Bengaluru-Sigandur Non AC Sleeper Bus route ಶಿವಮೊಗ್ಗ, malenadu today news : August 23 2025 ಸಿಗಂದೂರು ಸೇತುವೆ ಆದ ಬೆನ್ನಲ್ಲೆ ಈ ಭಾಗಕ್ಕೆ ಇನ್ನಷ್ಟು ಬಸ್ಗಳ ಸಂಪರ್ಕ ಕಲ್ಪಿಸಬೇಕು ಎಂಬ ಮಾತುಗಳು ಕೇಳಿಬಂದಿತ್ತು. ಈ ಬೇಡಿಕೆಯ ಬೆನ್ನಲ್ಲೆ ಕೆಎಸ್ಆರ್ಟಿಸಿ ಸಿಗಂದೂರಿಗೆ ಬೆಂಗಳೂರಿನಿಂದ ನಾನ್ ಎಸಿ ಬಸ್ವೊಂದನ್ನ ಕಲ್ಪಿಸಿದೆ. ಈ ಬಗ್ಗೆ ಕೆಎಸ್ಆರ್ಟಿಸಿಯಿಂದಲೇ ಪ್ರಕಟಣೆ ಹೊರಬಿದ್ದಿದೆ.
ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) ಬೆಂಗಳೂರು ಮತ್ತು ಸಿಗಂದೂರು ನಡುವೆ ಹೊಸದಾಗಿ ನಾನ್ ಎಸಿ ಸ್ಲೀಪರ್ ಬಸ್ (Non AC Sleeper Bus) ಪ್ರಾರಂಭಿಸಿದೆ. ನಿನ್ನೆಯಿಂದಲೇ ಅಂದರೆ 22-08-2025 ರಿಂದಲೇ ಬಸ್ ಕಾರ್ಯಾಚರಣೆ ಆರಂಭಿಸಿದೆ.

ನಾನ್ ಎಸಿ ಸ್ಲೀಪರ್ ಬಸ್ ಬಸ್ ರೂಟ್
ಕೆಎಸ್ಆರ್ಟಿಸಿಯ ಹೊಸ ಬಸ್ ಬೆಂಗಳೂರಿನಿಂದ ಹೊರಟು ವಯಾ ಚಿತ್ರದುರ್ಗ, ಹೊಳಲ್ಕೆರೆ, ಚನ್ನಗಿರಿ, ಮತ್ತು ಶಿವಮೊಗ್ಗ ತಲುಪಲಿದೆ. ಶಿವಮೊಗ್ಗದಿಂದ ಸಿಗಂದೂರನ್ನು ತಲುಪಲಿದೆ. ಇನ್ನೂ ಬಸ್ನ ಸಮಯವನ್ನು ಗಮನಿಸುವುದಾದರೆ, ಬೆಂಗಳೂರಿನಿಂದ ಬಸ್ ರಾತ್ರಿ 9:40ಕ್ಕೆ ಹೊರಡಲಿದೆ. ಸಿಗಂದೂರನ್ನು ಬೆಳಗ್ಗೆ 6:00ಗಂಟೆ ತಲುಪಲಿದೆ. ಈ ಕಡೆಯಿಂದ ಅಂದರೆ, ಸಿಗಂದೂರು ಕಡೆಯಿಂದ ರಾತ್ರಿ 8:00 ಗಂಟೆಗೆ ಹೊರಡಲಿದ್ದು, ಬೆಂಗಳೂರಿಗೆ ಬೆಳಗಿನ ಜಾವ 4:15 ಕ್ಕೆ ತಲುಪಲಿದೆ. ಟಿಕೆಟ್ ದರ ₹950 ನಷ್ಟಿದೆ. ಈ ಬಗ್ಗೆ ಪ್ರಕಟಣೆ ನೀಡಿರುವ ಕೆಎಸ್ಆರ್ಟಿಸಿ ಈ ಬಸ್ ಸೇವೆಯನ್ನು ಉಪಯೋಗಿಸಿಕೊಂಡು ತಮ್ಮ ಪ್ರಯಾಣವನ್ನು ಮತ್ತಷ್ಟು ಸುಲಭ ಮತ್ತು ಆರಾಮದಾಯಕ ಮಾಡಿಕೊಳ್ಳಬಹುದು ಎಂದಿದೆ. ಅಲ್ಲದೆ ಟಿಕೆಟ್‌ಗಳನ್ನು KSRTC ಯ ಅಧಿಕೃತ ವೆಬ್‌ಸೈಟ್‌ಗಳಾದ www.ksrtc.in ಮತ್ತು www.ksrtc.karnataka.gov.in ಮೂಲಕ ಕಾಯ್ದಿರಿಸಬಹುದು ಎಂದು ತಿಳಿಸಿದೆ. ಅಲ್ಲದೆ ಹೆಚ್ಚಿನ ಮಾಹಿತಿಗಾಗಿ 080-26252625, 7760990100,7760990560, 7760990287 ನಂಬರ್ಗಳನ್ನು ಸಂಪರ್ಕಿಬಹುದು ಅಂತಾ ತಿಳಿಸಿದೆ.