ಶಿವಮೊಗ್ಗ : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ರಾಜ್ಯದ ಸುಮಾರು 6 ಲಕ್ಷ ಸರ್ಕಾರಿ ನೌಕರರಿಗೆ 2026ನೇ ಸಾಲಿನ ಆಕರ್ಷಕ ಕ್ಯಾಲೆಂಡರ್‌ಗಳನ್ನು ಉಚಿತವಾಗಿ ವಿತರಿಸಲಾಗುವುದು ಎಂದು ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು ತಿಳಿಸಿದರು.

ಶಿವಮೊಗ್ಗದ ಪತ್ರಿಕಾ ಭವನದಲ್ಲಿ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸಂಘದ ಇತಿಹಾಸದಲ್ಲಿಯೇ ಇದೊಂದು ದಾಖಲೆಯ ಯೋಜನೆಯಾಗಿದೆ. ಈ ಹಿಂದೆ ನಾನು ಸಂಘದ ಚುನಾವಣಾ ಸಂದರ್ಭದಲ್ಲಿ ಎಲ್ಲಾ ನೌಕರರಿಗೆ ಉಚಿತ ಕ್ಯಾಲೆಂಡರ್ ನೀಡುತ್ತೇನೆ ಎಂದು ಪ್ರನಾಳಿಕೆಯಲ್ಲಿ ಅದರಂತೆ ಉತ್ತಮ ಗುಣಮಟ್ಟದ ಕ್ಯಾಲೆಂಡರ್ ನೀಡಲಾಗುತ್ತಿದೆ.
ಗುಣಮಟ್ಟದ ಕ್ಯಾಲೆಂಡರ್‌ಗಳನ್ನು ಸತತ ಎರಡನೇ ವರ್ಷವೂ ನೌಕರರಿಗೆ ಉಚಿತವಾಗಿ ವಿತರಿಸಲಾಗುತ್ತಿದ್ದು, ದೇಶದ ಯಾವುದೇ ರಾಜ್ಯದ ನೌಕರರ ಸಂಘವು ಈ ಪ್ರಮಾಣದಲ್ಲಿ ಉಚಿತವಾಗಿ ಕ್ಯಾಲೆಂಡರ್ ನೀಡುತ್ತಿರುವುದು ಇದೇ ಮೊದಲು ಎಂಬ ಹೆಗ್ಗಳಿಕೆಗೆ ನಮ್ಮ ಸಂಘ ಪಾತ್ರವಾಗಿದೆ. ಶೀಘ್ರದಲ್ಲೇ ರಾಜ್ಯದ ಮೂಲೆ ಮೂಲೆಗಳಲ್ಲಿರುವ ಎಲ್ಲಾ ಸರ್ಕಾರಿ ನೌಕರರಿಗೂ ಈ ಕ್ಯಾಲೆಂಡರ್ ತಲುಪಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸಂಘದ ವಿವಿಧ ಪದಾಧಿಕಾರಿಗಳು ಹಾಗೂ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.