ಟಾಕ್ಸಿಕ್​ ಚಿತ್ರದ ವಿರುದ್ದ ನ್ಯಾಷನಲ್​ ಕ್ರಿಸ್ಟಿಯನ್​ ಫೆಡರೇಷನ್​ ದೂರು, ಕಾರಣವೇನು

ರಾಕಿಂಗ್​ ಸ್ಟಾರ್​​ ಯಶ್​ ಅಭಿನಯದ ಟಾಕ್ಸಿಕ್​ ಚಿತ್ರ ಬಿಡುಗಡೆಗೆ ಇನ್ನೇನು ಕೆಲವೇ ದಿನಗಳಷ್ಟೇ ಬಾಕಿ ಇದ್ದು, ಇದರ ನಡುವೆ ಚಿತ್ರತಂಡಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ. ಅದೇನೆಂದರೆ ಟಾಕ್ಸಿಕ್​ ಚಿತ್ರದ ವಿರುದ್ದ ನ್ಯಾಷನಲ್​ ಕ್ರಿಸ್ಟಿಯನ್​ ಫೆಡರೇಷನ್​ ದೂರನ್ನು ದಾಖಲು ಮಾಡಿದೆ.

SUNCONTROL_FINAL-scaled

ಹೌದು  ನ್ಯಾಷನಲ್​ ಕ್ರಿಸ್ಟಿಯನ್​ ಫೆಡರೇಷನ್​ ಹೇಳಿರುವಂತೆ. ಸಿನಿಮಾದ ದೃಶ್ಯಗಳಲ್ಲಿ ಕ್ರೈಸ್ತರಿಗೆ ಮುಜುಗರ ಹಾಗೂ ಧರ್ಮಕ್ಕೆ ಅಪಮಾನವಾಗಿದೆ. ಹಾಗೆಯೇ  ಸಿನಿಮಾದಲ್ಲಿ ದೇವದೂತ ಸಂತ ಮಿಕಯೇಲ್​ಗೆ ಅಪಮಾನ ಮಾಡಲಾಗಿದೆ. ದೇವದೂತರ ಮುಂದೆ ಅಶ್ಲೀಲ ಚಿತ್ರಗಳನ್ನು ಚಿತ್ರತಂಡ ಚಿತ್ರೀಕರಿಸಿದ್ದಾರೆ. ಹಾಗಾಗಿ  ಯೂಟ್ಯೂಬ್ ಪೋಸ್ಟ್ ತೆಗೆಯಬೇಕು, ದೃಶ್ಯಗಳನ್ನ ತೆಗೆಯಬೇಕು ಎಂದು ದೂರಿನಲ್ಲಿ ಕೋರಲಾಗಿದೆ. ಕ್ರೈಸ್ತರ ಒಕ್ಕೂಟ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ದಾಖಲು ಮಾಡಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹಸಚಿವರು, ಸೆನ್ಸರ್ ಬೋರ್ಡ್​​ಗೂ ದೂರು ನೀಡಲಾಗಿದ್ದು, ಈ ವಿಚಾರವಾಗಿ ಚಿತ್ರತಂಡ ಕ್ಷಮೆ ಕೇಳಬೇಕು ಎಂದು ಒತ್ತಾಯ ಮಾಡಲಾಗಿದೆ. ಅಲ್ಲದೆ, ಸಿನಿಮಾ ವಿರುದ್ದ ಕಾನೂನು ಹೋರಾಟದ ಎಚ್ಚರಿಕೆ ನೀಡಲಾಗಿದೆ.

Christian Federation Complaint Against toxic movie

Christian Federation Complaint Against toxic movie
Christian Federation Complaint Against toxic movie
shivamogga car decor sun control house
shivamogga car decor sun control house
SUNCONTROL_FINAL-scaled
ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು