ಶಿವಮೊಗ್ಗ : ಶಿವಮೊಗ್ಗ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ ಸಾಧನೆಯ ಹಾದಿಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದು, ರಾಜ್ಯದಲ್ಲಿಯೇ ನಬಾರ್ಡ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ ಎಂದು ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ತಿಳಿಸಿದರು.

ಬುಧವಾರ ಬ್ಯಾಂಕ್‌ನ 2026ನೇ ಸಾಲಿನ ಕ್ಯಾಲೆಂಡರ್ ಮತ್ತು ಡೈರಿ ಬಿಡುಗಡೆ ಮಾಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.ಬ್ಯಾಂಕ್ ಈಗಾಗಲೇ 36 ಶಾಖೆಗಳನ್ನು ಯಶಸ್ವಿಯಾಗಿ ನಡೆಸುತ್ತಿದ್ದು, ಮುಂಬರುವ ವರ್ಷದಲ್ಲಿ ಹೋಬಳಿ ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಇನ್ನೂ 14 ಹೊಸ ಶಾಖೆಗಳನ್ನು ತೆರೆಯಲು ನಿರ್ಧರಿಸಲಾಗಿದೆ. ನವುಲೆ, ಏರ್‌ಪೋರ್ಟ್, ಕಾಚಿನಕಟ್ಟೆ, ಹೊಳಕೂರು, ಆನ್ಹೇರಿ, ಮೇಗರವಳ್ಳಿ, ಕಟ್ಟೆಹಕ್ಲು, ದೇವಂಗಿ, ಆರಗ, ಬ್ಯಾಕೋಡು, ಕುಪ್ಪಗುಡ್ಡೆ, ಚಂದ್ರಗುತ್ತಿ, ಹಿತ್ತ ಮತ್ತು ನಿಟ್ಟೂರು ಪ್ರದೇಶಗಳಲ್ಲಿ ಹೊಸ ಶಾಖೆಗಳು ಆರಂಭವಾಗಲಿವೆ. ಇದರಿಂದ ಜಿಲ್ಲೆಯ ಸುಮಾರು 3.5 ಲಕ್ಷ ಗ್ರಾಹಕರಿಗೆ ಬ್ಯಾಂಕಿಂಗ್ ಸೇವೆ ಹತ್ತಿರವಾಗಲಿದೆ.
Shivamogga DCC Bank Offers Crop Loans in 24 Hours
ಡಿಜಿಟಲ್ ಕ್ರಾಂತಿಗೆ ಒತ್ತು ನೀಡುತ್ತಿರುವ ಡಿಸಿಸಿ ಬ್ಯಾಂಕ್, ಶೀಘ್ರದಲ್ಲೇ ‘ಫೋನ್ ಪೇ’ ಸೌಲಭ್ಯವನ್ನು ಗ್ರಾಹಕರಿಗೆ ಒದಗಿಸಲಿದೆ. ಈಗಾಗಲೇ ಎಟಿಎಂ. ನೆಫ್ಟ್ ಮತ್ತು ಆರ್.ಟಿ.ಜಿ.ಎಸ್ ಸೇವೆಗಳಿದ್ದರೂ, ಎಟಿಎಂ ಬಳಕೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಯುಪಿಐ ವ್ಯವಸ್ಥೆಗೆ ಹೆಚ್ಚಿನ ಪ್ರಾಮು ನೀಡಲಾಗುತ್ತಿದೆ. ಅಲ್ಲದೆ, ಜಿಲ್ಲೆಯ 33 ಸಾವಿರ ಹಾಲು ಉತ್ಪಾದಕರು ಇನ್ನು ಮುಂದೆ ಡಿಸಿಸಿ ಬ್ಯಾಂಕ್ ಶಾಖೆ ಮೂಲಕವೇ ವ್ಯವಹಾರ ನಡೆಸುವಂತೆ ಕ್ರಮ ಕೈಗೊಳ್ಳಲಾಗುವುದು. ಬರುವ ವರ್ಷದಿಂದ ರೈತರಿಗೆ ಒಟ್ಟು 1,300 ಕೊಟಿ ರೂ.ಗಳ ಬೆಳೆ ಸಾಲ ನೀಡಲು ತೀರ್ಮಾನಿಸಲಾಗಿ ಸ್ತ್ರೀಶಕ್ತಿ ಸಂಘಗಳ ಬಲವರ್ಧನೆಗೆ ಒತ್ತು ನೀಡಲಾಗುತ್ತಿ 3,488 ಸ್ವಸಹಾಯ ಗುಂಪುಗಳಿಗೆ 240 ಕೋಟಿ ಸಾಲ ನೀಡುವ ಗುರಿ ಇದೆ. “ರೈತರು ಅರ್ಜಿ ಸಲ್ಲಿ 24 ಗಂಟೆಯೊಳಗೆ ಸಾಲದ ಹಣ ವಿತರಿಸಲಾಗುವು ಎಂದು ಮಂಜುನಾಥ ಗೌಡ ಅವರು ಸ್ಪಷ್ಟನೆ ನೀಡಿದರು.

ಬ್ಯಾಂಕ್ ಸದ್ಯ 45 ಕೋಟಿ ರೂಪಾಯಿ ಲಾಭದ ನಿರೀಕ್ಷೆಯಲ್ಲಿದೆ. ಒಟ್ಟು 1720.88 ಕೋಟಿ ರೂಪಾಯಿ-ಠೇವಣಿ ಸಂಗ್ರಹವಾಗಿದ್ದು, ಬ್ಯಾಂಕ್ ಅತ್ಯಂತ ಸುಭದ್ರವಾ 2028ರಲ್ಲಿ ಬ್ಯಾಂಕ್‌ನ ವಜ್ರ ಮಹೋತ್ಸವವನ್ನು ಅದ್ಧೂರಿಂದ ಆಚರಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
DCC Bank Offers Crop Loans in 24 Hours