ಮಲೆನಾಡು ಟುಡೆ ಸುದ್ದಿ, ಭದ್ರಾವತಿ, ಸೆಪ್ಟೆಂಬರ್ 4 2025 : ಶಿವಮೊಗ್ಗ ಜಿಲ್ಲೆಯ ಪ್ರಮುಖ ಗಣಪತಿಗಳಲ್ಲಿ ಒಂದಾದ ಭದ್ರಾವತಿ ತಾಲ್ಲುಕು ಭದ್ರಾವತಿ ನಗರದ ಹೊಸಮನೆ ಹಿಂದೂ ಮಹಾಸಭಾ ಮತ್ತು ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿಯಿಂದ ಪ್ರತಿಷ್ಠಾಪಿಸಲಾಗಿದ್ದ 53ನೇ ವರ್ಷದ ವಿನಾಯಕ ಮೂರ್ತಿ ವಿಸರ್ಜನಾ ಮೆರವಣಿಗೆ ಇಂದು ನಡೆಯಲಿದೆ.

ಅರಳಿದ ಕಮಲದ ಮೇಲೆ ವಿನಾಯಕ ಮೂರ್ತಿಯನ್ನು ಈ ಸಲ ಪ್ರತಿಷ್ಠಾಪಿಸಲಾಗಿದೆ. ಕಲಾವಿದ ರಂಗಪ್ಪ ಕುಟುಂಬದವರು ತಯಾರು ಮಾಡಿದ್ದ 6 ಅಡಿ ಎತ್ತರದ ಮೂರ್ತಿಯನ್ನುಇವತ್ತು ವಿಶೇಷ ವಿಸರ್ಜನಾ ಪೂರ್ವ ಮೆರವಣಿಗೆಯೊಂದಿಗೆ ವಿಸರ್ಜನೆಯು ನಡೆಯಲಿದೆ.
Bhadravati Hindu Mahasabha ganapati
- ಇನ್ನೂ ಗಣಪತಿ ಬಿಡುವ ಹಿನ್ನೆಲೆಯಲ್ಲಿ ಭದ್ರಾವತಿ ರಸ್ತೆಗಳಾದ ಹೊಸಮನೆ ಮುಖ್ಯ ರಸ್ತೆ, ರಾಜಕುಮಾರ್ ರಸ್ತೆ ಮತ್ತು ಬಿ.ಎಚ್. ರಸ್ತೆಗಳು ಸಂಪೂರ್ಣವಾಗಿ ಕೇಸರಿ ಧ್ವಜಗಳು ಮತ್ತು ಫ್ಲೆಕ್ಸ್‌ಗಳಿಂದ ಅಲಂಕರಿಸಲಾಗಿದೆ.
- ಮೆರವಣಿಗೆಯಲ್ಲಿ ಪಾಲ್ಗೊಳ್ಲುವವರಿಗೆ ಅಲ್ಲಲ್ಲಿ ಅನ್ನಸಂತರ್ಪಣೆ, ಲಾಡು, ಮಜ್ಜಿಗೆ ಮತ್ತು ಪಾನಕ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ.
- ಇನ್ನೂ ಮೆರವಣಿಗೆ ಹಿನ್ನೆಲಯಲ್ಲಿ ಸಾಗುವ ಮಾರ್ಗಗಳಲ್ಲಿ ಸಂಚಾರ ಬಂದ್ ಮಾಡಲಾಗಿದ್ದು, ವಾಹನಗಳ ಓಡಾಟಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ.
- ಡೊಳ್ಳು ಕುಣಿತ, ಕಂಸಾಳೆ, ಕೋಲಾಟ, ಗೊಂಬೆ ನೃತ್ಯ, ವೀರಗಾಸೆ, ನಾದಸ್ವರ ಸೇರಿದಂತೆ ಅನೇಕ ಕಲಾ ತಂಡಗಳು ಭಾಗವಹಿಸಲಿವೆ.
ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಪೊಲೀಸ್ ಇಲಾಖೆಯು ಬಿಗಿ ಬಂದೋಬಸ್ತ್ ಕೈಗೊಂಡಿದೆ. 3 ಎಸ್ಪಿಗಳು, 5 ಎಎಸ್‌ಪಿಗಳು, 17 ಡಿವೈಎಸ್‌ಪಿಗಳು, 34 ಸಿಪಿಐಗಳು, 23 ಪಿಎಸ್‌ಐಗಳು, 1,750 ಪೊಲೀಸ್ ಕಾನ್‌ಸ್ಟೆಬಲ್‌ಗಳು, 220 ಗೃಹರಕ್ಷಕ ದಳದ ಸಿಬ್ಬಂದಿ, 8 ಕೆಎಸ್‌ಆರ್‌ಪಿ ತುಕಡಿಗಳು, 8 ಡಿಆರ್ ತುಕಡಿಗಳು, ಒಂದು ಕ್ಷಿಪ್ರ ಕಾರ್ಯಪಡೆ (ಆರ್‌ಎಎಫ್) ಮತ್ತು ಒಂದು ವಿಶೇಷ ಕಾರ್ಯಪಡೆ (ಎಸ್‌ಎಎಫ್) ತುಕಡಿಗಳನ್ನು ನಿಯೋಜಿಸಲಾಗಿದೆ. ಡ್ರೋನ್ ಮತ್ತು ವಿಡಿಯೋ ಕ್ಯಾಮರಾಗಳು ಮೆರವಣಿಗೆಯ ಮೇಲೆ ಕಣ್ಗಾವಲಿಡಲಿದೆ.
ಭದ್ರಾವತಿ ಹಿಂದೂ ಮಹಾ ಸಭಾ ಗಣಪತಿ ವಿಸರ್ಜನಾ ಮೆರವಣಿಗೆ ಬಂದೋಬಸ್ತ್ ನ ಪೂರ್ವ ತಯಾರಿ, @DgpKarnataka pic.twitter.com/h00FbClKR4
— SP Shivamogga (@Shivamogga_SP) September 4, 2025
Bhadravati Hindu Mahasabha ganapati Procession Today with Tight Security
Ganesha immersion Bhadravati, Hindu Mahasabha Bhadravati, Vinayaka procession news, Bhadravati Hindu Mahasabha, ಹಿಂದೂ ಮಹಾಸಭಾ,, ವಿನಾಯಕ ಮೂರ್ತಿ, ಮೆರವಣಿಗೆ, ಪೊಲೀಸ್ ಬಂದೋಬಸ್ತ್.
