SHIVAMOGGA | Dec 25, 2023 | ಫೋಟೋ ನೋಡಿ ಫೈನ್ ಹಾಕುವ ಪ್ರಕ್ರಿಯೆ ಶಿವಮೊಗ್ಗದಲ್ಲಿಯು ಜೋರಾಗುತ್ತಿದೆ. ಒಂದು ಕಡೆ ಸ್ಮಾರ್ಟ್ ಸಿಟಿ ಸರ್ಕಲ್ಗಳ ಕ್ಯಾಮಾರಗಳು ಬೆನ್ನ ಹಿಂದಿನಿಂದಲೇ ಫೋಟೋ ತೆಗೆದು ಇಂತಿಂಥ ರೂಲ್ಸ್ ಉಲ್ಲಂಘನೆ ಆಗಿದೆ ಅಂತಾ ನೋಟಿಸ್ ಕಳಿಸ್ತಿದೆ.. ಇನ್ನೊಂದೆಡೆ ಶಿವಮೊಗ್ಗ ಟ್ರಾಫಿಕ್ ಪೊಲೀಸರು ಲೋಕಲ್ಸ್ ಸೋಶಿಯಲ್ ಮೀಡಿಯಾ ಮೂಲಕ ಕಳಿಸುವ ಫೋಟೋಗಳನ್ನ ಆಧರಿಸಿಯು ಫೈನ್ ಚೀಟಿ ಹರಿಯುತ್ತಿದ್ದಾರೆ.
ಇದಕ್ಕೆ ಸಾಕ್ಷಿ ಎಂಬಂತೆ ಶಿವಮೊಗ್ಗ ಟ್ರಾಫಿಕ್ ಪೊಲೀಸರು 9(c). Driving Dangerously (Using Mobile phone) (Section 184(c) of the MV Act) (Others) (Section 184(c) of the MV Act) [Fine – 5000] ಅಡಿಯಲ್ಲಿ ಸಿಟಿ ಬಸ್ ಚಾಲಕನ ವಿರುದ್ಧ ರಸೀದಿ ಹರಿದಿದ್ದಾರೆ.
READ : Arecanut Rate? Dec 24, 2023 ರವಿವಾರ ಎಷ್ಟಿತ್ತು ಅಡಿಕೆ ದರ? ವಿವರ ಇಲ್ಲಿದೆ
ದಿನಾಂಕ 23-12-2023 ರಂದು ಸವಳಂಗ ರಸ್ತೆಯಲ್ಲಿ ಶಶಿಕುಮಾರ್ ಸಿಟಿ ಬಸ್ ಚಾಲಕ ಮೊಬೈಲ್ ನಲ್ಲಿ ಮಾತನಾಡಿಕೊಂಡು ಬಸ್ ಚಾಲನೆ ಮಾಡುತ್ತಿರುವುದನ್ನ ಆ ಬಸ್ನಲ್ಲಿದ್ದ ಪ್ರಯಾಣಿಕರೊಬ್ಬರು ಫೋಟೋ ಹೊಡೆದು ಪೊಲೀಸರಿಗೆ ಕಳುಹಿಸಿದ್ದರು.
ಈ ಫೋಟೋ ಸಾಕ್ಷಿಯನ್ನ ಆಧರಿಸಿ ಟ್ರಾಫಿಕ್ ಪೊಲೀಸರು ಸಂಚಾರ ನಿಯಮ ಉಲ್ಲಂಘನೆ ಮಾಡಿದ ಚಾಲಕನಿಗೆ ರೂ 5,000/- ದಂಡ ವಿಧಿಸಿ ಕ್ರಮ ಕೈಗೊಂಡಿರುತ್ತಾರೆ.