SHIVAMOGGA | MALENADUTODAY NEWS | ಮಲೆನಾಡು ಟುಡೆ | Jan 23, 2025
ಶಿವಮೊಗ್ಗ | ರಾಜ್ಯಾಧ್ಯಕ್ಷರ ಮೇಲೆ ಸಾಕಷ್ಟು ಗೊಂದಲ ಸೃಷ್ಟಿ ಮಾಡುವ ಪ್ರಯತ್ನ ನಡೆಯುತ್ತಿದ್ದು,ಕೆಲವರು ವೈಯಕ್ತಿಕ ಹೇಳಿಕೆಗಳನ್ನು ಕೂಡ ನೀಡುತ್ತಿದ್ದಾರೆ.ಇನ್ನೊಂದು ವಾರದಲ್ಲಿ ಇದೆಲ್ಲದಕ್ಕೂ ಫುಲ್ ಸ್ಟಾಪ್ ಇಡುವ ನಿರೀಕ್ಷೆ ಇದೆ ಎಂದು ಸಂಸದ ಬಿವೈ ರಾಘವೇಂದ್ರ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪಕ್ಷದಲ್ಲಿರುವವರ ಗೊಂದಲದ ವಿಚಾರದ ಕುರಿತು ಬೂತ್ ಅಧ್ಯಕ್ಷರಿಂದ ಎಲ್ಲ ಬದಲಾವಣೆ ನಡೆಯುತ್ತಿದೆ .ಅವರು ಉಳಿಯುತ್ತಾರೆ ಇವರನ್ನು ತೆಗೆಯುತ್ತಾರೆ ಎಂಬೆಲ್ಲ ಚರ್ಚೆಗಳು ಅಂತ್ಯ ಆಗಲಿದೆ. ಬಿವೈ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಮುಂದುವರೆಯುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದರು
ಶ್ರೀರಾಮುಲು ಅವರನ್ನು ಕಾಂಗ್ರೆಸ್‌ಗೆ ಕರೆದು ತರಲು ಡಿಕೆಶಿ ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿರುವ ಜನಾರ್ಧನ ರೆಡ್ಡಿ ಹೇಳಿಕೆ ವಿಚಾರ ಬಗ್ಗೆ ಮಾತನಾಡಿದ ಅವರು ಶ್ರೀರಾಮುಲು ಹಾಗೂ ರೆಡ್ಡಿ ನಡುವೆ ನಾಲ್ಕು ಗೋಡೆ ಮಧ್ಯೆ ಏನು ನಡೆದಿದೆ ಎಂಬುದರ ಬಗ್ಗೆ ನಮಗೆ ಗೊತ್ತಿಲ್ಲ. ನಮ್ಮ ಪಕ್ಷದಲ್ಲಿನ ಸಣ್ಣಪುಟ್ಟ ಗೊಂದಲಗಳ ಲಾಭ ಪಡೆಯುವ ಪ್ರಯತ್ನವನ್ನು ವಿಪಕ್ಷಗಳು ಮಾಡುತ್ತಿರುತ್ತವೆ . ನಮ್ಮ ಕರ್ತವ್ಯವನ್ನು ನಾವು ಮಾಡುತ್ತೇವೆ. ಪಕ್ಷದ ಗೊಂದಲಗಳಿಂದ ಸಂಘಟನೆಗೆ ಡ್ಯಾಮೇಜ್ ಆಗಿದೆ ಎಂದರು.
ಸುಳ್ಳು ಹೇಳಿ ರಾಜಕರಣ ಮಾಡುವ ಪರಿಸ್ಥಿತಿ ನಮಗಿಲ್ಲ
ವಿಐಎಸ್ಎಲ್ ವಿಚಾರದಲ್ಲಿ ಸಂಸದರು ಪುಕ್ಸಟ್ಟೆ ಹೇಳಿಕೆ ನೀಡುತ್ತಾರೆ ಎಂಬ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಂಸದರು. ಸುಳ್ಳು ಹೇಳಿ ರಾಜಕಾರಣ ಮಾಡುವ ಪರಿಸ್ಥಿತಿ ನಮಗಿಲ್ಲ .ಒಳ್ಳೆಯ ಸುದ್ದಿ ಕೊಡುವ ಕೆಲಸ ಶೀಘ್ರದಲ್ಲೇ ಮಾಡುತ್ತೇವೆ.ಇಂದಿನ ಈ ಪರಿಸ್ಥಿತಿಗೆ ಕಾಂಗ್ರೆಸ್ ಕಾರಣ ಶರಾವತಿ ಸಂತ್ರಸರ ಸಮಸ್ಯೆಗೂ ಕಾಂಗ್ರೆಸ್ ಕಾರಣ . ಕುವೆಂಪು ವಿವಿ ಮತ್ತು ಕೃಷಿ ವಿವಿ ಘಟಕದಲ್ಲಿ ರಾಜ್ಯಪಾಲರು ಪಾಲ್ಗೊಂಡಿದ್ದರು ಆ ವೇಳೆ ಶಿಕ್ಷಣ ಮತ್ತು ಕೃಷಿ ಸಚಿವರು ಪಾಲ್ಗೊಂಡಿಲ್ಲ. ಅಧಿಕಾರ ಯಾವತ್ತೂ ಶಾಶ್ವತವಲ್ಲ ಮದಬಂದಂತೆ ಸಚಿವರು ನಡೆದುಕೊಳ್ಳುವ ರೀತಿಯನ್ನು ಎಲ್ಲರೂ ಗಮನಿಸುತ್ತಿದ್ದಾರೆ ಎಂದರು.
SUMMARY | Mp BY Raghavendra said that a full stop to all this is expected to be put to rest in a week’s time.
KEYWORDS | Mp BY Raghavendra, political news, kannada news,