SHIVAMOGGA | MALENADUTODAY NEWS | ಮಲೆನಾಡು ಟುಡೆ Dec 17, 2024
ಶಿವಮೊಗ್ಗ ಪೊಲೀಸ್ ಇಲಾಖೆಯ ವ್ಯಾಪ್ತಿಯಲ್ಲಿ 2024 ರ ಅವಧಿಯಲ್ಲಿ ನಡೆದ ಕಳ್ಳತನ ಸೇರಿದಂತೆ ಇತರೇ ಪ್ರಕರಣಗಳನ್ನು ಇತ್ಯರ್ಥ ಪಡಿಸುವಲ್ಲಿ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯು ನಂಬರ್ ಒನ್ ಸಾಧನೆಯನ್ನ ಮೆರೆದಿದೆ. ವರ್ಷದ ಅವಧಿಯಲ್ಲಿ ಸಾಗರ ಗ್ರಾಮಾಂತರ ಠಾಣೆಯ ಸಿಬ್ಬಂಧಿ ಶೇ 150ರಷ್ಟು ಪ್ರಕರಣಗಳನ್ನು ಬೇಧಿಸಿದ್ದು, ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ಪೈಕಿ ಮೊದಲ ಸ್ಥಾನದಲ್ಲಿದೆ.
ಈ ಸಂಬಂಧ ನಿನ್ನೆ ದಿನ ಎಸ್‌ಪಿ ಮಿಥುನ್ ಕುಮಾರ್ ಶ್ಲಾಘನೆ ವ್ಯಕ್ತಪಡಿಸಿದ್ದು, ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಶೇ 150ರಷ್ಟು ಪ್ರಕರಣಗಳನ್ನು ಬೇಧಿಸಲಾಗಿದೆ ಎಂದರು. ಅಲ್ಲದೆ ಜಿಲ್ಲೆ ವಿವಿಧ ಪೊಲೀಸ್ ಠಾಣೆಗಳಲ್ಲೂ ಶೇ 70ರಿಂದ ಶೇ 80ರಷ್ಟು ಪ್ರಕರಣಗಳನ್ನು ಪತ್ತೆ ಮಾಡಲಾಗಿದ್ದು, ಸಂಬಂಧಿಸಿದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಅಂತಾ ಮಾಹಿತಿ ನೀಡಿದರು.
ಭದ್ರಾವತಿಯ ನ್ಯೂಟೌನ್ ಠಾಣೆ ಪೊಲೀಸರು ಕಳವು ನಡೆದ 48 ಗಂಟೆಗಳಲ್ಲಿ ₹22 ಲಕ್ಷ ಮೌಲ್ಯದ 290 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡು ವಾರಸುದಾರರಿಗೆ ಮರಳಿಸಿದ್ದು ವಿಶೇಷ ದಾಖಲಾಗಿದೆ ಎಂದು ಮಾಹಿತಿ ನೀಡಿದರು.
SUMMARY | Sagar Rural Police Station has achieved number one achievement in resolving theft and other cases that occurred within the jurisdiction of the Shivamogga Police Department during 2024.
KEY WORDS | Sagar Rural Police Station has achieved number one, achievement in resolving theft and other cases , Shivamogga Police Department during 2024