SHIVAMOGGA | MALENADUTODAY NEWS | ಮಲೆನಾಡು ಟುಡೆ Feb 24, 2025 
ಅಡಿಕೆಯಲ್ಲಿ ಜಿಎಸ್‌ಟಿ ಹೇಗೆ ವಂಚಿಸಲಾಗುತ್ತದೆ ಎಂಬುದನ್ನು ಈಗಾಗಲೇ ಮಲೆನಾಡು ಟುಡೆ ವರದಿ ಮಾಡಿತ್ತು. ಸುಮಾರು ಒಂದು ಕೋಟಿ ಮೌಲ್ಯದ ಅಡಿಕೆಯು ಜಿಎಸ್‌ಟಿಯಿಲ್ಲದೆ ಕರ್ನಾಟಕದ ಗಡಿದಾಟಿದ ಬಳಿಕ, ಅದು ಸೇರಬೇಕಾದ ಜಾಗ ತಲುಪಿ ಅಲ್ಲಿಂದ ಸುಮಾರು 300 ಕೋಟಿ ಮೌಲ್ಯದ ಗುಟ್ಕಾ ರೂಪದಲ್ಲಿ ಮತ್ತೆ ತೆರಿಗೆಯಿಲ್ಲದೆ ಕರ್ನಾಟಕದ ಒಳಗೆ ಬರುತ್ತದೆ. ಅಕ್ರಮವಾಗಿ ನಡೆಯುವ ದಂಧೆಯಲ್ಲಿ ಕೋಟಿ ಸಂಪಾದನೆಯು ಇದೆ, ಕೋಟಿ ಕಳೆದುಕೊಂಡು ಪಾಪರ್ ಆದವರು ಇದ್ದಾರೆ. ಇದೀಗ ಈ ವಿಚಾರ ಏಕೆಂದರೆ, ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇರಳ ರಾಜ್ಯದ ಟ್ರೇಡರ್ಸ್ ಹೆಸರಿನಲ್ಲಿ ಕಡಿಮೆ ಬಿಲ್‌ನ ಮೂಲಕ, ತೆರಿಗೆ ವಂಚನೆ ಮಾಡಿ ಶಿವಮೊಗ್ಗದ ಮೂಲಕ ಅಡಿಕೆಯನ್ನು ಸಾಗಿಸಲಾಗುತ್ತಿದೆ ಎಂಬ ಆರೋಪದ ಸಂಬಂಧ ಸುಮುಟೋ ಕೇಸ್ ದಾಖಲಾಗಿದೆ.
ಕೆಎ 25 ರಿಜಿಸ್ಟ್ರೇಷನ್‌ನ ಲಾರಿಯಲ್ಲಿ, ಕೇರಳ ರಾಜ್ಯದ ಟ್ರೇಡರ್ಸ್ ಹಾಗೂ ಬಿಲ್‌ಗಳ ಮೂಲಕ ಶಿವಮೊಗ್ಗದಲ್ಲಿ ಅಡಿಕೆಯನ್ನು ಲೋಡ್ ಮಾಡಿ ಶಿವಮೊಗ್ಗ-ಭದ್ರಾವತಿಯ ಮೂಲಕ ದೆಹಲಿಗೆ ಸಾಗಣೆ ಮಾಡಲಾಗುತ್ತಿದೆ. ಲಾರಿಯನ್ನು ಹಿಡಿದು ಅದರ ಫಾಸ್ಟ್‌ಟ್ಯಾಗ್ ಚೆಕ್ ಮಾಡಿ, ಚಾಲಕನನ್ನು ವಿಚಾರಿಸಿದರೆ, ಅಕ್ರಮ ದಂಧೆ ಬಯಲಿಗೆ ಬರುತ್ತದೆ ಎಂಬ ಮಾಹಿತಿಯನ್ನು ಪೊಲೀಸ್ ಇನಾರ್ಮರ್‌ಗಳು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಠಾಣೆಯ ಅಧಿಕಾರಿಯೊಬ್ಬರು ಸುಮುಟೋ ಕೇಸ್ ದಾಖಲಿಸಿ ತನಿಖೆ ನಡೆಸ್ತಿದ್ದಾರೆ. ಅಡಿಕೆ ಸಾಗಾಟದ ಅಕ್ರಮ ವಹಿವಾಟು ಶಿವಮೊಗ್ಗದಲ್ಲಿ ದೊಡ್ಡಮಟ್ಟದಲ್ಲಿ ನಡೆಯುತ್ತಿದ್ದು, ಆಗಾಗ ಕಾಣೆಯಾಗುವ ಅಡಿಕೆ ಲಾರಿಗಳ ಸುಳಿವು ನಿಗೂಢವಾಗಿರುತ್ತವೆ.
SUMMARY | case on arecanut lorry at shivamogga rural police station
KEY WORDS | case on arecanut lorry , shivamogga rural police station
 
 
 
  
  
  
 