MALENADUTODAY.COM | SHIVAMOGGA NEWS
ಶಿವಮೊಗ್ಗ ನಗರದ ವ್ಯಾಪ್ತಿಯಲ್ಲಿ ಎರಡು ಕಡೆಗಳಲ್ಲಿ ಕಳ್ಳತನವಾಗಿದೆ. ವಿನೋಬನನಗರ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಮಾಲೋಚನ ಅಧಿಕಾರಿಯ ಮನೆಯಲ್ಲಿಯೆ ಕಳ್ಳತನವಾಗಿದೆ.
ಇಲ್ಲಿನ ನಿವಾಸಿಯಾಗಿರುವ ನಾಗರತ್ನ ಎಂಬವರು ತವರಿಗೆ ಹೋಗಿದ್ದರು, ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರಲ್ಲಿರುವ ಮನೆಗೆ ಹೋಗಿ ವಾಪಸ್ ಬಂದ ವೇಳೆಯಲ್ಲಿ ಕಳ್ಳತನ ನಡೆದಿರುವುದು ಗೊತ್ತಾಗಿದೆ. ಮನೆಯ ಬೀಗ ಒಡೆದು ಕಳ್ಳತನ ಮಾಡಿರುವ ಕಳ್ಳರು 5,45,200 ರೂ. ಮೌಲ್ಯದ ಚಿನ್ನಾಭರಣ ಹಾಗೂ ಕ್ಯಾಶ್ ಕದ್ದಿದ್ದಾರೆ.
ಇನ್ನೂ ಇತ್ತ ಬೊಮ್ಮನಕಟ್ಟೆಯ ಇ ಬ್ಲಾಕ್ ನಲ್ಲಿರುವ ಫಜಲ್ ಉನ್ನೀಸಾ ಎಂಬ ಟೈಲರ್ ಮನೆಯಲ್ಲಿ ಕಳ್ಳತನ ನಡೆದಿದೆ. ಆರ್ ಎಂ ಎಲ್ ನಗರದಲ್ಲಿರುವ ಅಣ್ಣನ ಮನೆಗೆ ಹೋದಾಗ ಮನೆಯ ಬಾಗಿಲು ಒಡೆದು ನಾಲ್ಕು ಸಾವಿರ ರೂ ನಗದು ಕಳುವಾಗಿದೆ ಎಂದು ದೂರು ದಾಖಲಾಗಿದೆ.
ಬೈಕ್ನಲ್ಲಿ ಹೋಗುವಾಗ ಸೀರೆ ಜಾಗ್ರತೆ! ನೆರಿಗೆ ಚಕ್ರಕ್ಕೆ ಸಿಲುಕಿ ಏನಾಯ್ತು ನೋಡಿ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
