SHIVAMOGGA| MALENADUTODAY NEWS | ಮಲೆನಾಡು ಟುಡೆ Mar 27, 2025
ಪುತ್ರ ಸುಭಾಷ್ ರವರ ನಿಶ್ವಿತಾರ್ಥ ಸದ್ದುಗದ್ದಲವಿಲ್ಲದೆ ಮುಗಿಸಿರುವ ಸಂಸದ ಬಿವೈ ರಾಘವೇಂದ್ರರವರವರು ಇದೀಗ ಮಗನ ಮದುವೆ ಆಮಂತ್ರಣದ ಓಡಾಟದಲ್ಲಿ ಬ್ಯುಸಿಯಾಗಿದ್ದಾರೆ. ಪುತ್ರನ ಮದುವೆಗೆ ಗಣ್ಯರನ್ನು ಆಹ್ವಾನಿಸಲು ದೆಹಲಿಗೆ ತೆರಳಿರುವ ಅವರು, ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಪುತ್ರನ ಮದುವೆಗೆ ಆಹ್ವಾನ ನೀಡಿದರು.
ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು, ಪತ್ನಿ ತೇಜಸ್ವಿನಿ ಹಾಗೂ ಲಿಂಗರಾಜಪ್ಪ ಕುಟುಂಬ ಮತ್ತು ಸಹೋದರ ಬಿವೈ ವಿಜಯೇಂದ್ರರವರ ಜೊತೆಗೆ ಭೇಟಿಯಾದ ಬಿವೈಆರ್, ತಮ್ಮ ಮಗನ ಮದುವೆಯಲ್ಲಿ ನಿಮ್ಮ ಉಪಸ್ಥಿತಿಯು ನಮ್ಮ ಕುಟುಂಬಕ್ಕೆ ಅಪಾರ ಹೆಮ್ಮೆ ಮತ್ತು ಸಂತೋಷದ ಕ್ಷಣವಾಗಲಿದೆ ಎಂದು ಮನವಿ ಮಾಡಿದರು.
ಇನ್ನೂ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದ ಬಳಿಕ ಬಿಎಸ್‌ವೈ ಪುತ್ರರು, ಬಿಜೆಪಿ ವರಿಷ್ಟ ಅಮಿತ್ ಶಾರವರನ್ನು ಭೇಟಿಯಾಗಿ ಅವರನ್ನು ಸಹ ಸುಭಾಷ್‌ರವ ವಿವಾಹ ಕಾರ್ಯಕ್ರಮಕ್ಕೆ ಆಹ್ವಾನಿಸಿದರು.
ಇಷ್ಟೆ ಅಲ್ಲದೆ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರಾರ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ಬಿವೈಆರ್ ಹಾಗೂ ಬಿವೈ ವಿಜಯೇಂದ್ರ ಸುಭಾಷ್‌ರ ವಿವಾಹ ಸಮಾರಂಭಕ್ಕೆ ಆಹ್ವಾನ ನೀಡಿದರು.
