ಶಿವಮೊಗ್ಗ ಜಿಲ್ಲಾ ಪಂಚಾಯಿತಿಯಲ್ಲಿ ಒಟ್ಟು 39 ಕ್ಷೇತ್ರಗಳು ಫೈನಲ್! ಮೀಸಲು ಎಷ್ಟು? ಕರ್ನಾಟಕ ರಾಜ್ಯ ಪತ್ರದಲ್ಲಿರುವ ಪ್ರಕಟಣೆಯಲ್ಲಿ ಏನಿದೆ !

Malenadu Today

SHIVAMOGGA  |  Dec 22, 2023  | ಕರ್ನಾಟಕ ಗ್ರಾಮಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 308- ಇ ರಡಿ ರಚಿತವಾಗಿರುವ ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು, ಅಧಿನಿಯಮದ ಪ್ರಕರಣ 308-ಎಫ್ ರಡಿಯಲ್ಲಿನ ಉಪಬಂಧಗಳಲ್ಲಿನ ಅಧಿಕಾರದನ್ವಯ ರಾಜ್ಯದ   31 ಜಿಲ್ಲಾ ಪಂಚಾಯಿತಿಗಳಿಗೆ ಚುನಾಯಿತರಾಗಬೇಕಾದ 1126 ಸದಸ್ಯರ ಸಂಖ್ಯೆಯನ್ನು ನಿರ್ಧರಿಸಿ ಸರ್ಕಾರಕ್ಕೆ ಶಿಫಾರಸ್ಸು  ಮಾಡಿ ನೀಡಿದ್ದ  ವರದಿಯನ್ನು ಸರ್ಕಾರ  ಅಂಗೀಕರಿಸಿಸದೆ.. 

ಕೊಡಗು ಜಿಲ್ಲೆಯನ್ನು ಹೊರತುಪಡಿಸಿ ಉಳಿದಂತೆ ರಾಜ್ಯದ 30 ಜಿಲ್ಲಾ ಪಂಚಾಯಿತಿಗಳಿಗೆ ಚುನಾಯಿತರಾಗಬೇಕಾದ 1101 ಸದಸ್ಯರ ಸಂಖ್ಯೆಯನ್ನು ಸದಸ್ಯರ ಸಂಖ್ಯೆಯನ್ನು ನಿರ್ಧರಿಸಿ ಆದೇಶಿಸಲಾಗಿದೆ. ಅದರಂತೆ ದಿನಾಂಕ:16-12-2023 ರಲ್ಲಿ ಅಧಿಸೂಚನೆಯನ್ನು ಹೊರಡಿಸಿದೆ. 

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮದ ಪ್ರಕಾರ, ಸರ್ಕಾರ  ಅನುಸೂಚಿತ ಜಾತಿ, ಅನುಸೂಚಿತ ಪಂಗಡ, ಹಿಂದುಳಿದ “” ವರ್ಗ ಮತ್ತು ಹಿಂದುಳಿದ “ಬ” ವರ್ಗಗಳಿಗೆ ಸ್ಥಾನ ಮೀಸಲಿರಿಸಿ ಅಧಿಸೂಚನೆಯನ್ನು ಕರ್ನಾಟಕ ರಾಜ್ಯಪತ್ರ ಮೂಲಕ ಪ್ರಕಟಿಸಿದೆ.  ಇದರ ಪ್ರಕಾರ ಯಾವ ಜಿಲ್ಲೆಗಳಲ್ಲಿ ಎಷ್ಟು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಿವೆ. ಅವುಗಳಿಗೆ ಮೀಸಲು ಕ್ಷೇತ್ರಗಳು ಎಷ್ಟು ಎಂಬುದನ್ನ ವಿವರಿಸಲಾಗಿದೆ. 

Malenadu Today

ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳು 

ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದಂತೆ ಒಟ್ಟು 39 ಕ್ಷೇತ್ರಗಳಿದ್ದು ಈ ಪೈಕಿ 20 ಕ್ಷೇತ್ರಗಳು ಮಹಿಳೆಯರಿಗೆ ಮೀಸಲಾಗಿವೆ. ಅನುಸೂಚಿತ ಜಾತಿ ಹಾಗೂ ಪಂಗಡಗಳಿಗೆ ಸಂಬಂಧಿಸಿದಂತೆ 10 ಕ್ಷೇತ್ರಗಳಿದ್ದು ಆ ಪೈಕಿ 5 ಕ್ಷೇತ್ರಗಳು ಮಹಿಳಾ ಕ್ಷೇತ್ರವಾಗಿದೆ. ಇನ್ನೂ ಹಿಂದುಳಿದ ವರ್ಗ ಅ ಏಳು ಕ್ಷೇತ್ರ (4 ಮಹಿಳೆ) ಹಿಂದುಳಿದ ವರ್ಗ ಬ 2 ಕ್ಷೇತ್ರ (1 ಮಹಿಳೆ) ಕ್ಷೇತ್ರಗಳಿವೆ. ಇನ್ನೂ ಸಾಮಾನ್ಯ ವರ್ಗಕ್ಕೆ 20 ಕ್ಷೇತ್ರಗಳಿದ್ದು ಈ ಪೈಕಿ 10 ಮಹಿಳಾ ಕ್ಷೇತ್ರಗಳಿವೆ. 

Malenadu Today


Share This Article