SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 9, 2024
ಶಿವಮೊಗ್ಗ | ಕುವೆಂಪು ವಿಶ್ವವಿದ್ಯಾಲಯದ ಪಠ್ಯತರ ಚಟುವಟಿಕೆ ವಿಭಾಗವು ವಿವಿಯ ಆವರಣದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಸಾಂಸ್ಕೃತಿಕ ಸ್ಪರ್ಧೆ ಸಹ್ಯಾದ್ರಿ ಉತ್ಸವನ್ನು ಆಯೋಜಿಸಿದೆ.
ಈ ಕಾರ್ಯಕ್ರಮಕ್ಕೆ ವಿಶ್ವವಿದ್ಯಾಲಯದ ಕುಲಪತಿ ಶರತ್ ಅನಂತಮೂರ್ತಿ ಅವರು ವಿವಿ ಅವರಣದಲ್ಲಿನ ಕುವೆಂಪು ಪುತ್ತಲಿಗೆ ಮಾಲಾರ್ಪಣೆ ಮಾಡುವ ಮೂಲಕ ಸಾಂಸ್ಕೃತಿಕ ಪಥ ಸಂಚಲನಕ್ಕೆ ಚಾಲನೆ ನೀಡಿದರು. ಈ ಸಾಂಸ್ಕೃತಿಕ ಸ್ಪರ್ಧೆಯಲ್ಲಿ 200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ಜಾನಪದ ಉಡುಗೆ ತೊಡುಗೆ ಸೇರಿದಂತೆ ಅನೇಕ ವೇಷ ಭೂಷಣಗಳಲ್ಲಿ ವಿಂಚಿದರು. ಹಾಗೆಯೇ ವಿವಿಯ ಆವರಣದಲ್ಲಿ ವಿದ್ಯಾರ್ಥಿಗಳ ಹಾಡು ಕುಣಿತ ನೆರೆದಿರುವವರ ಮನ ಸೆಳೆಯಿತು.
ಗಮನ ಸೆಳೆದ ಮಲೆನಾಡ ಹಾಳೆ ಟೊಪ್ಪಿ
ಮಲೆನಾಡ ಹಾಳೆ ಟೊಪ್ಪಿ ಈ ಕಾರ್ಯಕ್ರಮದ ಪ್ರಮುಖ ಕೇಂದ್ರಬಿಂದು ವಾಗಿತ್ತು. ಯುವತಿಯರು ಸಾಂಪ್ರದಾಯಿಕ ಸೀರೆ ಹಾಗು ತಲೆ ಮೇಲೆ ಹಾಳೆ ಟೊಪ್ಪಿ ತೊಟ್ಟು ಹೆಜ್ಜೆ ಹಾಕಿದರು. ಸುತ್ತಲೂ ಹಚ್ಚ ಹಸಿರಿನಿಂದಿರ ಕೂಡಿರುವ ವಾತಾವರಣ ಹಾಗೆ ಯವತಿಯರು ಹಾಕಿರುವ ವೇಷ ಭೂಷಣ 20 ವರ್ಷದ ಹಿಂದಿನ ಮಲೆನಾಡ ವಾತಾವರಣವನ್ನು ಅಲ್ಲಿ ಮರು ಸೃಷ್ಠಿ ಮಾಡಿದಂತಿತ್ತು. ಹಾಗೆಯೇ ಈ ಉಡುಗೆ ಸುತ್ತ ನೆರೆದಿರುವವರನ್ನು ಆಕರ್ಷಿಸಿತ್ತು.
ಅಬ್ಬರಿಸಿದ ಮಹಿಷಾಸುರ ಹಾಗೂ ಕಾಳಿ ಮಾತೆ
ಇದರ ನಡುವೇ ಅನೇಕ ವೇಷ ಭೂಷಣಗಳು ಕಣ್ಮನಸೆಳೆದವು. ಅದರಲ್ಲಿ ಮಹಿಷಾಸುರು ಕತ್ತಿ ಹಿಡಿದು ಅಬ್ಬರಿಸಿದ್ದು, ಹಾಗೆಯೇ ಕಾಳಿ ಮಾತೆ ಕೊರಳಲ್ಲಿ ಅಸ್ಥಿ ಪಂಜರದ ಹಾರ ಹಾಕಿಕೊಂಡು ನಡೆಯುತ್ತಿರುವ ಸೀನ್ ಎಲ್ಲರಿಗೂ ರೋಮಾಂಚನದ ಜೊತೆಗೆ ಭಯವನ್ನು ಹುಟ್ಟಿಸಿದಂತೂ ಸತ್ಯ.
ಇದರ ನಡುವೆ ಬಯಲಾಟ, ಪುರುಷ ಮತ್ತು ಮಹಿಳೆಯರ ಸಂಪ್ರದಾಯಿಕ ಉಡುಪು, ಕೊಡವ, ಲಂಬಾಣಿ, ಬುಡಕಟ್ಟು ವೇಷಧಾರಿಗಳು, ಪೂಜಾ ಕುಣಿತ, ಸೋಮನಕುಣಿತ, ಡೊಳ್ಳು ಕುಣಿತ, ನಂದಿಕೋಲು, ವೀರಗಾಸೆ, ಕಂಸಾಲೆ, ವೀರನಾರಿಯರು, ದೇವತೆಗಳ ಅಷ್ಟವತಾರ, ಸಾಧಕರು, ಮತ್ತಿತರರು ವೇಷಭೂಷಣಗಳನ್ನು ಧರಿಸಿ ವಿದ್ಯಾರ್ಥಿಗಳು ಎಲ್ಲರನ್ನೂ ರಂಜಿಸಿದರು, ವಿದ್ಯಾರ್ಥಿಗಳ ನೈಜ್ಯವಾದ ಉಡುಗೆ ತೊಡುಗೆ ಹಾಗೂ ತಮ್ಮಹಾವ ಭಾವದಿಂದ ಎಲ್ಲರ ಮನ ಗೆದ್ದರು, ಅದರು ಕೆಲವೊಂದು ತುಣುಕುಗಳು ಇಲ್ಲಿವೆ
SUMMARY | The Department of Extra-curricular Activities of Kuvempu University has organised a three-day cultural competition Sahyadri Festival at the University premises from today.
KEYWORDS | kuvempu University, Sahyadri Festival, cultural competition, shivamogga,