SHIVAMOGGA | Jan 19, 2024 | ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು ಹಾರೆಕೊಪ್ಪ (Harekoppa in Shikaripura) ಗ್ರಾಮದಲ್ಲಿ ನಡೆದ ಹೊಡೆದಾಟದ ವಿಡಿಯೋವೊಂದು ಇದೀಗ ಹೊರಬಿದ್ದಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದದಲ್ಲಿ ಹರಿದಾಡುತ್ತಿದೆ.
ಮಚ್ಚು ಲಾಂಗು ಬೀಸಿದ ಯುವಕರು
ಹಾರೆಕೊಪ್ಪದ ಒಂದು ನಿಮಿಷ 50 ಸೆಕೆಂಡ್ನಷ್ಟಿರುವ ವಿಡಿಯೋದಲ್ಲಿ ಯುವಕರು ಉದ್ದ ಮಚ್ಚುಗಳನ್ನು ಬೀಸುವ ದೃಶ್ಯವಿದೆ. ಈ ವೇಳೆ ಹೆಂಗಸರು ಅಡ್ಡಬಂದು ತಮ್ಮವರನ್ನ ರಕ್ಷಿಸಿಕೊಳ್ತಿರುವ ದೃಶ್ಯ ಸೆರೆಯಾಗಿದೆ.
ಹಾರೆಕೊಪ್ಪದಲ್ಲಿ ಏನಿದು ಘಟನೆ
ವಿಡಿಯೋ ಮೂಲದ ಬಗ್ಗೆ ವಿಚಾರಿಸಿದ ಸಂದರ್ಭದಲ್ಲಿ ನಡೆದ ಘಟನೆಯ ಬಗ್ಗೆ ಒಂದಿಷ್ಟು ಮಾಹಿತಿ ಲಭ್ಯವಾಗಿದೆ. ಅದರ ಪ್ರಕಾರ, ಹಾರೆಕೊಪ್ಪದಲ್ಲಿ ಬೈಕ್ ಓಡಿಸಿದ ವಿಚಾರಕ್ಕೆ ಈ ಗಲಾಟೆ ನಡೆದಿದೆ ಎನ್ನಲಾಗಿದೆ. ರಸ್ತೆಯಲ್ಲಿ ಸ್ಪೀಡಾಗಿ ಬೈಕ್ ಓಡಿಸಿದ ವಿಚಾರಕ್ಕೆ ಇಬ್ಬರು ಯುವಕರ ನಡುವೆ ವಾಗ್ವಾದ ನಡೆದು ಅದು ವಿಕೋಪಕ್ಕೆ ಹೋಗಿದೆ.
ವಿಡಿಯೋ ವೈರಲ್
ಅಲ್ಲದೆ ಪರಸ್ಪರ ಹೊಡೆದಾಡಿದ್ದಾರೆ. ಈ ವೇಳೆ ಎರಡು ಕಡೆಯವರು ಅಲ್ಲಿ ಜಮಾಯಿಸಿದ್ದಾರೆ. ಇಬ್ಬರ ಹೊಡೆದಾಟ ಗುಂಪಿನ ನಡುವೆ ಫೈಟ್ ಆಗಿ ಮಾರ್ಪಾಡಾಗಿದೆ. ಊರಿನವರು ಸೇರಿದ್ದಾರೆ. ಈ ವೇಳೆ ಅಲ್ಲಿದ್ದ ಯುವಕರು ಕೈಲಿ ಮಚ್ಚು ಹಿಡಿದು ಬೀಸಿದ್ದಾರೆ. ಈ ವೇಳೆ ಕೆಲವರು ಅವರನ್ನ ಹಿಡಿದು ಮಚ್ಚು ಕಸಿದುಕೊಳ್ಳುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.
ಶಿಕಾರಿಪುರ ಗ್ರಾಮಾಂತರ ಪೊಲೀಸ್‘ ಸ್ಟೇಷನ್ನಲ್ಲಿ ಕೇಸ್
ಮಲೆನಾಡು ಟುಡೆ ಗೆ ಸಿಕ್ಕಂತ ಮಾಹಿತಿ ಪ್ರಕಾರ, ಹಾರೆಕೊಪ್ಪದಲ್ಲಿ ನಡೆದ ಘಟನೆ ಸಂಬಂಧ ಎರಡು ಪ್ರತ್ಯೇಕ ಕೇಸ್ ದಾಖಲಾಗಿದೆ. ಶಿಕಾರಿಪುರ ಗ್ರಾಮಾಂತರ ಪೊಲೀಸ್ ಸ್ಟೇಷನ್ ನಲ್ಲಿ ಈ ಸಂಬಂಧ ಕೇಸ್ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿಕೊಟ್ಟು ವಿಚಾರಣೆ ಸಹ ನಡೆಸಿದ್ದಾರೆ.