ಹೊಟ್ಟೆ ಉರಿಯುತ್ತಿದೆಯೇ? ಹುಳಿತೇಗು? ವಾಂತಿ ಬಂದಂತೆ ಆಗ್ತಿದಿಯಾ? ದಿ ಬೆಸ್ಟ್​ ಸಲಹೆ ಈ ಡಾಕ್ಟರ್​​ ನೀಡ್ತಾರೆ ನೋಡಿ!

ಶಿವಮೊಗ್ಗ | ಗ್ಯಾಸ್ಟ್ರಿಕ್ ಎನ್ನುವುದು ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯ ಆಗಿ ಬಿಟ್ಟಿದೆ. ಕಿರಿಯರಿಂದ ಹಿಡಿದು ಹಿರಿಯರವರೆಗೂ ಈ ಗ್ಯಾಸ್ಟಿಕ್​​ ಸಮಸ್ಯೆ​ ಆವರಿಸಿಕೊಳ್ಳುತ್ತಿದ್ದು, ಅಪ್ಪಾಯಾಕಾದ್ರು ಈ ಗ್ರಾಸ್ಟಿಕ್​​​ ಬರುತ್ತೋ ಎನ್ನುವಂತೆ ಆಗಿಬಿಟ್ಟಿದೆ,. ಈ ಗ್ಯಾಸ್ಟಿಕ್​​ ಹೇಗೆ ಬರುತ್ತೆ, ಇದರಿಂದ ಆಗಬಹುದಾದ ತೊಂದರೆಗಳೇನು ಇದಕ್ಕೆ ಪರಿಹಾರಗಳೇನು ಎಂಬ ಇತ್ಯಾದಿ ವಿಚಾರಗಳನ್ನು ಆಯುರ್ವೇದಿಕ್​ ತಜ್ಞ ಡಾ, ನಾಗರಾಜ್​ ಅಂಗಡಿ ತಿಳಿಸಿಕೊಟ್ಟಿದ್ದಾರೆ. ಅದರ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿ

SUNCONTROL_FINAL-scaled

ಏನಿದು ಗ್ಯಾಸ್ಸ್ಟ್ರಿಕ್​ 

ಆಯುರ್ವೇದದಲ್ಲಿ ಗ್ಯಾಸ್ಟ್ರೈಟಿಸ್ ಅನ್ನು ‘ಆಮ್ಲಪಿತ್ತ’ ಎಂದು ಕರೆಯಲಾಗುತ್ತದೆ. ಇದು ಹೇಗೆ ಆರಂಭವಾಗುತ್ತೆ ಎಂಬುವುದನ್ನು ಒಂದು ಉದಾಹರಣೆ ಮೂಲಕ ನೋಡುವುದಾದರೆ ಮೂರು ದಿನ ಹಾಗೆಯೇ ಇಟ್ಟ ದೋಸೆ ಹಿಟ್ಟು ಹೇಗೆ ಹುಳಿಯಾಗಿ ನಾರುತ್ತದೆಯೋ, ಅದೇ ರೀತಿ ಹೊಟ್ಟೆಯಲ್ಲಿ ಜೀರ್ಣವಾಗದೆ  ಉಳಿದ ಆಹಾರ ಹುಳಿ ತೇಗು, ಕಹಿ ತೇಗು ಉಂಟಾಗಿ ಮತ್ತು ಹೊಟ್ಟೆ ಉಬ್ಬರಕ್ಕೆ ಕಾರಣವಾಗುತ್ತೆ. ಇದನ್ನು ಊರ್ಧ್ವಜ (ಗಂಟಲು ಮತ್ತು ಎದೆಯ ಭಾಗ), ಅದೋಗ (ಕರುಳಿನ ಭಾಗ) ಮತ್ತು ತಿರ್ಯಕ್ (ದೇಹದ ಎಲ್ಲಾ ಭಾಗ) ಎಂದು ಮೂರು ವಿಧಗಳಾಗಿ ವಿಂಗಡಿಸಲಾಗಿದೆ.

Ayurveda Tips for Gastritis ಇದರಿಂದ ಆಗಬಹುದಾದ ಆರೋಗ್ಯ ಸಮಸ್ಯೆಗಳೇನು

ಜೀರ್ಣಶಕ್ತಿ ತನ್ನ ಕಾರ್ಯವನ್ನು ಸರಿಯಾಗಿ ನಿರ್ವಹಿಸದೇ ಇದ್ದಾಗ ದೇಹದಲ್ಲಿ ರೋಗಗಳು ಕಾಣಿಸಿಕೊಳ್ಳುತ್ತವೆ. ಗ್ಯಾಸ್ಟ್ರಿಕ್ ಸಮಸ್ಯೆಯನ್ನು ನಿರ್ಲಕ್ಷಿಸಿದರೆ ಅದು ಮೂಲವ್ಯಾಧಿ, ಹೃದಯದ ಬ್ಲಾಕ್‌ಗಳು ಹಾಗೂ ಕಿಡ್ನಿ ಮತ್ತು ಮೆದುಳಿನಂತಹ ಪ್ರಮುಖ ಅಂಗಗಳ ಮೇಲೆ ತೀವ್ರ ಪರಿಣಾಮ ಬೀರಬಹುದು. ಅಗ್ನಿಯನ್ನು ಅಂದರೆ ಜೀರ್ಣಶಕ್ತಿಯನ್ನು ಬಲಪಡಿಸುವುದೇ ಇದಕ್ಕೆ ಇರುವ ಏಕೈಕ ಶಾಶ್ವತ ಪರಿಹಾರ ಎಂದು ತಜ್ಞರು ತಿಳಿಸಿದ್ದಾರೆ.

Ayurveda Tips for Gastritis ಗ್ಯಾಸ್ಟ್ರಿಕ್ ಅಥವಾ ಆಮ್ಲಪಿತ್ತಕ್ಕೆ ಆಯುರ್ವೇದದ ಪ್ರಮುಖ ಪರಿಹಾರಗಳು 

ಹಸಿವೆಯಾದಾಗ ಎಷ್ಟು ಬೇಕೋ ಅಷ್ಟು ಮಾತ್ರ ಆಹಾರ ಸೇವಿಸಿ. ಅತಿಯಾಗಿ ತಿಂದರೆ ಅಗ್ನಿ( ಜೀರ್ಣ ಕ್ರಿಯೆ ) ನಿಧಾನವಾಗುತ್ತದೆ.

ಪ್ರತಿದಿನ ನಿಗದಿತ ಸಮಯದಲ್ಲಿ ಆಹಾರ ಸೇವನೆ ಅತ್ಯಗತ್ಯ. ಅಂದರೆ ಬೆಳಿಗ್ಗೆ 7:30 ರಿಂದ 9:30 ರ ಅವಧಿಯ ಒಳಗಡೆ ಆಹಾರ ಸೇವನೆ

ಅತಿಯಾದ ಟೀ, ಕಾಫಿ, ಬೇಕರಿ ಐಟಂಗಳು, ಮಸಾಲೆಯುಕ್ತ ಆಹಾರಗಳಾದ ಗೋಬಿ ಮಂಚೂರಿ, ಪಿಜ್ಜಾ, ಬರ್ಗರ್ ಮತ್ತು ಎಣ್ಣೆಯಲ್ಲಿ ಕರಿದ ಪದಾರ್ಥಗಳಿಂದ ದೂರವಿರಬೇಕು 

ದಿನಕ್ಕೆ ಎರಡು ಬಾರಿ ಮಿತವಾಗಿ ಆಹಾರ ಸೇವಿಸುವವನು ಆರೋಗ್ಯವಂತನಾಗಿರುತ್ತಾನೆ. ಪದೇ ಪದೇ ತಿನ್ನುವ ಅಭ್ಯಾಸ ಜೀರ್ಣಾಂಗವ್ಯೂಹವನ್ನು ಹಾಳು ಮಾಡುತ್ತದೆ. 

 ರಾತ್ರಿ ತಡವಾಗಿ ಊಟ ಮಾಡುವುದು ಮತ್ತು ತಡವಾಗಿ ಮಲಗುವುದು ಪಿತ್ತ ದೋಷವನ್ನು ಹೆಚ್ಚಿಸುತ್ತದೆ. 

ಗ್ಯಾಸ್ಟ್ರಿಕ್ ಸಮಸ್ಯೆ ಹೆಚ್ಚಾದಾಗ ಕೇವಲ ಮಾತ್ರೆಗಳ ಮೇಲೆ ಅವಲಂಬಿತರಾಗದೆ, ಆಯುರ್ವೇದ ವೈದ್ಯರ ಸಲಹೆಯಂತೆ ಜೀರ್ಣಾಗ್ನಿಯನ್ನು ಬಲಪಡಿಸುವ ನೈಸರ್ಗಿಕ ಚಿಕಿತ್ಸೆ ಪಡೆಯಿರಿ. 

ಈ ಬಗ್ಗೆ ಇನ್ನಷ್ಟು ವಿವರವಾದ ಮಾಹಿತಿ ಯೂಟ್ಯೂಬ್​ ವಿಡಿಯೋದಲ್ಲಿದೆ.. ತಪ್ಪದೆ ನೋಡಿ

Ayurveda Tips for Gastritis Dr. Nagaraj Angadi 

Ayurveda Tips for Gastritis Dr. Nagaraj Angadi 
Ayurveda Tips for Gastritis Dr. Nagaraj Angadi 
shivamogga car decor sun control house
shivamogga car decor sun control house
SUNCONTROL_FINAL-scaled
ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು