ವಿದ್ಯಾರ್ಥಿನಿಯರಿಗೆ ಬ್ಯಾಡ್ ಟಚ್​ | ಓರ್ವ ಶಿಕ್ಷಕನ ಜೊತೆ ಮುಖ್ಯ ಶಿಕ್ಷಕನೂ ಸಸ್ಪೆಂಡ್ !

Malenadu Today

KARNATAKA |  Dec 9, 2023 |  ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಸಂಬಂಧ ಹಾಗೂ ದೂರು ಕೊಟ್ಟರೂ ಕ್ರಮ ಕೈಗೊಳ್ಳದ ಆರೋಪ ಹಿನ್ನೆಲೆಯಲ್ಲಿ ಶಿಕ್ಷಕ ಹಾಗೂ ಮುಖ್ಯ ಶಿಕ್ಷಕರೊಬ್ಬರನ್ನು ಶಿಕ್ಷಣ ಇಲಾಖೆ ಅಮಾನತ್ತು ಮಾಡಿದ ಘಟನೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರದಲ್ಲಿ ನಡೆದಿದೆ. 

ಈ ಸಂಬಂಧ ಹಲವು ದಿನಗಳಿಂದ ವಿಚಾರಣೆ ನಡೆಯುತ್ತಿತ್ತು. ಕಳೆದ ಆಗಸ್ಟ್​ ತಿಂಗಳ ಹೊತ್ತಿಗೆ ಕೇಳಿ ಬಂದ ದೂರಿಗೆ ಸಂಬಂಧಿಸಿದಂತೆ ಈ ಕ್ರಮ ಕೈಗೊಳ್ಳಲಾಗಿದೆ. ಶಾಲೆಯಲ್ಲಿ ಕಳೆದ ಆಗಸ್ಟ್ ತಿಂಗಳಿ ನಿಂದಲೂ ಶಿಕ್ಷಕರೊಬ್ಬರು ವಿದ್ಯಾರ್ಥಿನಿಯರ ಬಳಿ ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದರು ಎಂದು ಆರೋಪಿಸಲಾಗಿತ್ತು. 

READ : ಇಬ್ಬರು ಯುವಕರ ನಡುವೆ ಗಲಾಟೆ! ಓರ್ವನಿಗೆ ಮಾರಕಾಸ್ತ್ರದಿಂದ ಹಲ್ಲೆ

ಗುಡ್​ ಟಚ್​ ಬ್ಯಾಡ್ ಟಚ್​ ಬಗ್ಗೆ ಶಾಲಾ ಶಿಕ್ಷಕಿಯರ ಬಳಿ ಮಕ್ಕಳು ತಮ್ಮ ಅಳಲು ತೋಡಿಕೊಂಡಿದ್ದರು. ನಂತರ ಶಿಕ್ಷಕಿಯರ ಮೂಲಕ ವಿಚಾರ ಮುಖ್ಯ ಶಿಕ್ಷಕರ ಗಮನಕ್ಕೆ ಹೋಗಿತ್ತು. ಆದರೆ ಈ ಸಂಬಂಧ ದೂರು ದಾಖಲಾಗಿರಲಿಲ್ಲ ಎಂದು ಹೇಳಲಾಗಿದೆ. 

ಇನ್ನೂ ಈ ಸಂಬಂಧ ಪೋಷಕರು ಸೇರಿದಂತೆ ಹಲವರು ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೆ ಮಕ್ಕಳ ಕಲ್ಯಾಣ ಸಮಿತಿಯವರು ಶಾಲೆಗೆ ಭೇಟಿಕೊಟ್ಟು ಮಕ್ಕಳಿಂದ ಮಾಹಿತಿ ಪಡೆದಿದ್ದರು. ಇದರ ನಡುವೆ ಶಿಕ್ಷಣ ಇಲಾಖೆಯು ಆರೋಪ ಸಂಬಂಧ ವರದಿ ತಯಾರಿಸಿತ್ತು. ಇದೆಲ್ಲದರ ಬೆನ್ನಲ್ಲೆ ಇದೀಗ ನಿರ್ದಿಷ್ಟ ಶಾಲೆಯ ಶಿಕ್ಷಕ ಹಾಗೂ ಮುಖ್ಯ ಶಿಕ್ಷಕರನ್ನ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.


 

Share This Article