SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 10, 2024
ಶಿವಮೊಗ್ಗದ ಎಚ್ಚರಿಕೆ ಪತ್ರಿಕೆ ಸಂಪಾದಕ ವೈಕೆ ಸೂರ್ಯನಾರಾಯಣ್ ಮತ್ತು ಹನಸವಾಡಿ ಸರ್ಕಾರಿ ಶಿಕ್ಷಕಿ ಡಿ. ವತ್ಸಲರವರ ಪುತ್ರ ವೈ,ಎಸ್ ಅನಿಕೇತನ್ Common Law Admission Test (ಕ್ಲಾಟ್) ನಲ್ಲಿ ಅಖಿಲ ಭಾರತ ಮಟ್ಟದಲ್ಲಿ 84 ನೇ ಶ್ರೇಯಾಂಕದಲ್ಲಿ ತೇರ್ಗಡೆಯಾಗಿದ್ದು, ರಾಜ್ಯಮಟ್ಟದಲ್ಲಿ 7 ನೇ ರ್ಯಾಂಕ್ ಪಡೆದು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ದೇಶಾದ್ಯಂತದ ಸುಮಾರು 70 ಸಾವಿರಕ್ಕೂ ಹೆಚ್ಚು ಮತ್ತು ಕರ್ನಾಟಕದ 7 ಸಾವಿರ ವಿದ್ಯಾರ್ಥಿಗಳು ಈ ಪರೀಕ್ಷೆ ಬರೆದಿದ್ದರು. ಈ ಪೈಕಿ ಅನಿಕೇತನ್ ಉತ್ತಮ ಸಾಧನೆ ಮೂಲಕ ಬೆಂಗಳೂರಿನಲ್ಲಿರುವ ಪ್ರತಿಷ್ಠಿತ ರಾಷ್ಟ್ರೀಯ ಕಾನೂನು ಕಾಲೇಜು ಸೇರಿದಂತೆ ದೇಶದ ಯಾವುದೇ ಪ್ರತಿಷ್ಠಿತ ಕಾಲೇಜಿನಲ್ಲಿ ಸುಲಭವಾಗಿ ಪ್ರವೇಶ ಪಡೆದು ಕಾನೂನು ಪದವಿ ಓದಬಹುದಾಗಿದೆ.
ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ( ಕ್ಲಾಟ್ )ನಲ್ಲಿ ಅನಿಕೇತನ್ ಮಾಡಿರುವ ಈ ಸಾಧನೆ ಮಲೆನಾಡು ಮಾತ್ರವಲ್ಲದೆ ಮಧ್ಯ ಕರ್ನಾಟಕದಲ್ಲಿಯೇ ಇದು ಪ್ರಥಮ ಎಂದೇ ಹೇಳಲಾಗುತ್ತಿದೆ. ಕಾನೂನು ಪದವಿ ಓದಲು ಬಯಸಿದ ಸಾಕಷ್ಟು ಮಂದಿ ವಿದ್ಯಾರ್ಥಿಗಳು ಈ ಭಾಗದಿಂದ ಕ್ಲಾಟ್ ಪರೀಕ್ಷೆ ತೆಗೆದುಕೊಂಡಿದ್ದರೂ, ಇಷ್ಟು ಅಂಕಗಳೊಂದಿಗೆ ಇಂತಹ ಸಾಧನೆ ಮಾಡಿರಲಿಲ್ಲ. ಆದರೆ ಅನಿಕೇತನ್ ತನ್ನ ಓದು ಮತ್ತು ಶ್ರದ್ದೆಯೊಂದಿಗೆ ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಶಿವಮೊಗ್ಗದ ಅನೇಕ ಮಂದಿ ವಕೀಲರು ಅಭಿಪ್ರಾಯಪಟ್ಟಿದ್ದಾರೆ.
ಆತ ಇಷ್ಟು ಪ್ರಮಾಣದಲ್ಲಿ ಅಂಕ ಪಡೆಯುತ್ತಾನೆನ್ನುವ ನಿರೀಕ್ಷೆ ಇರಲಿಲ್ಲ. ಆದರೆ ಆತ ಮಾತ್ರ ಹೆಚ್ಚಿನ ಅಂಕ ಪಡೆಯುವುದಾಗಿ ಹೇಳುತ್ತಿದ್ದ, ಆತನಿಗೆ ಆ ನಂಬಿಕೆ, ವಿಶ್ವಾಸವಿತ್ತು. ಆನಿಟ್ಟಿನಲ್ಲಿಯೇ ಶ್ರದ್ದೆ ಮತ್ತು ಬದ್ದತೆಯಿಂದ ಪರೀಕ್ಷೆಗೆ ಸಿದ್ದತೆ ನಡೆಸಿದ್ದ. ಅದರ ಪ್ರತಿಫಲ ಎನ್ನುವ ಹಾಗೆ ಈಗ ಕರ್ನಾಟಕಕ್ಕೆ ಆತನ 7ನೇ ರಾಂಕ್ ನಲ್ಲಿ ಪಾಸಾಗಿರುವುದು ನಿಜಕ್ಕೂ ಖುಷಿ ತಂದಿದೆ ಎಂದು ಅನಿಕೇತ್ ರ ತಾಯಿ ಡಿ. ವತ್ಸಲ, ಸಂತಸ ವ್ಯಕ್ತಪಡಿಸಿದರು.
ಅನಿಕೇತನ್ ಸಾಧನೆಗೆ ಅನೇಕ ಗಣ್ಯರಿಂದ ಶ್ಲಾಘನೆ
ಅನಿಕೇತನ್ ಸಾಧನೆಗೆ ಶಿವಮೊಗ್ಗ ಪ್ರೆಸ್ ಟ್ರಸ್ಟ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಸೇರಿದಂತೆ ಅನೇಕ ಗಣ್ಯರು ಶ್ಲಾಘನೆ ವ್ಯಕ್ತಪಡಿಸಿದರು
ಅನಿಕೇತನ್ ಸುಪ್ರೀಂ ಕೋರ್ಟ್ ನ ವಕೀಲರಾಗಲಿ | ಮಾಜಿ ಡಿಸಿಎಂ ಈಶ್ವರಪ್ಪ
ಅನಿಕೇತನ್ ರ ಸಾಧನೆಗೆ ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅನಿಕೇತನ್ ಮುಂದೆ ಸುಪ್ರೀಂ ಕೋರ್ಟ್ ನ ವಕೀಲರಾಗಲಿ ಎಂಬುದು ನನ್ನ ಆಶಯ ಎಂದು ಇಂಗಿತ ವ್ಯಕ್ತಪಡಿಸಿದರು.
SUMMARY | YS Aniketan has secured 84th rank at the all-India level in the Common Law Entrance Test (CLAT) and has excelled at the state level by securing 7th rank.
KEYWORDS | YS Aniketan, Common Law Entrance Test, 84th rank, kannadanews,