ಶಿವಮೊಗ್ಗ : ದಾರವಾಡ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಯ ವೈದ್ಯ ವಿದ್ಯಾರ್ಥಿನಿ ಡಾಕ್ಟರ್ ಪ್ರಜ್ಞಾ ಪಾಳೆಗಾರ್ (24) ಆತ್ಮಹತ್ಯೆ ಹಲವು ಅನುಮಾನಗಳನ್ನು ಹುಟ್ಟಿಹಾಕಿದೆ. ಸೈಕಿಯಾಟ್ರಿಕ್ ಪಿಜಿ ವಿದ್ಯಾರ್ಥಾನಿಯಾಗಿದ್ದ ಪ್ರಜ್ಞಾ ಸಾವಿನ ಮನೆ ಕದತಟ್ಟಿದ ಅದೆಷ್ಟೋ ಮಂದಿಗೆ ಧೈರ್ಯ ತುಂಬಿ, ಹೊಸ ಬದುಕಿನ ದಾರಿ ತೋರಿಸಿದ್ದರು. ಇಂತಹ ಧೈರ್ಯವಂತೆ ಎದೆಗುಂದಿದ್ದಾರೂ ಎಲ್ಲಿ ಎಂಬ ಪ್ರಶ್ನೆ ಸಹಜವಾಗಿಯೇ ಮೂಡಿದೆ. ಪೋಷಕರನ್ನು ಕಂಗಾಲು ಮಾಡಿದೆ.

ಸಿಎಂ ಸಿದ್ದರಾಮಯ್ಯ ಬೆಸ್ಟ್ ಸಿಎಂ POST ನಲ್ಲಿ ಅವಹೇಳನ! ಶಿವಮೊಗ್ಗದಲ್ಲಿ ದಾಖಲಾಯ್ತು ಮತ್ತೊಂದು ಕಂಪ್ಲೆಂಟ್! ಏನಿದು
ಹೌದು ಶಿವಮೊಗ್ಗ ಮೂಲದ ಪ್ರಜ್ಞಾ ಧಾರಾವಾಡದ ಡಿಮಾನ್ಯ್ ನಲ್ಲಿ ಮೊದಲ ವರ್ಷದ ಸೈಕಿಯಾಟ್ರಿಕ್ ಪಿಜಿ ಮಾಡುತ್ತಿದ್ದರು. ಕಳೆದ ಹದಿನೈದು ದಿನಗಳ ಹಿಂದಷ್ಟೆ ಶಿವಮೊಗ್ಗಕ್ಕೆ ಬಂದಿದ್ದ ಪ್ರಜ್ಞಾ ಪೋಷಕರೊಂದಿಗೆ ಸಹಜವಾಗಿಯೇ ಚೆನ್ನಾಗಿ ಮಾತನಾಡಿಕೊಂಡಿದ್ದರು. 24-01-26 ರಂದು ಸ್ನೇಹಿತೆಯ ಅರತಕ್ಷತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಖುಷಿಯಾಗಿಯೇ ಇದ್ದರು. 25-01-26 ರ ರಾತ್ರಿ ಪ್ರಜ್ಞಾ ತಂದೆ ತಾಯಿ ಜೊತೆಗೆ ಧಾರವಾಡಕ್ಕೆ ವಾಪಸ್ಸಾಗಿದ್ದರು. ಮಗಳನ್ನು ಹಾಸ್ಟೆಲ್ ರೂಂ ಗೆ ಬಿಟ್ಟು ಪೋಷಕರು ಇನ್ನು ಶಿವಮೊಗ್ಗದ ಮನೆಯನ್ನು ತಲುಪಿಲ್ಲ.ಅಷ್ಟರಲ್ಲಾಗಲೇ ಪೋಷಕರಿಗೆ ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬರ ಸಿಡಿಲಿನಂತೆ ಅಪ್ಪಳಿಸಿದೆ. ತಕ್ಷಣ ಪೋಷಕರು ಧಾರವಾಡಕ್ಕೆ ಪುನಃ ತೆರಳಿದ್ದಾರೆ. ಹಾಸ್ಟೆಲ್ ರೂಂಗೆ ಹೋಗಿ ನೋಡಿದಾಗ ಮಗಳು ಪ್ಯಾನ್ ಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.
Dr. Pragya Palegar ವಿನಾ ಕಾರಣ ಆರೋಪ ಸಲ್ಲದು.
ಪ್ರಜ್ಞಾ ಗೆ ಎಂಬಿಬಿಎಸ್ ಓದುವುದೇ ಇಷ್ಟವಿರಲಿಲ್ಲ. ಪೋಷಕರ ಒತ್ತಡಕ್ಕೆ ಮಣಿದು ಪದವಿ ಮಾಡಿದಳು ಎಂಬ ಆರೋಪಗಳಿಗೆ ರೆಕ್ಕೆಪುಕ್ಕಗಳು ಹುಟ್ಟಿಕೊಂಡಿದೆ. ಆದರೆ ಪ್ರಜ್ಞಾ ಇಷ್ಟಪಟ್ಟೆ ವೈದ್ಯ ಪದವಿ ಓದಲು ನೀಟ್ ಪರೀಕ್ಷೆಯನ್ನು ಎರಡು ಬಾರಿ ಬರೆದಿದ್ದರು. ಶಿವಮೊಗ್ಗದ ಸಿಮ್ಸ್ ಮೆಡಿಕಲ್ ಕಾಲೇಜಿನಲ್ಲಿಯೇ ಮೆಡಿಕಲ್ ಪದವಿ ಮಾಡುವ ಉದ್ದೇಶದಿಂದ ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ್ದರು. ಅಂದುಕೊಂಡಂತೆ ಸಿಮ್ಸ್ ಮೆಡಿಕಲ್ ಕಾಲೇಜಿನಲ್ಲಿ ಸರ್ಕಾರಿ ಕೋಟಾದಲ್ಲಿ ಪ್ರೀ ಸೀಟ್ ಪಡೆದರು. ಪ್ರಜ್ಞಾಗೆ ಮೆಡಿಕಲ್ ಇಷ್ಟವಿಲ್ಲದಿದ್ದರೆ, ಇಷ್ಟೊಂದು ಶ್ರಮಪಟ್ಟು ಓದುವ ಉದ್ದೇಶವಾದ್ರೂ ಏನಿತ್ತು ಎಂಬ ಪ್ರಶ್ನೆ ಮೂಡುತ್ತದೆ. ಮೆಡಿಕಲ್ ನಲ್ಲಿ ಆಸಕ್ತಿ ಇದ್ದ ಕಾರಣಕ್ಕಾಗಿಯೇ ಪ್ರಜ್ಞಾ ಚೆನ್ನಾಗಿಯೇ ಓದಿ ಸೈಕಿಯಾಟ್ರಿಕ್ ನಲ್ಲಿ ಪಿಜಿ ಸೀಟ್ ಗಿಟ್ಟಿಸಿಕೊಂಡಿದ್ದರು. ಸೈಕಿಯಾಟ್ರಿಕ್ ನಲ್ಲಿ ಪಿಜಿ ಸೀಟ್ ಪಡೆಯುವುದು ಸಾಮಾನ್ಯದ ಕೆಲಸವೇನಲ್ಲ. ಆದರೆ ಪ್ರಜ್ಞಾ ಅನಾಯಾಸವಾಗಿ ಧಾರವಾಡದಲ್ಲಿ ಸರ್ಕಾರಿ ಪ್ರೀ ಸೀಟ್ ನಲ್ಲಿಯೇ ಪಿಜಿಗೆ ಸೇರಿದ್ದರು.
Dr. Pragya Palegar Ended Her Life in Dharwad


