ಪ್ರಿಯಕರನೇ ಆಯೋಜಿಸಿದ್ದ ಹುಟ್ಟುಹಬ್ಬದ ಕೇಕ್​ ಇನ್ನೊಬ್ಬನಿಗೆ ತಿನ್ನಿಸಿದ ಹುಡುಗಿ! ಹರ್ಟ್ ಆಗಿ ಎಂತೆಲ್ಲಾ ಆಯ್ತು ಓದಿ

ಶಿವಮೊಗ್ಗ :  ಪ್ರೀತಿಯಲ್ಲಿ ಕೆಲವೊಮ್ಮೆ ಸಣ್ಣತಪ್ಪು ಕೂಡ ದೊಡ್ಡ ಪ್ರಮಾದಕ್ಕೆ ಎಡೆಮಾಡಿಕೊಡುತ್ತೆ! ಇದಕ್ಕೆ ಸಾಕ್ಷಿ ಎಂಬಂತಹ ಘಟನೆಯೊಂದರ ದೃಶ್ಯ ಇದೀಗ ವೈರಲ್ಆಗಿದ್ದು, ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಹರಿದಾಡುತ್ತಿದೆ. 

 ಟ್ರೇಡಿಂಗ್​ ಹೆಸರಿನಲ್ಲಿ ಶಿವಮೊಗ್ಗದ ವ್ಯಕ್ತಿಗೆ 4 ಲಕ್ಷ ವಂಚನೆ : ಹೀಗೂ ಯಾಮಾರಿಸ್ತಾರೆ ಹುಷಾರ್​

ಪ್ರೇಮಿಗಳ ನಡುವಿನ ಸಣ್ಣ ಮುನಿಸು ಅತಿರೇಕಕ್ಕೆ ಹೋಗಿ ಹುಟ್ಟುಹಬ್ಬದ ಸಂಭ್ರಮವು ಜಗಳದ ಅಖಾಡವಾಗಿ ಮಾರ್ಪಟ್ಟ ವಿಡಿಯೋ ಇದಾಗಿದ್ದು, ಈ ವಿಡಿಯೋದಲ್ಲಿ ಪ್ರಿಯತಮೆಯ ಜನ್ಮದಿನವನ್ನು Girlfriend Birthday ಯುವಕನೊಬ್ಬ ಅದ್ದೂರಿಯಾಗಿ ಆಚರಿಸಿದ್ದ. ಅದಕ್ಕಾಗಿ ಸಕಲ ಸಿದ್ಧತೆ ಮಾಡಿ, ಡೆಕೋರೇಶನ್​ ಮಾಡಿಸಿದ್ದ ಯುವಕ, ತನ್ನೆಲ್ಲಾ ಕನಸುಗಳನ್ನು ಆಕೆ ಎದುರು ತೋಡಿಕೊಳ್ಳುವ ಆಸೆಯಲ್ಲಿದ್ದ. ಆದರೆ ಅಲ್ಲೊಂದು ಸಣ್ಣ ಮಿಸ್ಟೇಕ್ ಆಗೋಯ್ತು.. 

ಪ್ರಿಯತಮೆಯ ಬರ್ತ್‌ಡೇ ಪಾರ್ಟಿಯಲ್ಲಿ ಪ್ರಿಯಕರನ ರಂಪಾಟ ಕೇಕ್ ವಿಚಾರಕ್ಕೆ ಗಲಾಟೆ Boyfriend Creates Ruckus at Girlfriend Birthday Party Over Cake Piece
ಪ್ರಿಯತಮೆಯ ಬರ್ತ್‌ಡೇ ಪಾರ್ಟಿಯಲ್ಲಿ ಪ್ರಿಯಕರನ ರಂಪಾಟ ಕೇಕ್ ವಿಚಾರಕ್ಕೆ ಗಲಾಟೆ Boyfriend Creates Ruckus at Girlfriend Birthday Party Over Cake Piece

ಯುವತಿಯ ಹುಟ್ಟುಹಬ್ಬದ ನಿಮಿತ್ತ ಪ್ರಿಯಕರ ಆಯೋಜಿಸಿದ್ದ ಪಾರ್ಟಿಯಲ್ಲಿ ಇವರಿಬ್ಬರ ಸ್ನೇಹತರು ಹಾಜರಿದ್ದರು. ಎಲ್ಲವೂ ಖುಷಿಯಾಗಿಯೇ ನಡೆದಿತ್ತು. ಯುವಕ ಯುವತಿ ಸಂಭ್ರಮದಲ್ಲಿದ್ದರು. ಹುಟ್ಟುಹಬ್ಬದ ಪಾರ್ಟಿಗೆ ಅರೆಂಜ್ ಮಾಡಿದ್ದ ವಿಶೇಷ ಕೇಕ್​ನ್ನ ಯುವತಿಯು ಖುಷಿಯಿಂದಲೇ ಕತ್ತರಿಸಿದಳು. ಆದರೆ, ಕತ್ತರಿಸಿದ ಕೇಕ್​ನ ಮೊದಲ ತುಂಡನ್ನ ಪ್ರಿಯಕರಿಗೆ ತಿನ್ನಿಸುವುದರ ಬದಲು, ಅಲ್ಲಿಯೇ ನಿಂತಿದ್ದ ಇನ್ನೊಬ್ಬ ಯುವಕನಿಗೆ ತಿನ್ನಿಸಿದ್ದಾಳೆ.

ಮರವೇರಿದ ಹೆಬ್ಬಾವು! ಮಲ್ನಾಡ್​ನ ವಿಡಿಯೋ ಆಗ್ತಿದೆ ವೈರಲ್​! ನಡೆದಿದ್ದೆಲ್ಲಿ ಗೊತ್ತಾ 

ತನ್ನ ಹುಡುಗಿಗೆ ತಾನೇ ಅರೆಂಜ್ ಮಾಡಿದ ಗ್ರಾಂಡ್ ಬರ್ತಡೆ ಪಾರ್ಟಿಯಲ್ಲಿ, ತನಗೆ ತಿನ್ನಿಸಬೇಕಾದ ಕೇಕ್ ಪೀಸ್ ನ್ನ ಇನ್ನೊಬ್ಬಾತನಿಗೆ ತಿನ್ನಿಸುವುದನ್ನ ನೋಡಲಾಗದೆ ಯುವಕ, ಮರುಕ್ಷಣವೇ ತಾನೆ ಆಯೋಜಿಸಿದ್ದ ಪಾರ್ಟಿಯಲ್ಲಿ ರುದ್ರ ನರ್ತನ ಮಾಡಿದ್ದಾನೆ. ದಕ್ಷ ಯಜ್ಞವನ್ನು ಧ್ವಂಸ ಮಾಡಿದ ಹಾಗೆ ತಾನೇ ಆಸೆಪಟ್ಟು ಮಾಡಿದ್ದ ಹುಟ್ಟುಹಬ್ಬದ ಸಿಂಗಾರವನ್ನೆಲ್ಲಾ ಬೀಳಿಸಿ, ಕೇಕ್​ನ್ನ ಆಕೆ ತಿನ್ನಿಸಿದ ಯುವಕನ ಮುಖಕ್ಕೆ ಎರಚಿದ್ದಾನೆ. ತನ್ನನ್ನ ಸಮಾಧಾನ ಮಾಡಲು ಬಂದ ಹುಡುಗಿಯನ್ನು ಸಹ ತಳ್ಳಾಡಿ ದೂರ ತಳ್ಳಿದ್ದಾನೆ. ಈ ಹಠಾತ್ ಬೆಳವಣಿಗೆಯಿಂದ ಪಾರ್ಟಿಗೆ ಬಂದಿದ್ದ ಅತಿಥಿಗಳು ಮತ್ತು ಸ್ನೇಹಿತರು ಅಲ್ಲಿಂದ ಕಾಲ್ಕಿತ್ತಿದ್ದರು. ಸದ್ಯ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. 

Boyfriend Creates Ruckus at Girlfriend Birthday Party Over Cake Piece
Boyfriend Creates Ruckus at Girlfriend Birthday Party Over Cake Piece

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ, 

ಪ್ರಿಯತಮೆಯ ಬರ್ತ್‌ಡೇ ಪಾರ್ಟಿಯಲ್ಲಿ ಪ್ರಿಯಕರನ ರಂಪಾಟ ಕೇಕ್ ವಿಚಾರಕ್ಕೆ ಗಲಾಟೆ Boyfriend Creates Ruckus at Girlfriend Birthday Party Over Cake Piece
ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು