ಶಿವಮೊಗ್ಗ ಸೇವಲಾಲ್ ನಗರದಲ್ಲಿ ಭದ್ರಾವತಿ ಪೇಪರ್​ ಟೌನ್ ನಿವಾಸಿ ನದೀಂ ಅರೆಸ್ಟ್! ಬರೋಬ್ಬರಿ ಮಾಲ್ ಸೀಜ್!

shivamogga Mar 14, 2024    ಮಾರಿ ಜಾತ್ರೆಯ ನಡುವೆ ಶಿವಮೊಗ್ಗ ಪೊಲೀಸರು ಗಾಂಜಾ ಮಾರಾಟಗಾರರ ಹಿಂದೆ ಬಿದ್ದಿದ್ದಾರೆ. ಇದಕ್ಕೆ ಪೂರಕವಾಗಿ ಸೇವಾಲಾಲ್ ನಗರದಲ್ಲಿ ಗಾಂಜಾ ಮಾರುತ್ತಿದ್ದ ಆಸಾಮಿಯನ್ನು ಶಿವಮೊಗ್ಗ ಸಿಇಎನ್ ಪೊಲೀಸ್ ಸ್ಟೇಷನ್ ಪೊಲೀಸರು ಹಿಡಿದಿದ್ದಷ್ಟೆ ಅಲ್ಲದೆ ಒಂದುವರೆ ಕೆಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಪೊಲೀಸ್ ಪ್ರಕಟಣೆಯನ್ನ ಸಹ ನೀಡಲಾಗಿದೆ. 

ಪ್ರಕಟಣೆಯ ವಿವರ ನೋಡುವುದಾದರೆ, ದಿನಾಂಕಃ 12-03-2024 ರಂದು ಶಿವಮೊಗ್ಗ ನಗರದ ಸೇವಲಾಲ್ ನಗರದಲ್ಲಿ ಯಾರೋ ಒಬ್ಬ ಆಸಾಮಿಯು ಮಾದಕ ವಸ್ತು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ.  

ಈ ಹಿನ್ನೆಲೆಯಲ್ಲಿ ತಿಪ್ಪೇಸ್ವಾಮಿ ಜೆ.ಎಸ್ ಪೊಲೀಸ್ ಇನ್ಸ್ ಪೆಕ್ಟರ್, ಸಿ.ಇ.ಎನ್ ಪೊಲೀಸ್ ಠಾಣೆ ರವರ ನೇತೃತ್ವದ ತಂಡ ರೇಡ್ ನಡೆಸಿದೆ. ಅಲ್ಲದೆ  ಗಾಂಜಾ ಮಾರಾಟ ಮಾಡುತ್ತಿದ್ದ ನದೀಂ @ ನದ್ದು, 26 ವರ್ಷ, ಪೇಪರ್ ಟೌನ್ ಭದ್ರಾವತಿ ಇವನನ್ನು ದಸ್ತಗಿರಿ ಮಾಡಿದೆ. ಮೇಲಾಗಿ ಅಂದಾಜು ಮೌಲ್ಯ 1,25,000/- ರೂಗಳ ಒಟ್ಟು 1 ಕೆಜಿ 535  ಗ್ರಾಂ ತೂಕದ ಒಣ ಗಾಂಜಾವನ್ನು  ಅಮಾನತ್ತು ಪಡಿಸಿಕೊಂಡಿದೆ. 

ಅಲ್ಲದೆ ಆರೋಪಿತನ ವಿರುದ್ಧ ಸಿಇಎನ್ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0030/2024  ಕಲಂ 20 (b) (ii) (B) NDPS ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ. 

Leave a Comment

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು