ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ! ನೌಕರರ ಪರವಾಗಿ ಸರ್ಕಾರಕ್ಕೆ ಸಿಎಸ್​ ಷಡಾಕ್ಷರಿ ಪತ್ರ! ಏನಿದೆ ಅದರಲ್ಲಿ ಓದಿ

ajjimane ganesh

Govt Employees Union ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ:  ಸರ್ಕಾರ ಹೊಸದಾಗಿ ಉದ್ಯೋಗವಕಾಶ ನೀಡುವುದಾಗಿ ಘೋಷಿಸಿರುವ ಹೊತ್ತಿನಲ್ಲಿಯೇ ರಾಜ್ಯ ಸರ್ಕಾರಿ ನೌಕರರ ಪರವಾಗಿ ರಾಜ್ಯಾಧ್ಯಕ್ಷ ಸಿಎಸ್ ಷಡಾಕ್ಷರಿ ಸರ್ಕಾರಿ ನೌಕರರ ಪರವಾಗಿ ಸರ್ಕಾರಕ್ಕೆ ಮನವಿಯೊಂದನ್ನ ಮಾಡಿಕೊಂಡಿದ್ದಾರೆ. ಈ ಸಂಬಂಧ ಸರ್ಕಾರಕ್ಕೆ ಪತ್ರ ಬರೆದಿರುವ ಅವರು  ಹಿಂದುಳಿದ ವರ್ಗಗಳ ಮೀಸಲಾತಿ ಸಂಬಂಧದಲ್ಲಿ ಸರ್ಕಾರಿ ನೌಕರರ ಮಕ್ಕಳ ಉದ್ಯೋಗ ಮತ್ತು ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಪ್ರಮಾಣಪತ್ರಗಳನ್ನು ನೀಡುವಾಗ, ಅವರ ವೇತನದ ಆದಾಯವನ್ನು ಪರಿಗಣಿಸಬಾರದು ಎಂದು ಕೋರಿದ್ದಾರೆ. 

OBC Reservation Govt Employees Union Demands Excluding Salary Income 
OBC Reservation Govt Employees Union Demands Excluding Salary Income

ಶಾಂತಿ ನಿವಾಸವಾದ ಸಾನಿಧ್ಯ ಸಾವಿನ ಮನೆಯಾಗಿದ್ದು ಹೇಗೆ..? ಜೆಪಿ ಬರೆಯುತ್ತಾರೆ.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ರಾಜ್ಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಿಗೆ ಬರೆದಿರುವ ಮನವಿ ಪತ್ರದಲ್ಲಿ ಈ ಕೋರಿಕೆಯನ್ನು ಸಲ್ಲಿಸಿದ್ದಾರೆ. 

 ಸರ್ಕಾರಿ ನೌಕರರ ವೇತನದ ಆದಾಯವನ್ನು ಒಟ್ಟು ವಾರ್ಷಿಕ ಆದಾಯದ ಲೆಕ್ಕಾಚಾರದಲ್ಲಿ ಸೇರಿಸುತ್ತಿರುವುದರಿಂದ ಸಾಮಾಜಿಕವಾಗಿ ಹಿಂದುಳಿದ ವರ್ಗಗಳಿಗೆ ಸೇರಿದ ನೌಕರರ ಮಕ್ಕಳಿಗೆ ಮೀಸಲಾತಿ ಸೌಲಭ್ಯದಿಂದ ಅನ್ಯಾಯವಾಗುತ್ತಿದೆ ಅಂತಾ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. 

OBC Reservation Govt Employees Union Demands Excluding Salary Income

  • ಈ ಅನ್ಯಾಯ ತಪ್ಪಿಸಲು, ಹಿಂದುಳಿದ ವರ್ಗಗಳ ಮೀಸಲಾತಿಯಲ್ಲಿ ಕೆನೆಪದರ ನೀತಿಗೆ ನಿಗದಿಪಡಿಸಿರುವ ಪ್ರಸ್ತುತ ವಾರ್ಷಿಕ ಆದಾಯ ಮಿತಿಯನ್ನು 8 ಲಕ್ಷ ರೂಪಾಯಿಗಳಿಂದ 15 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಬೇಕು 
  • ರಾಜ್ಯ 7ನೇ ವೇತನ ಆಯೋಗದ ಶಿಫಾರಸುಗಳು ಜಾರಿಗೆ ಬಂದಿರುವುದರಿಂದ ಸರ್ಕಾರಿ ನೌಕರರ ವಾರ್ಷಿಕ ಆದಾಯ ಮಿತಿಯು ಹೆಚ್ಚಳವಾಗಿದೆ. ಪರಿಣಾಮವಾಗಿ, ಅನೇಕ ರಾಜ್ಯ ಸರ್ಕಾರಿ ನೌಕರರ ಮಕ್ಕಳು, ಮುಖ್ಯವಾಗಿ ಗ್ರೂಪ್-ಸಿ ಮತ್ತು ಗ್ರೂಪ್-ಡಿ ವೃಂದದ ನೌಕರರ ಕುಟುಂಬಗಳು, ಕೆನೆಪದರ ನೀತಿಗೆ ಅನುಗುಣವಾಗಿ ಮೀಸಲಾತಿ ಪಡೆಯಲು ಅನರ್ಹರಾಗುತ್ತಿದ್ದಾರೆ. 
  • ಇದರಿಂದಾಗಿ ಶೈಕ್ಷಣಿಕ ಮತ್ತು ಉದ್ಯೋಗದ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ ಎಂದು ರಾಜ್ಯ ಸಂಘಕ್ಕೆ ವಿವಿಧ ವೃಂದ ಸಂಘಗಳಿಂದ ಮನವಿ ಬಂದಿರುವುದಾಗಿ ತಿಳಿಸಿದ್ದಾರೆ. 

ಇವತ್ತಿನಿಂದ 3 ದಿನ ಕರೆಂಟ್ ಇರಲ್ಲ! ಶಿವಮೊಗ್ಗ, ಭದ್ರಾವತಿ, ಆನವಟ್ಟಿಯಲ್ಲಿ ಪವರ್ ಕಟ್ ಎಲ್ಲೆಲ್ಲಿ!

ಕೇಂದ್ರ ಸರ್ಕಾರ ಹಿಂದುಳಿದ ವರ್ಗಗಳಿಗೆ ಕೆನೆಪದರ ನೀತಿ ಅಳವಡಿಸುವ ಸಂಬಂಧ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಈ ಮಾರ್ಗಸೂಚಿಗಳಲ್ಲಿ ಯಾವುದೇ ಬದಲಾವಣೆ ಮಾಡದೆ, ಬಹುತೇಕ ಎಲ್ಲಾ ರಾಜ್ಯಗಳು ಕೇಂದ್ರದ ನಿಯಮಗಳನ್ನು ಯಥಾಸ್ಥಿತಿಯಲ್ಲಿ ಕಾಯ್ದುಕೊಂಡು, ಕೇಂದ್ರ ಮತ್ತು ತಮ್ಮದೇ ರಾಜ್ಯದ ಅಧೀನ ಇಲಾಖೆಗಳಲ್ಲಿನ ಶಿಕ್ಷಣ ಮತ್ತು ಉದ್ಯೋಗಕ್ಕೆ ಸರ್ಕಾರಿ ನೌಕರರ ವೇತನವನ್ನು ಕುಟುಂಬ ಆದಾಯಕ್ಕೆ ಪರಿಗಣಿಸದೆ ಮೀಸಲಾತಿ ಪ್ರಮಾಣಪತ್ರಗಳನ್ನು ನೀಡುತ್ತಿವೆ ಎಂದು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಶಿವಮೊಗ್ಗದಿಂದ ಭದ್ರಾವತಿಗೆ ಹೋಗ್ತಿದ್ದವನಿಗೆ ಡೈರಿ ಸರ್ಕಲ್ ಬಳಿ ಅಚ್ಚರಿ! ಹೋಂಡಾ ಆಸೆಂಟ್ ಕಾರಲ್ಲಿ ಬಂದು ಹಾರ್ನೆಟ್ ಬೈಕ್ ದರೋಡೆ

ಉಳಿದಂತೆ, ರಾಜ್ಯ ಸರ್ಕಾರ ತನ್ನ ಅಧೀನ ಸಂಸ್ಥೆಗಳಲ್ಲಿ ಶೈಕ್ಷಣಿಕ ಮತ್ತು ಉದ್ಯೋಗಕ್ಕೆ ಸಂಬಂಧಿಸಿದಂತೆ ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಕೆನೆಪದರ ಮೀಸಲಾತಿಗಾಗಿ ಜಾತಿ ಮತ್ತು ಆದಾಯ ಪ್ರಮಾಣಪತ್ರಗಳನ್ನು (ನಮೂನೆ-ಎಫ್) ನೀಡುವಾಗ ಸರ್ಕಾರಿ ನೌಕರರ ವೇತನದ ಆದಾಯವನ್ನು ಕುಟುಂಬದ ಒಟ್ಟು ವಾರ್ಷಿಕ ಆದಾಯಕ್ಕೆ ಸೇರಿಸಿ ಸಂಪತ್ತಿನ ಲೆಕ್ಕಾಚಾರ ಮಾಡಲಾಗುತ್ತಿದೆ. 

ಹೊಸನಗರ ರೂಟ್​ನಲ್ಲಿ ಹೋಗ್ತಿದ್ದಾಗ ದೊಪ್ಪಂತ ಬಿತ್ತು ಮರ! ಕಾರು ಪೂರ್ತಿ ಜಖಂ!

ಇದರಿಂದಾಗಿ, ರೂ. 8 ಲಕ್ಷಕ್ಕೂ ಹೆಚ್ಚಿನ ಆದಾಯವಿರುವವರಿಗೆ ಮೀಸಲಾತಿ ಪ್ರಮಾಣಪತ್ರ ನೀಡುತ್ತಿಲ್ಲ. ಆದರೆ ಕೇಂದ್ರ ಸರ್ಕಾರದ ಅಧೀನ ಇಲಾಖೆಗಳಿಗೆ ಸಂಬಂಧಿಸಿದಂತೆ ರಾಜ್ಯದ ಕೆಲವು ತಾಲ್ಲೂಕು ಕಚೇರಿಗಳಿಂದ ನಮೂನೆ-ಎಫ್ ಪ್ರಮಾಣಪತ್ರಗಳನ್ನು ವಿತರಿಸಲಾಗುತ್ತಿದೆ ಎಂದಿದ್ದಾರೆ.

ಹೆಮ್ಮೆಯ ಕಾಲೇಜಿಗೆ 50ರ ಸಂಭ್ರಮ: ಸಾಗರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸುವರ್ಣ ಮಹೋತ್ಸವ

ಆದ್ದರಿಂದ, ಕೇಂದ್ರ ಸರ್ಕಾರ ಮತ್ತು ಇತರೆ ರಾಜ್ಯಗಳಲ್ಲಿರುವಂತೆ ರಾಜ್ಯದಲ್ಲೂ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಕೆನೆಪದರ/ಕೆನೆಪದರರಹಿತ ಪ್ರಮಾಣಪತ್ರವನ್ನು ನಮೂನೆ-ಎಫ್‌ನಲ್ಲಿ ವಿತರಿಸುವಾಗ ಅಧಿಕಾರಿ/ನೌಕರರ ವೇತನ ಆದಾಯವನ್ನು) ಪರಿಗಣಿಸಬಾರದು. ಬದಲಾಗಿ, ಅವರ ವ್ಯವಹಾರ, ಕೈಗಾರಿಕೆ ಅಥವಾ ಇತರೆ ಮೂಲಗಳಿಂದ ಬರುವ ಆದಾಯದ ಆಧಾರದ ಮೇಲೆ ಸಂಪತ್ತು ಪರೀಕ್ಷೆ ನಡೆಸಿ ಒಟ್ಟು ವಾರ್ಷಿಕ ಆದಾಯವನ್ನು ಲೆಕ್ಕ ಹಾಕಿ ಜಾತಿ ಮತ್ತು ಆದಾಯ ಪ್ರಮಾಣಪತ್ರಗಳನ್ನು ವಿತರಿಸುವಂತೆ ಸಂಬಂಧಪಟ್ಟ ಇಲಾಖೆಗೆ ಸೂಚನೆ ನೀಡಿ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದ್ದಾರೆ.

OBC Reservation Govt Employees Union Demands Excluding Salary Income, Raising Creamy Layer Limit to ₹15 Lakh
OBC Reservation Govt Employees Union Demands Excluding Salary Income, Raising Creamy Layer Limit to ₹15 Lakh

ನಾಳೆ ಡೆವಿಲ್​ ಚಿತ್ರ ಬಿಡುಗಡೆ, ಶಿವಮೊಗ್ಗದಲ್ಲಿ ಹೇಗಿದೆ ಸೆಲೆಬ್ರೆಷನ್​ 

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

OBC Reservation Govt Employees Union Demands Excluding Salary Income, Raising Creamy Layer Limit to ₹15 Lakh
OBC Reservation Govt Employees Union Demands Excluding Salary Income, Raising Creamy Layer Limit to ₹15 Lakh
OBC Reservation Govt Employees Union Demands Excluding Salary Income, Raising Creamy Layer Limit to ₹15 Lakh
OBC Reservation Govt Employees Union Demands Excluding Salary Income, Raising Creamy Layer Limit to ₹15 Lakh
Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ, ಒಬಿಸಿ ಮೀಸಲಾತಿ ಕೆನೆಪದರ ಮಿತಿ 15 ಲಕ್ಷಕ್ಕೆ ಹೆಚ್ಚಿಸಲು ಮತ್ತು ವೇತನ ಹೊರಗಿಡಲು ಸರ್ಕಾರಿ ನೌಕರರ ಸಂಘದ ಆಗ್ರಹ OBC Reservation Govt Employees Union Demands Excluding Salary Income, Raising Creamy Layer Limit to ₹15 Lakh
Share This Article