SHIVAMOGGA | MALENADUTODAY NEWS | ಮಲೆನಾಡು ಟುಡೆ Dec 17, 2024
ಶಿವಮೊಗ್ಗದ ಎಸ್‌ಪಿ ಮಿಥುನ್ ಕುಮಾರ್ ನಿನ್ನೆದಿನ ಶಿವಮೊಗ್ಗ ಪೊಲೀಸ್ ಇಲಾಖೆ ವ್ಯಾಪ್ತಿಯಲ್ಲಿ 2024 ರಲ್ಲಿ ದಾಖಲಾದ ವಿವಿಧ ಸ್ವತ್ತು ಕಳ್ಳತನ ಪ್ರಕರಣದಲ್ಲಿ ವಶಪಡಿಸಿಕೊಳ್ಳಲಾದ ವಿವಿಧ ವಸ್ತುಗಳ ಪ್ರಾಪರ್ಟಿ ರಿಟರ್ನ್ ಪರೇಡ್ ನಡೆಸಿದರು. ಈ ವೇಳೆ ಅವರು ಮಾಧ್ಯಮಗಳಿಗೆ ಮಾಹಿತಿ ನೀಡುತ್ತಾ, ಡಿಜಿಟಲ್ ಅರೆಸ್ಟ್ ಬಗ್ಗೆ ಮಾತನಾಡಿ ಸಾರ್ವಜನಿಕರಿಗೆ ಮಾಹಿತಿ ನೀಡಿದರು.
ಜನರಿಗೆ ಅಪರಿಚಿತ ಕರೆಬಂದು ನಿಮ್ಮನ್ನ ಅರೆಸ್ಟ್ ಮಾಡಲಾಗಿದೆ ಎಂದು ಹೆದರಿಸಿದರೆ, ತಕ್ಷಣವೇ 112 ಪೊಲೀಸರಿಗೆ ಕರೆ ಮಾಡಿ ಎಂದು ಎಸ್‌ಪಿ ಮಿಥುನ್ ಕುಮಾರ್ ಹೇಳಿದ್ದಾರೆ. ಆನ್‌ಲೈನ್‌ನಲ್ಲಿ ವಿವಿಧ ಆಮೀಷಗಳನ್ನ ಒಡ್ಡುವ ಪ್ರಯತ್ನ ನಡೆಸಿದರೆ, ಅಥವಾ ನಿಮ್ಮ ಫೋನ್ ನಂಬರ್, ಆಧಾರ್ ನಂಬರ್ ತಿಳಿಸಿ, ಇವುಗಳಿಂದ ಪ್ರಾಡ್ ಆಗಿದ್ದು ನಿಮ್ಮನ್ನ ಅರೆಸ್ಟ್ ಮಾಡಲಾಗುತ್ತದೆ ಎಂದು ಖಾಕಿ ಡ್ರೆಸ್ ಹಾಕಿಕೊಂಡು ಕಾಲ್ ಮಾಡಿದರೆ, ತಕ್ಷಣವೇ 112 ಪೊಲೀಸರಿಗೆ ಮಾಹಿತಿ ನೀಡಿ, ಮುಂದಿನ ಕ್ರಮವನ್ನು ಅವರುಗಳು ಕೈಗೊಳ್ಳುತ್ತಾರೆ ಎಂದು ಎಸ್‌ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ. 112 ಪೊಲೀಸರಿಗೆ ಮಾಹಿತಿ ನೀಡಲು ಸಾಧ್ಯವಾಗದೇ ಹೋದಲ್ಲಿ ಸ್ಥಳೀಯ ಸ್ಟೇಷನ್‌ಗೆ ಮಾಹಿತಿ ನೀಡುವ ಸಾರ್ವಜನಿಕರು ಡಿಜಿಟಲ್ ವಂಚನೆಯಿಂದ ಬಚಾವ್ ಆಗಬಹುದು ಎಂದಿದ್ದಾರೆ.
SUMMARY | SP Mithun Kumar said that if you receive a call in the name of Digital Arrest, call 112.


KEY WORDS |SP Mithun Kumar said , if you receive a call in the name of ,Digital Arrest, call 112 police