bs yediyurappa and ks eshwarappa : ಒಂದೇ ವೇದಿಕೆಯಲ್ಲಿ ಮಾಜಿ ಗೆಳೆಯರು!

Malenadu Today

bs yediyurappa and ks eshwarappa ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಹಾಗೂ ಮಾಜಿ ಡಿಸಿಎಂ ಕೆಎಸ್​ ಈಶ್ವರಪ್ಪನವರು ಪರಸ್ಪರ ಮುಖಾಮುಖಿಯಾಗಿ ಮಾತನಾಡದೇ ವರುಷಗಳೇ ಕಳೆದಿದೆ. ಈ ನಡುವೆ ನಿನ್ನೆ ದಿನ ನಡೆದ ಕಾರ್ಯಕ್ರಮವೊಂದರಲ್ಲಿ ಇಬ್ಬರು ನಾಯಕರು ಒಂದೇ ವೇದಿಕೆಯಲ್ಲಿ ಕಾಣಿಸಿದರಷ್ಟೆ ಅಲ್ಲದೆ, ಅಕ್ಕಪಕ್ಕದಲ್ಲಿಯೇ ನಿಂತಿದ್ದರು. ಆದರೆ ಪರಸ್ಪರ ಮಾತನಾಡಲಿಲ್ಲ. 

bs yediyurappa and ks eshwarappa

ಕಳೆದ ಲೋಕಸಭೆ ಚುನಾವಣೆ ಬಳಿಕ ಇದೇ ಮೊದಲ ಬಾರಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪರವರು ಕುವೆಂಪು ರಂಗಮಂದಿರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಸ್ವಯಂ ಸೇವಕ ದಿವಂಗತ ಹಿರಿಯೂರು ಕೃಷ್ಣಮೂರ್ತಿ ಅವರ ಸಂಸ್ಮರಣಾ ಗ್ರಂಥ ‘ಕೃಷ್ಣ ಸ್ಮೃತಿ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಒಂದೇ ಪ್ರೇಮ್​ನಲ್ಲಿ ಕಾಣಿಸಿಕೊಂಡರು.  ಕಾರ್ಯಕ್ರಮದ ಉದ್ಘಾಟನೆಯ ವೇಳೆಯಲ್ಲಿ ಅಕ್ಕಪಕ್ಕದಲ್ಲಿ ನಿಂತು ಭಾರತ ಮಾತೆಗೆ ಪುಷ್ಪನಮನ ಸಲ್ಲಿಸಿದ ನಾಯಕರು ಆನಂತರ ಆರ್​ಎಸ್​ಎಸ್​ ಮುಖಂಡ ದತ್ತಾತ್ರೆಯ ಹೊಸಬಾಳೆಯವರ ಅಕ್ಕಪಕ್ಕ ಕುಳಿತಿದ್ದರು. ಆದರೆ ಕಾರ್ಯಕ್ರಮದುದ್ದಕ್ಕೂ ಪರಸ್ಪರ ಮಾತನಾಡಲಿಲ್ಲ. ಈ ನಡುವೆ ಕೆಎಸ್​ ಈಶ್ವರಪ್ಪನವರು ತಮ್ಮ ಭಾಷಣದಲ್ಲಿ ಮಾಜಿ ಸಿಎಂರ ಹೆಸರನ್ನು ಪ್ರಸ್ತಾಪಿಸಿ ಹಳೆಯ ಘಟನೆಯನ್ನು ನೆನಪಿಸಿಕೊಂಡರು. 

Share This Article