ಶಿವಮೊಗ್ಗಕ್ಕೆ ಆಗಮಿಸಿದ ಡಾಲಿ ಪಿಕ್ಚರ್ಸ್ ನಿರ್ಮಾಣದ ‘ಜೆಸಿ’ ಚಿತ್ರತಂಡ

ಶಿವಮೊಗ್ಗ: ಸ್ಯಾಂಡಲ್​ವುಡ್ ನಟ ಡಾಲಿ ಧನಂಜಯ ಅವರ ಒಡೆತನದ ಡಾಲಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಮತ್ತು ಶೀಘ್ರದಲ್ಲೇ ತೆರೆಗೆ ಬರಲಿರುವ ‘ಜೆಸಿ’ ಚಲನಚಿತ್ರದ ತಂಡವು ಶಿವಮೊಗ್ಗ ನಗರಕ್ಕೆ ಭೇಟಿ ನೀಡಿದೆ.

ಸುಳ್ಳು ಹೇಳಿ 2 ನೇ ಮದುವೆಯಾದ ತೀರ್ಥಹಳ್ಳಿಯ ವ್ಯಕ್ತಿಗೆ ಶಿವಮೊಗ್ಗ ಕೋರ್ಟ್​ ಕೊಟ್ಟ ಶಿಕ್ಷೆಯೇನು ಗೊತ್ತಾ..?

ಚಿತ್ರದ ಪ್ರಚಾರ ಮತ್ತು ವಿವಿಧ ಕಾರ್ಯಗಳ ನಿಮಿತ್ತ ಮಲೆನಾಡಿಗೆ ಆಗಮಿಸಿದ ಚಿತ್ರತಂಡದ ಪ್ರಮುಖ ಕಲಾವಿದರನ್ನು ಸ್ಥಳೀಯ ಸಿನಿಮಾ ಆಸಕ್ತರು ಹಾಗೂ ಸಂಘಟಕರು ಆತ್ಮೀಯವಾಗಿ ಬರಮಾಡಿಕೊಂಡರು. ಚಿತ್ರದ ನಾಯಕ ನಟ ಸೂರ್ಯ ಪ್ರಖ್ಯಾತ್, ಸಿನಿಮಾದಲ್ಲಿ ಖಳನಾಯಕನಾಗಿ ಅಬ್ಬರಿಸಲಿರುವ ವಿಜಯ ಸಿಂಹ, ಹಾಸ್ಯ ನಟ ಜಾಲಿ ಮಲ್ಲಣ್ಣ ಹಾಗೂ ಅಲ್ಲು ಕಲೀಂ ಅವರು ನಗರಕ್ಕೆ ಆಗಮಿಸಿದ್ದರು.

ಶಿವಮೊಗ್ಗಕ್ಕೆ ಆಗಮಿಸಿದ ಕಲಾವಿದರ ತಂಡವನ್ನು ಅನಿಲ್ ಆಚಾರ್ ಮತ್ತು ಸಿಹಿಮೊಗ್ಗೆ ಪ್ರೊಡಕ್ಷನ್ಸ್‌ನ ಪುನೀತ್ ಶೆಟ್ಟಿ ಅವರು ಹೂಗುಚ್ಛ ನೀಡಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ನ್ಯೂಟನ್ ಮತ್ತು ಲೋಮ ಹರ್ಷ ಅವರು ಜೊತೆಗಿದ್ದು, ಡಾಲಿ ಧನಂಜಯ ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಹೊಸ ಚಿತ್ರಕ್ಕೆ ಯಶಸ್ಸು ಸಿಗಲಿ ಎಂದು ಶುಭ ಹಾರೈಸಿದರು. ಚಿತ್ರತಂಡವು ಶಿವಮೊಗ್ಗದಲ್ಲಿ ಸಿಕ್ಕ ಆತೀಥ್ಯಕ್ಕೆ ಸಂತಸ ವ್ಯಕ್ತಪಡಿಸಿತು.

JC Movie Team Visits Shivamogga for Promotion

JC Movie Team Visits Shivamogga for Promotion
JC Movie Team Visits Shivamogga for Promotion
shivamogga car decor sun control house
shivamogga car decor sun control house
ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು