SHIVAMOGGA | MALENADUTODAY NEWS | ಮಲೆನಾಡು ಟುಡೆ | Jan 18, 2025
ಶಿವಮೊಗ್ಗ | ನಮ್ಮ ಹೈಕಮಾಂಡ್ ಎಲ್ಲಾ ಶಾಸಕರು ಹಾಗೂ ಸಚಿವರಿಗೆ ಬಾಯಿ ಮುಚ್ಚಿಕೊಂಡು ಕೆಲಸ ಮಾಡಬೇಕು ಎಂದು ಸೂಚನೆ ನೀಡಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಸಚಿವರು ಇಂದು ನಗರದಲ್ಲಿ ಸುದ್ದಿಗೋಷ್ಠಿನಡೆಸಿ ಮಾತನಾಡಿದರು. ಈ ಸಂದರ್ಭದಲ್ಲಿ ಪತ್ರಕರ್ತರೊಬ್ಬರು ಕಾಂಗ್ರೆಸ್ ಪಕ್ಷದಲ್ಲಿನ ಗೊಂದಲದ ಬಗ್ಗೆ ಪ್ರಶ್ನಿಸಿದರು. ಇದಕ್ಕೆ ನಮ್ಮ ಹೈಕಮಾಂಡ್ ಎಲ್ಲಾ ಶಾಸಕರು ಹಾಗೂ ಸಚಿವರಿಗೆ ಬಾಯಿ ಮುಚ್ಚಿಕೊಂಡು ಕೆಲಸ ಮಾಡಬೇಕು ಎಂದು ಸೂಚನೆ ನೀಡಿದೆ.ಅದೇ ರೀತಿಯಲ್ಲಿ ಈಗ ಎಲ್ಲರೂ ಕೆಲಸ ಮಾಡುತ್ತಿದ್ದಾರೆ ಎಂದು ಮಧು ಬಂಗಾರಪ್ಪ ಉತ್ತರಿಸಿದರು.
ಬಿಜೆಪಿಯರವರು ಕಾರ್ಯಕ್ರಮ ಘೋಷಣೆ ಮಾಡಿದ್ದು ಅಷ್ಟೇ ಯಾವ ಯೋಜನೆಗೂ ಹಣವನ್ನು ಇಡುತ್ತಿರಲಿಲ್ಲ
ನಮ್ಮ ಮುಖ್ಯ ಮಂತ್ರಿಗಳು ಎಲ್ಲಾ ಶಾಸಕರಿಗೂ ತಲಾ 10 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದ್ದಾರೆ. ಗ್ಯಾರಂಟಿ ಯೋಜನೆಯಿಂದ ಅನುದಾನ ಬಿಡುಗಡೆಗೊಳಿಸುವುದು ಸ್ವಲ್ಪ ತಡವಾಗಿದೆ. ಈ ಹಿಂದೆ ಬಿಜೆಪಿ ರವರು ಕಾರ್ಯಕ್ರಮ ಘೋಷಣೆ ಮಾಡಿದ್ದು ಬಿಟ್ಟರೆ ಯಾವ ಯೋಜನೆಗೂ ಹಣವನ್ನು ಇಡುತ್ತಿರಲಿಲ್ಲ. ನಾವು ಹಳೇ ಸರ್ಕಾರದ ಸಾಲವನ್ನು ತೀರಿಸಿ ಸರ್ಕಾರದ ಹಣವನ್ನು ಜನರ ಜೇಬಿಗೆ ಗ್ಯಾರಂಟಿ ಯೋಜನೆಯ ಮೂಲಕ ಹಾಕುತ್ತಿದ್ದೇವೆ ಎಂದರು.
ಶರಾವತಿ ಸಂತ್ರಸ್ತರ ಬಗ್ಗೆ ಮಾತನಾಡಿ ಶರಾವತಿ ಸಂತ್ರಸ್ತ್ರರ ಸಮಸ್ಯೆ ಬೆಳೆಯಲು ಬಿಜೆಪಿಯವರೇ ಕಾರಣ. ಬಿಜೆಪಿಯವರಿಗೆ ಹಸುವಿನ ವಿಚಾರದಲ್ಲಿ ರಾಜಕೀಯ ಮಾಡುವುದು ಬಿಟ್ಟರೆ ಬೇರೆ ಏನೂ ಗೊತ್ತಿಲ್ಲ. ನಮ್ಮ ಸರ್ಕಾರ ಸಂತ್ರಸ್ತರ ಹಾಗೂ ರೈತರ ಪರವಾಗಿ ಇದೆ ಯಾರು ಭಯಪಡುವ ಅವಶ್ಯಕತೆ ಇಲ್ಲ ಎಂದರು. ಅಮಿತ್ ಷಾ ಈ ಹಿಂದೆ ಕರ್ನಾಟಕದಲ್ಲಿ ಅಡಿಕೆ ಸಂಶೋಧನಾ ಕೇಂದ್ರ ಮಾಡಲು 500 ಕೋಟಿ ರೂ ಬಿಡುಗಡೆ ಮಾಡುತ್ತೇವೆ ಎಂದಿದ್ದರು. ಘೋಷಣೆ ಮಾಡಿದ ಸಂಶೋಧನಾ ಕೇಂದ್ರ ಎಲ್ಲಿಗೆ ಹೋಯಿತು ಎಂಬುದು ತಿಳಿದಿಲ್ಲ.ಈ ಕುರಿತು ನಾನು ಇಂದು ಕೃಷಿ ಸಚಿವರ ಜೊತೆ ಮಾತನಾಡುತ್ತೇನೆ ಎಂದರು.
ಶಿವಣ್ಣ 10 ದಿನದಲ್ಲಿ ಬೆಂಗಳೂರಿಗೆ ಬರುತ್ತಾರೆ
ಶಿವಣ್ಣ ಅವರ ತಂದೆ ತಾಯಿ ಹಾಗೂ ಅಭಿಮಾನಿ ದೇವರುಗಳ ಆಶಿರ್ವಾದದಿಂದ ಗುಣಮುಖರಾಗಿದ್ದಾರೆ. ಇನ್ನೂ 10 ದಿನಗಳಲ್ಲಿ ಬೆಂಗಳೂರಿಗೆ ಆಗಮಿಸಲಿದ್ದಾರೆ ಎಂದರು.
SUMMARY | Our high command has instructed all MLAs and ministers to keep their mouths shut,” education minister Madhu Bangarappa said.
KEYWORDS | Madhu Bangarappa, education minister, shimoga,