bike theft case : ಒಂದು ಪ್ರಕರಣದಿಂದ ಬಯಲಾಯ್ತು 4 ಕೇಸ್‌ಗಳು : ಕಳ್ಳ ಅಂದರ್
ಭದ್ರಾವತಿ : ಭದ್ರಾವತಿ ಟೌನ್‌ನ ಬಿ.ಹೆಚ್. ರಸ್ತೆಯಲ್ಲಿ ಕಳೆದ ಜೂನ್ 9ರಂದು ಕಳುವಾಗಿದ್ದ ಬಜಾಜ್ ಡಿಸ್ಕವರ್ ಬೈಕನ್ನು ಪತ್ತೆ ಹಚ್ಚುವಲ್ಲಿ ನ್ಯೂಟೌನ್ ಪೊಲೀಸರು ಯಶಸ್ವಿಯಾಗಿದ್ದಾರೆ. ಭದ್ರಾವತಿ ಹೊಸಮನೆ ನಿವಾಸಿ ಹರ್ಷ (19) ನನ್ನು ಬಂಧಿತ ಆರೋಪಿಯಾಗಿದ್ದಾನೆ.
ಸುರೇಶ್ ಎಂಬುವವರು ಜೂನ್ 9, 2025 ರಂದು ಬಿ.ಹೆಚ್. ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ತಮ್ಮ ಬೈಕ್ ಕಳುವಾಗಿದೆ ಎಂದು ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ತಕ್ಷಣ ಕಳ್ಳರ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಿ ಕಾರ್ಯಾಚರಣೆ ಕೈಗೊಂಡಿದ್ದರು.
ಪೊಲೀಸರ ಕಾರ್ಯಾಚರಣೆಯ ಪರಿಣಾಮವಾಗಿ, ಬೈಕ್ ಕಳ್ಳತನದ ಆರೋಪಿ ಹರ್ಷ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಈ ವೇಳೆ ಪೊಲೀಸರು ಆರೋಪಿ ಹರ್ಷನಿಂದ ತಾನು ವಿವಿಧ ಕಡೆಗಳಿಂದ ಕದ್ದಿದ್ದ ನಾಲ್ಕು ಬೈಕ್‌ಗಳು ಮತ್ತು ಕಳ್ಳತನಕ್ಕೆ ಬಳಸಿದ್ದ ಒಂದು ಬೈಕ್ ಸೇರಿದಂತೆ ಒಟ್ಟು 2.40 ಲಕ್ಷ ರೂಪಾಯಿ ಮೌಲ್ಯದ ಐದು ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

