Daily Rashi Phala Mesha to Meena ಡಿಸೆಂಬರ್,03, 2025 : ಮಲೆನಾಡು ಟುಡೆ ಸುದ್ದಿ : ವಿಶ್ವಾವಸು ನಾಮ ಸಂವತ್ಸರದ, ದಕ್ಷಿಣಾಯಣ, ಹೇಮಂತ ಋತುವಿನಲ್ಲಿರುವ ಮಾರ್ಗಶಿರ ಮಾಸದ ಇಂದು ಶುಕ್ಲ ತ್ರಯೋದಶಿ ತಿಥಿಯು ಮಧ್ಯಾಹ್ನ 10.05ರವರೆಗೆ ಇದ್ದು, ನಂತರ ಚತುರ್ದಶಿ ಆರಂಭವಾಗಲಿದೆ. ಭರಣಿ ನಕ್ಷತ್ರವು ಸಂಜೆ 4.53ರವರೆಗೆ ಇರಲಿದ್ದು, ಬಳಿಕ ಕೃತ್ತಿಕಾ ನಕ್ಷತ್ರವು ಪ್ರವೇಶಿಸಲಿದೆ. ರಾಹುಕಾಲ ಮಧ್ಯಾಹ್ನ 12.00ರಿಂದ 1.30ರವರೆಗೆ ಮತ್ತು ಯಮಗಂಡ ಕಾಲ ಬೆಳಿಗ್ಗೆ 7.30ರಿಂದ 9.00ರವರೆಗೆ ಇರಲಿದೆ. ಅಮೃತ ಘಳಿಗೆಗಳು ಮಧ್ಯಾಹ್ನ 12.21ರಿಂದ 1.52ರವರೆಗೆ ಇರಲಿವೆ.

ಇವತ್ತಿನ ರಾಶಿಫಲ/Daily Rashi Phala Mesha to Meena
ಮೇಷ : ಶುಭ ಸಮಾಚಾರ. ಆರ್ಥಿಕವಾಗಿ ಒಳ್ಳೆಯದಾಗಲಿದೆ, ಹಣಕಾಸು ಪರಿಸ್ಥಿತಿ ಸುಧಾರಿಸಲಿದೆ.. ವಾಹನ ಖರೀದಿಯ ಯೋಗವಿದೆ. ವ್ಯಾಪಾರ ವ್ಯವಹಾರ ಮಧ್ಯಮ ಗತಿಯಲ್ಲಿ ಸಾಗಲಿದ್ದು, ಉದ್ಯೋಗದಲ್ಲಿ ಹೊಸ ಜವಾಬ್ದಾರಿ ಸಿಗಬಹುದು.
ವೃಷಭ: ಪ್ರಮುಖ ಕೆಲಸಗಳಲ್ಲಿ ನಿರೀಕ್ಷಿತ ಯಶಸ್ಸು. ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಮಾನಸಿಕವಾಗಿ ಸಮಸ್ಯೆಯಾಗಲಿದೆ. ಕುಟುಂಬ ಸದಸ್ಯರೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಮೂಡಬಹುದು. ಅನಿರೀಕ್ಷಿತ ಪ್ರಯಾಣ. ವ್ಯವಹಾರದಲ್ಲಿ ಹಾಕಿದ ಬಂಡವಾಳದ ಬಗ್ಗೆ ಯೋಚನೆ ಮೂಡಬಹುದು. ಉದ್ಯೋಗಸ್ಥರಿಗೆ ಹೆಚ್ಚುವರಿ ಕೆಲಸದ ಒತ್ತ
ಮಿಥುನ: ಸಾಲ ತೀರಿಸುವ ಅವಕಾಶ ದೊರೆಯಲಿದೆ. ಆತ್ಮೀಯರಿಂದ ಒಳ್ಳೆಯ ಸುದ್ದಿ ಕೇಳುವ ಸಾಧ್ಯತೆ ಇದೆ. ವಾಹನ ಸೌಕರ್ಯ. ಮಾತುಕತೆ, ಚರ್ಚೆಗಳಲ್ಲಿ ಪ್ರಗತಿ ಕಂಡುಬರಲಿದ್ದು, ಕೆಲವು ವಿವಾದ ಇತ್ಯರ್ಥವಾಗಲಿವೆ. ವ್ಯಾಪಾರಗಳಲ್ಲಿನ ಒತ್ತಡ ನಿವಾರಣೆಯಾಗಲಿವೆ. ಉದ್ಯೋಗದಲ್ಲಿ ನಿರೀಕ್ಷೆ ಮಾಡದ ಬದಲಾವಣೆಗ ಎದುರಿಸಬೇಕಾಗುತ್ತದೆ.

ಕರ್ಕಾಟಕ: ಹೊಸ ಕಾರ್ಯಗಳಿಗೆ ಶುಭಾರಂಭ. ಮಂಗಳಕರ ಕಾರ್ಯಕ್ರಮಗಳಲ್ಲಿ ಭಾಗಿಯಾಗುವಿರಿ. ಅನ್ಯೋನ್ಯತೆ ಹೆಚ್ಚಲಿದೆ. ಆರ್ಥಿಕ ಪರಿಸ್ಥಿತಿ ಸುದಾರಿಸಲಿದೆ.. ಕೆಲವು ವಿವಾದಗಳಿಗೆ ಪರಿಹಾರ ದೊರೆಯಲಿದೆ. ವ್ಯಾಪಾರ ಲಾಭದ ಹಾದಿಯಲ್ಲಿ ಸಾಗಲಿದ್ದು, ಉದ್ಯೋಗ ಕ್ಷೇತ್ರದಲ್ಲಿ ಯಾವುದೇ ಅಡೆತಡೆಗಳು ಇರುವುದಿಲ್ಲ.
ಕ್ರಿಕೆಟ್: ಸಾಗರದ ವಿರಾಟ್ ಆರ್. ಗಣ್ಯಗೆ ಕರ್ನಾಟಕ ತಂಡದಲ್ಲಿ ಸ್ಥಾನ
ಸಿಂಹ: ಹೆಚ್ಚಿನ ಒತ್ತಡ ಎದುರಿಸಬೇಕಾಗಬಹುದು. ದೂರ ಪ್ರಯಾಣ ಸಂಭವಿಸಬಹುದು. ಮನೆಯ ಹೊರಗೆ ಮತ್ತು ಒಳಗೆ ಉತ್ಸಾಹದ ವಾತಾವರಣವಿರಲಿದೆ. ಕೈಗೊಂಡ ಕೆಲಸದಲ್ಲಿ ವಿಘ್ನಎದುರಾಗುವ ಸಾಧ್ಯತೆ ಇದೆ. ವಿದ್ಯಾರ್ಥಿಗಳಿಗೆ ವಿಶೇಷ ದಿನವಾಗಿದ್ದು, ವ್ಯಾಪಾರದಲ್ಲಿ ಏರಿಳಿತ ಕಾಣಿಸಿಕೊಳ್ಳಲಿವೆ. ಕೆಲಸದ ಸ್ಥಳದಲ್ಲಿ ಹೆಚ್ಚಿನ ಕಾರ್ಯಭಾರ ಇರಲಿದೆ.
ಕನ್ಯಾ: ಈ ದಿನ ಅಷ್ಟೊಂದು ಅನುಕೂಲಕರವಾಗಿಲ್ಲ. ಬಂಧುಗಳೊಂದಿಗೆ ಮಾತಿನ ಚಕಮಕಿ. ಧಾರ್ಮಿಕ ಮತ್ತು ಆಧ್ಯಾತ್ಮಿಕ ವಿಚಾರಗಳ ಕಡೆಗೆ ಹೆಚ್ಚು ಒಲವು ತೋರುವಿರಿ. ಅನಾರೋಗ್ಯದ ಸಮಸ್ಯೆ. ಅಡೆತಡೆಗಳು ಎದುರಾಗಲಿವೆ. ವ್ಯಾಪಾರ ಹೆಚ್ಚಿನ ಲಾಭ ತಂದುಕೊಡದಿರಬಹುದು. ಉದ್ಯೋಗ ವೃತ್ತಿಯಲ್ಲಿ ಕಿರಿಕಿರಿ ಆಗಬಹುದು.
ಮಲೆನಾಡಲ್ಲಿ ಅಡಿಕೆ ದರ ಏರಿಳಿತ: ಶಿವಮೊಗ್ಗ, ಸಾಗರ ಸೇರಿದಂತೆ ಹಲವು APMC ಅಡಕೆ ರೇಟ್‌ಗಳು ಇಲ್ಲಿವೆ
ತುಲಾ: ಆರ್ಥಿಕ ನೆರವು ಅಥವಾ ಧನಲಾಭ. ಹೊಸ ವ್ಯಕ್ತಿಗಳ ಪರಿಚಯ. ಶುಭ ಸಮಾಚಾರ, ಅಪರೂಪದ ಸನ್ಮಾನ ಗೌರವ. ಹೊಸ ವಾಹನ ಖರೀದಿಸುವ ಸಾಧ್ಯತೆ ಇದೆ. ವ್ಯಾಪಾರ ವಹಿವಾಟು ಮತ್ತಷ್ಟು ಅಭಿವೃದ್ಧಿ ಹೊಂದಲಿವೆ. ಉದ್ಯೋಗ ಕ್ಷೇತ್ರದಲ್ಲಿ ಸಕಾರಾತ್ಮಕ ಮತ್ತು ಅನುಕೂಲಕರ ಪರಿಸ್ಥಿತಿ ಇರಲಿದೆ.
ವೃಶ್ಚಿಕ: ಹೊಸ ಉತ್ಸಾಹ, ಕೆಲಸಗಳನ್ನು ಪೂರ್ಣಗೊಳಿಸಲಿದ್ದಾರೆ. ಗೌರವ ಮತ್ತು ಮನ್ನಣೆ ಹೆಚ್ಚಾಗಲಿದೆ. ಅನಿರೀಕ್ಷಿತವಾಗಿ ಧನಲಾಭ. ವ್ಯಾಪಾರ ಹೆಚ್ಚು ಅನುಕೂಲಕರವಾಗಿ ಸಾಗಲಿದ್ದು, ಉದ್ಯೋಗದಲ್ಲಿ ಹೊಸ ನಿರೀಕ್ಷೆಗಳು ಮೂಡಲಿವೆ.

ಧನು: ಆರ್ಥಿಕ ಸಂಕಷ್ಟ ಎದುರಿಸಬೇಕಾಗಬಹುದು. ಸಾಲದ ಪ್ರಯತ್ನ ಕೈಗೂಡದು. ಪ್ರವಾಸಗಳನ್ನು ಮುಂದೂಡುವ ಸಾಧ್ಯತೆ ಇದೆ. ಕೈಗೆತ್ತಿಕೊಂಡ ಕೆಲಸಗಳಲ್ಲಿ ಹೆಚ್ಚಿನ ಶ್ರಮ ವಹಿಸಬೇಕಾಗುತ್ತದೆ. ಆರೋಗ್ಯ ಸಂಬಂಧಿ ಸಮಸ್ಯೆ ಕಾಡಬಹುದು. ಕುಟುಂಬದ ಸದಸ್ಯರೊಂದಿಗೆ ವೈಮನಸ್ಸು ಹೆಚ್ಚಲಿದೆ. ವ್ಯಾಪಾರದಲ್ಲಿ ಸಾಮಾನ್ಯ ದಿನ, ಉದ್ಯೋಗದಲ್ಲಿ ಸಣ್ಣಪುಟ್ಟ ತೊಂದರೆ
Daily Rashi Phala Mesha to Meena
ಮಲೆನಾಡಲ್ಲಿ ಅಡಿಕೆ ದರ ಏರಿಳಿತ: ಶಿವಮೊಗ್ಗ, ಸಾಗರ ಸೇರಿದಂತೆ ಹಲವು APMC ಅಡಕೆ ರೇಟ್‌ಗಳು ಇಲ್ಲಿವೆ
ಮಕರ : ಆರ್ಥಿಕ ವ್ಯವಹಾರ ಕುಂಠಿತವಾಗಲಿವೆ. ಕೆಲಸ ಕಾರ್ಯಗಳಲ್ಲಿ ವಿಳಂಬ ಆಗಲಿದೆ. ಆಲೋಚನೆಗಳು ಸ್ಥಿರವಾಗಿ ಇರದಿರಬಹುದು. ಸ್ನೇಹಿತರೊಂದಿಗೆ ವಿವಾದ. ದೂರ ಪ್ರಯಾಣ ಕೈಗೊಳ್ಳಲಿದ್ದಾರೆ. ದೇವಾಲಯಗಳಿಗೆ ಭೇಟಿ, ವ್ಯಾಪಾರದಲ್ಲಿ ಒತ್ತಡ ಹೆಚ್ಚಾಗಲಿದ್ದು, ಉದ್ಯೋಗ ಕ್ಷೇತ್ರದಲ್ಲಿ ಸಾಮಾನ್ಯದಿನ
ಕುಂಭ: ಔತಣಕೂಟ, ಮನರಂಜನೆಯಲ್ಲಿ ಭಾಗಿಯಾಗುವ ಯೋಗವಿದೆ. ಪ್ರಯತ್ನಿಸಿದ ಕಾರ್ಯ ಸಿದ್ಧಿಯಾಗಲಿವೆ. ಹೊಸ ಪರಿಚಯ. ಭೂಮಿ ಮತ್ತು ವಾಹನ ಖರೀದಿಸುವ ಸಾಧ್ಯತೆ ಇದೆ. ವ್ಯಾಪಾರ ಸುಗಮವಾಗಿ ಸಾಗಲಿದೆ. ಉದ್ಯೋಗದಲ್ಲಿ ಖುಷಿ ಇರಲಿದೆ.
ಮೀನ: ಸ್ನೇಹಿತರೊಂದಿಗೆ ಕಲಹ. ಆರ್ಥಿಕ ವ್ಯವಹಾರದಲ್ಲಿ ವಿಶೇಷ ದಿನ. ಅನಿರೀಕ್ಷಿತ ಪ್ರಯಾಣ. ಬಂಧುಗಳ ಭೇಟಿ. ಅನಾರೋಗ್ಯ ಕಾಡಬಹುದು. ಪುಣ್ಯಕ್ಷೇತ್ರಗಳ ದರ್ಶನ. ವ್ಯಾಪಾರದಲ್ಲಿ ಕೆಲವು ಸಮಸ್ಯೆ ಎದುರಾಗಲಿದ್ದು, ಉದ್ಯೋಗದಲ್ಲಿ ಕ್ಲಿಷ್ಟಕ ಪರಿಸ್ಥಿತಿ.

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
ಸಂಬಂಧಿ ಮೇಲೆ ಹಗೆತನ, 7 ವರ್ಷ ಕಠಿಣ ಶಿಕ್ಷೆ , ಕಲ್ಲಗಂಗೂರು ಕೇಸ್ನಲ್ಲಿ ಶಿವಮೊಗ್ಗ ಕೋರ್ಟ್ನ ತೀರ್ಪು!
