crime news : ಹೊಳೆಹೊನ್ನೂರು ಹೇಮಣ್ಣನ ಕೊಲೆ ಆರೋಪಿಗೆ ಗುಂಡು

crime news : ಹೊಳೆಹೊನ್ನೂರು ಕೊಪ್ಪದಲ್ಲಿ ಬೆಳಿಗ್ಗೆ ವಾಕಿಂಗ್​ ಹೋಗುತ್ತಿದ್ದ ವ್ಯಕ್ತಿಯನ್ನು ಕೊಲೆ ಮಾಡಿದ  ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯ ಮೇಲೆ ಪೊಲೀಸರು ಗುಂಡು ಹೊಡೆದಿದ್ದಾರೆ 

crime news : ಏನಿದು ಪ್ರಕರಣ

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಹೊಳೆಹೊನ್ನೂರು ಕೊಪ್ಪದಲ್ಲಿ ಮೇ 09 ರಂದು ಹೇಮಣ್ಣ ಎಂಬುವವರ ಕತ್ತು ಸೀಳಿ ಕೊಲೆಮಾಡಲಾಗಿತ್ತು. ಈ ಹಿನ್ನಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯ ಪತ್ತೆಗೆ ತಂಡ ರಚಿಸಿ ಕಾರ್ಯಾಚರಣೆ ನಡೆಸಿದ್ದರು. ಇಂದು ಆ ಪ್ರಕರಣದಲ್ಲಿ ಭಾಗಿಯಾಗಿದ್ದ ಮಂಜ ಎಂಬ ಆರೋಪಿಯ ಇರುವಿಕೆಯನ್ನು ತಿಳಿದುಕೊಂಡ ಪೊಲೀಸರು ಆತನನ್ನು ಹಿಡಿಯಲು ಯತ್ನಿಸಿದ್ದಾರೆ. ಆಗ ಆತ ಪೊಲೀಸ್​ ಸಿಬ್ಬಂಧಿಯಾದ ಹರೀಶ್​ ಎಂಬುವವರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆಗ ಪೊಲೀಸರು ತಮ್ಮ ಆತ್ಮ ರಕ್ಷಣೆಗಾಗಿ ಆತನ ಮೇಲೆ ಗುಂಡು ಹಾರಿಸಿದ್ದಾರೆ. ಬಳಿಕ ಹಿಡಿದು ಆಸ್ಪತ್ರೆಗೆ ದಾಖಲಿಸಿದ್ದಾರೆ. 

Leave a Comment

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು