ಕ ಪ್ರತಿಫಲ. ದಿನವಿಡಿ ಓಡಾಟ ಜಾಸ್ತಿ, ವ್ಯಾಪಾರ ವ್ಯವಹಾರ ಮಂದಗತಿಯಲ್ಲಿ ಸಾಗಲಿವೆ. ಯಾವುದೇ ಕೆಲಸಗಳೂ ಸಹ ಕಠಿಣ ಶ್ರಮ ಪಡದೆ ಪೂರ್ಣಗೊಳ್ಳುವುದಿಲ್ಲ. ನಿರೀಕ್ಷಿಸದ ಮಾತುಗಳನ್ನು ಕೇಳಬೇಕಾದ ಸಂದರ್ಭ ಬರಬಹುದು.
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ,
ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಸಿಬ್ಬಂದಿಗಳಿಂದಲೇ ಆಪರೇಷನ್ ಮೊಬೈಲ್ ! ಸಿಕ್ತು 10 ಸಾವಿರ ಬಹುಮಾನ
ಶಿವಮೊಗ್ಗ ಪೊಲೀಸಪ್ಪನ ಕರ್ತವ್ಯ ನಿಷ್ಠೆ ಮೃತ ಮಹಿಳೆಯ ಚಿನ್ನ, ಹಣ ವಾರಸುದಾರರಿಗೆ ಹಸ್ತಾಂತರ Shimoga Police News Shivamogga Police Honesty Gold and Cash Returned to Family of Deceased Woman