ಗ್ಯಾರಂಟಿ ಯೋಜನೆಯಲ್ಲಿ ಬರುತ್ತದೆಯೇ ಬದಲಾವಣೆ!? ಗೃಹಸಚಿವರು ಮಾತಿನ ಸುಳಿವು ನಿಜವಾಗುತ್ತಾ?

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 25, 2025 ‌‌  

ರಾಜ್ಯ ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಸ್ಕೀಮ್‌ಗಳಲ್ಲಿ ಬದಲಾವಣೆ ಬರಲಿದೆಯೇ? ಇದ್ದರು ಇರಬಹುದು ಎಂಬ ಒಂದು ಸುಳಿವು ಹೊರಬಿದ್ದಿದೆ. ತುಮಕೂರಿನಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡುತ್ತಾ, ಗೃಹಸಚಿವ ಡಾ.ಜಿ ಪರಮೇಶ್ವರ್‌ ಗ್ಯಾರಂಟಿ ಯೋಜನೆಗಳು ಬಡವರಿಗೆ ಮಾತ್ರ ಸಿಗುವಂತಾಗಬೇಕು. ಆ ನಿಟ್ಟಿನಲ್ಲಿ ಗ್ಯಾರಂಟಿ ಯೋಜನೆಗಳ ಪುನರ್ ಪರಿಶೀಲಿಸಲು ಸರ್ಕಾರದ ಹಂತದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು  ಎಂದಿದ್ದಾರೆ. ಅವರ ಈ ಮಾತು ಇಡೀ ರಾಜ್ಯದಲ್ಲಿ ಸಂಚಲನಕ್ಕೆ ಕಾರಣವಾಗಿದ್ದು, ರಾಜ್ಯ ಪತ್ರಿಕೆಗಳ ಮುಖ್ಯ ಹೆಡ್‌ಲೈನ್‌ ಆಗಿದೆ. 

 

ನಿನ್ನೆ ನಡೆದ ಸಭೆಯಲ್ಲಿ ಶಾಸಕ ಎಂಟಿ ಕೃಷ್ಣಪ್ಪ, 2 ಲಕ್ಷ ಸಂಬಳ ತೆಗೆದುಕೊಳ್ಳುವ ಮಹಿಳೆಯರು ಸಹ ಉಚಿತವಾಗಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾರೆ. ನಮ್ಮ ರಾಜ್ಯ ಅಷ್ಟೊಂದು ಶ್ರೀಮಂತವಾಯಿತೆ ಎಂದು ಮಾತು ಆರಂಭಿಸುತ್ತಾರೆ.‌ ಅಲ್ಲದೆ ಬಿಪಿಎಲ್‌ ಮಾನದಂಡಡಿಯಲ್ಲಿ ಗ್ಯಾರಂಟಿ ಲಾಭ ನೀಡಬೇಕು ಎಂದು ಸಲಹೆ ನೀಡಿದರು. ಇವರ ಮಾತನ್ನು ಸಮರ್ಥಿಸಿದ ಪರಮೇಶ್ವರ್ ಇದೊಂದು ಗಂಭೀರ ವಿಚಾರ. ಗೃಹಲಕ್ಷ್ಮಿ ಯೋಜನೆಯಲ್ಲಿ ಶ್ರೀಮಂತರೂ ಸೌಲಭ್ಯ ಪಡೆದುಕೊಳ್ಳುತ್ತಿದ್ದು ಇದನ್ನು ತಪ್ಪಿಸಬೇಕಿದೆ ಎಂದಿದ್ದಾರೆ. ಸದ್ಯ ಪರಮೇಶ್ವರ್‌ರವರ ಮಾತು ಸಂಚಲನಕ್ಕೆ ಕಾರಣವಾಗಿದೆ. 

SUMMARY |  change in guarantee scheme of karnataka congress 

KEY WORDS |‌   change in guarantee scheme , karnataka congress 

Leave a Comment

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು