ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ! ರಾಷ್ಟ್ರ ಭಕ್ತರ ಬಳಗದ ಎದುರು ಕೆಎಸ್​ ಈಶ್ವರಪ್ಪ ಹೇಳಿದ್ದೇನು?

shivamogga Mar 15, 2024 ಶಿವಮೊಗ್ಗದಲ್ಲಿ ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ರಾಷ್ಟ್ರ ಭಕ್ತರ ಬಳಗ ಕರೆದಿರುವ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡ್ತಿರುವ ಅವರ ಹೇಳಿಕೆಗಳನ್ನ ಗಮನಿಸೋದಾದರೆ, 

ತಮ್ಮ ಬೆಂಬಲಿಗರ ಮಾತುಗಳನ್ನ ಆಲಿಸಿದ ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ, ಬಳಿಕ ಯಡಿಯೂರಪ್ಪನವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಹಿಂದೇ ನಾಯಕರ ಬಳಿ ಬೇರೆಯವರ ಮಕ್ಕಳಿಗೆ ಟಿಕೆಟ್ ಕೊಡುತ್ತಿದ್ದೀರಿ ಎಂದಾಗ, ಹಿರಿಯರು ಕಾಂತೇಶ್​ಗೂ ಭವಿಷ್ಯವಿದೆ. ಈಶ್ವರಪ್ಪನವರಿಗೂ ಭವಿಷ್ಯ ಇದೆ ಎಂದಿದ್ದರು. ಆ ಬಳಿಕ ಕಾಂತೇಶ್ ಬಿಎಸ್​ ಯಡಿಯೂರಪ್ಪನವರ ಬಳಿ ಹಾವೇರಿಯಿಂದ ಸ್ಪರ್ಧೆ ಮಾಡುತ್ತೇನೆ ಎಂದಿದ್ದ. ಅವಕಾಶ ಮಾಡಿಕೊಟ್ಟರೇ , ನಿಮ್ಮ ಒಪ್ಪಿಗೆ ಇದ್ದರೇ ಹಾವೇರಿಯಿಂದ ನಿಲ್ಲುತ್ತೇನೆ ಎಂದಿದ್ದ. 

ಈ ವೇಳೆ ಹಾವೇರಿ ಟಿಕೆಟ್ ಕೊಡಿಸುವ ಹಾಗೂ ಅಲ್ಲಿ ಓಡಾಡಿ ಗೆಲ್ಲಿಸುವ ಜವಾಬ್ದಾರಿಯು ನಂದೆ ಎಂದಿದ್ದರು. ಆ ನಂತರ ಕಾಂತೇಶ್ ಓಡಾಡಲು ಆರಂಭಿಸಿದರು. ಆದರೆ ತದನಂತರ ಟಿವಿಯಲ್ಲಿ ಬಸವರಾಜ ಬೊಮ್ಮಾಯಿ ಹಾಗೂ ಶೋಭಾ ಕರಂದ್ಲಾಜೆ ಟಿಕೆಟ್ ಗಾಗಿ ಬಿಎಸ್​ವೈ ಹಠ ಹಿಡಿಯಲು ಆರಂಭಿಸಿದ್ದಾರೆ ಎಂಬ ಸುದ್ದಿ ಬಂತು. ಆಗ ಕಾರ್ಯಕರ್ತರು ಹೇಳಿದಾಗ ನಾನು ಬಿಎಸ್​ವೈ ರವರು ಹೇಳಿದ್ದಾರೆ ಅವರ ಮಾತಿನ ಮೇಲೆ ನಂಬಿಕೆ ಇದೆ ಎಂದು ಸಮಾಧಾನ ಮಾಡಿದ್ದೆ. 

ಆನಂತರ ನಮ್ಮ ಬೆಂಬಲಿಗರು ಸಹ ಬಿಎಸ್ ಯಡಿಯೂರಪ್ಪನವರನ್ನ ಭೇಟಿಮಾಡಿದಾಗ ಯಡಿಯೂರಪ್ಪನವರು ದೆಹಲಿಗೆ ಕರೆದುಕೊಂಡು ಹೋಗುತ್ತೇನೆ ಈಶ್ವರಪ್ಪನವರನ್ನ , ಟಿಕೆಟ್ ಕೊಡಿಸುವ ಪ್ರಯತ್ನ ಮಾಡುತ್ತೇನೆ ಎಂದಿದ್ದರು. ಆದರೆ ದೆಹಲಿಗೆ ಹೋಗಿ ಬರುವ ನಡುವೆಯೇ ಚಿಕ್ಕಮಗಳೂರಿನಲ್ಲಿ ಚರ್ಚೆ ಶುರುವಾಗಿತ್ತು ಶೋಭಾ ಕರಂದ್ಲಾಜೆಯವರನ್ನ ಗೆಲ್ಲಿಸಬೇಕು ಎನ್ನಲು ಆರಂಭಿಸಿದ್ದರು. ಶೋಭಾ ಕರಂದ್ಲಾಜೆಯವರನ್ನ ಗೆಲ್ಲಿಸಿಕೊಂಡು ಬರುವ ಪ್ರೀತಿ ಕಾಂತೇಶ್​ನ ಮೇಲೆ ಏಕೆ ಯಡಿಯೂರಪ್ಪನವರು ತೋರಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ. 

ನಾನು ಸುಳ್ಳು ಹೇಳುತ್ತಿಲ್ಲ, ವೈಯಕ್ತಿಕ ರಾಜಕಾರಣಕ್ಕಾಗಿ ಇಲ್ಲಿ ಮಾತನಾಡುತ್ತಿಲ್ಲ. ಬೆಂಬಲಿಗರ ಎದುರು ಮನಸ್ಸು ಬಿಚ್ಚಿ ಮಾತನಾಡುತ್ತಿದ್ದೇನೆ. ಹಾಗೊಂದು ವೇಳೇ ಸುಳ್ಳು ಹೇಳಿದ್ದರೇ ನನ್ನ ಮಗ ಹಾಳಾಗಿ ಹೋಗಲಿ. ಇದೇ ವಿಚಾರದಲ್ಲಿ ಬಸವರಾಜ ಬೊಮ್ಮಾಯಿಯವರು ನನ್ನ ಮಗನ ಹೆಸರನ್ನ ಚುನಾವಣಾ ಸಮಿತಿಯ ಸಭೆಯಲ್ಲಿ ಹೇಳಿದ್ದರು. ಆನಂತರ ಜಿಲ್ಲೆಯಿಂದ ಮೂರು ಹೆಸರು ಕಳುಹಿಸಬೇಕು ಎಂದಾಗ ಕಾಂತೇಶ್, ಶೆಟ್ಟರ್ ಮತ್ತು ಬೊಮ್ಮಾಯಿಯವರ ಹೆಸರು ಕಳುಹಿಸಲಾಗಿತ್ತು. ಆನಂತರ ದೆಹಲಿಯಲ್ಲಿ ಚುನಾವಣಾ ಸಮಿತಿಯ ಸಭೆಯಲ್ಲಿ ಕಾಂತೇಶ್​ರವರ ಹೆಸರಿತ್ತು. ಆನಂತರ ಆಸಕ್ತಿಯಿಲ್ಲದಿದ್ದರೂ ಬಸವರಾಜ ಬೊಮ್ಮಾಯಿಯವರಿಗೆ ಹೇಗೆ ಟಿಕೆಟ್ ಸಿಕ್ತು . ಅದನ್ನ ಹೇಳಲು ಹೋಗಲ್ಲ ಅದು ಕೆಟ್ಟ ರಾಜಕಾರಣ. 

ಚಿಕ್ಕಮಗಳೂರಲ್ಲಿ ಶೋಭಾ ಕರಂದ್ಲಾಜೆಯವರಿಗೆ ಗೋಬ್ಯಾಕ್​ ಆಂದೋಲನ ಶುರುವಾಗಿತ್ತು. ನಾನು ಸಿಟಿ ರವಿಯವರನ್ನ ಪ್ರಶ್ನಿಸಿದಾಗ ಶೋಭಾ ಕರಂದ್ಲಾಜೆಯವರಿಗೆ ಟಿಕೆಟ್ ಸಿಗದೇ ಇದ್ರೆ ನನಗೆ ಸಿಗುತ್ತೆ ಎಂಬ ಅಪೇಕ್ಷೆಯಲ್ಲಿದ್ದರು. ಪಟ್ಟಿಯಲ್ಲಿ ನೋಡಿದಾಗ ಸಿಟಿ ರವಿಯವರ ಹೆಸರು ಇರಲಿಲ್ಲ. ಸಿಟಿ ರವಿ, ಸದಾನಂದ ಗೌಡ, ಪ್ರತಾಪ ಸಿಂಹ, ನಳಿನ್ ಕುಮಾರ್ ಕಟೀಲ್​ಗೆ ಯಾಕೆ ಟಿಕೆಟ್ ತಪ್ಪಿತು? ಇವರೆಲ್ಲಾ ಹಿಂದುತ್ವದ ವಿಚಾರದಲ್ಲಿ ಪ್ರಬಲವಾಗಿ ನಿಂತವರು. ಹಿಂದುತ್ವದ ಪರವಾಗಿ ನಿಂತವರಿಗೆ ಟಿಕೆಟ್ ನೀಡದೇ ಶೋಭಾ, ಬಸವರಾಜ್ ಬೊಮ್ಮಾಯಿಯವರಿಗೆ ಟಿಕೆಟ್ ನೀಡಿದ್ದು ಯಾವ ನ್ಯಾಯ

ಹಿಂದುತ್ವ ಪರವಾಗಿ ನಿಂತವರು ಅನೇಕ ಮಂದಿ ಫೋನ್​ ಮಾಡುತ್ತಿದ್ದಾರೆ. ನಿಮಗೂ ಅನ್ಯಾಯವಾಗಿದೆ ಎನ್ನುತ್ತಿದ್ಧಾರೆ. ನಿಮ್ಮ ಮಗನನ್ನ ಎಂಪಿ ಮಾಡಿದ್ದೀರಿ, ಇನ್ನೊಬ್ಬನನ್ನ ಎಂಎಲ್​ಎ ಮಾಡಿದ್ದೀರಿ, ಆರು ತಿಂಗಳು ರಾಜ್ಯದ ಅಧ್ಯಕ್ಷ ಸ್ಥಾನವನ್ನ ಆರು ತಿಂಗಳು ಖಾಲಿ ಬಿಟ್ಟಿರಿ . ಯಾಕೆ? ತಮ್ಮ ಮಗನನ್ನ ಅಧ್ಯಕ್ಷ ಮಾಡುವ ಸಲುವಾಗಿ ತಮ್ಮ ಮಗನನ್ನ ಅಧ್ಯಕ್ಷನನ್ನಾಗಿ ಹಠ ಮಾಡಿ ಅಧ್ಯಕ್ಷಗಿರಿ ಕೊಡಿಸಿದ್ರು. ಈ ವೇಳೆ ಹಿರಿಯರ ಮಾತನ್ನ ಯಾಕೆ ಕೇಳಿಲ್ಲ. 

ನನ್ನ ಪ್ರಾಣ ಹೋದರು ನರೇಂದ್ರ ಮೋದಿ ವಿರುದ್ಧ ಹೋಗಿಲ್ಲ. ನನ್ನ ಎದೆಯಲ್ಲಿ ಒಂದು ಕಡೆ ಶ್ರೀರಾಮನಿದ್ದಾನೆ. ಇನ್ನೊಂದು ಕಡೆ ನರೇಂದ್ರ ಮೋದಿ ಇದ್ದಾರೆ. ಆದರೆ ಯಡಿಯೂರಪ್ಪನವರ ಹೃದಯದಲ್ಲಿ ಎರಡು ಮಕ್ಕಳು ಇದ್ದಾರೆ ಎಂದು ಕಾರ್ಯಕರ್ತರು ಹೇಳುತ್ತಿದ್ದಾರೆ. ಇದ್ಯಾವ ನ್ಯಾಯರಿ ನೋಡುತ್ತಾ ಸುಮ್ಮನೇ ಕೂರಬೇಕೆ? ನನ್ನ ರಕ್ತ ಈ ಸಂಘಟನೆ ಉಳಿಬೇಕು. ಒಂದು ವಂಶದ ಕೈಯಲ್ಲಿ ಅಧಿಕಾರ ಇದೆ ಎಂದು ಮೋದಿಯವರು ಹೇಳಿದ್ದಾರೆ. ಆ ರೀತಿಯಲ್ಲಿ ನನ್ನ ಕಣ್ಮುಂದಿನ ಒಂದು ವಂಶದ ಕೈಯಲಿ ಪಕ್ಷ ಇದ್ದಾಗ ಸುಮ್ಮನಿರಬೇಕಾ ಎಂದು ಪ್ರಶ್ನಿಸದ್ರು. 

ನಿನ್ನೆ ಬೆಳಗಾವಿಗೆ ಜಗದೀಶ್ ಶೆಟ್ಟರ್​ ರವರನ್ನ ಯಡಿಯೂರಪ್ಪನವರು ತೀರ್ಮಾನ ಮಾಡಿದ್ದಾರೆ ಎಂಬ ಸುದ್ದಿ ಬಂತು. ಯಾರನ್ನ ಕೇಳಿ ತೀರ್ಮಾನ ಮಾಡಿದ್ದೀರಿ, ಬೆಳಗಾವಿಯಿಂದ ಒಬ್ಬರು ಬಂದು ಈ ವಿಚಾರದಲ್ಲಿ ನನ್ನನ್ನ ಭೇಟಿಯಾದರು. ಮೋದಿಯವರು  ಹೇಳುತ್ತಾರೆ ನನ್ನ ಭಾರತ ನನ್ನ ಪರಿವಾರ ಎಂದು.ಆದರೆ ಕರ್ನಾಟಕ ರಾಜ್ಯದಲ್ಲಿ ಏನು ನಡೆಯುತ್ತಿದೆ. ಸುಮ್ಮನೇ ನೋಡುತ್ತಾ ಕೂರಬೇಕಾ? ನನ್ನ ಮಗನಿಗೆ ಟಿಕೆಟ್ ಗಾಗಿ ಅಲ್ಲ. 

ನೀವೆನು ತೀರ್ಮಾನ ತೆಗೆದುಕೊಳ್ಳುತ್ತೀರಿ ಎಂದು ಎಲ್ಲರು ಹೇಳಿದ್ದಾರೆ. ನೊಂದವರ ಧ್ವನಿಯಾಗುವುದು ಬೇಡವಾ? ನನಗೂ ಶೆಟ್ಟರ್​ಗೂ ಒಂದೇ ದಿನ ಫೋನ್ ಬಂದಿತ್ತು. ಅವರನ್ನ ಮನವೊಲಿಸಿ ಪಕ್ಷಕ್ಕೆ ಕರೆತಂದ್ರಿ ಅವರಿಗೆ ಟಿಕೆಟ್ ಸಿಗುತ್ತದೆ. ಅವತ್ತು ನನಗೂ ಹೇಳಿದ್ದರು. ಆದರೆ ದೇಶದ ಉನ್ನತ ನಾಯಕರು ಕರೆ ಮಾಡಿದ್ರು ನರೇಂದ್ರ ಮೋದಿಯವರು ಕರೆ ಮಾಡಿದಾಗ ಜೀವನ ಸಾರ್ಥಕವಾಯ್ತು ಎಂದುಕೊಂಡಿದ್ದೆ. 

ಪಕ್ಷವನ್ನ ತಾಯಿ ಎಂದುಕೊಂಡಿದ್ದೇನೆ. ನನ್ನ ತಾಯಿಯ ಕತ್ತು ಹಿಸುಕುವಾಗ ಸುಮ್ಮನೇ ಕೂರಬೇಕಾ? ಇದನ್ನ ಕೇಂದ್ರದ ನಾಯಕರು ನೋಡಲಿ ಎಲ್ಲಾ ಟಿವಿಯಲ್ಲಿಯು ದೇಶದ ಜನರು ನೋಡಲಿ. ನಿನ್ನೆ ಬಿಎಸ್​ ಯಡಿಯೂರಪ್ಪನವರು ನಿನ್ನೆ ಒಂದು ಮಾತು ಹೇಳಿದ್ಧಾರೆ. ಕಾಂತೇಶ್​ರನ್ನ ಎಂಎಲ್​ಸಿ ಮಾಡುತ್ತೇನೆ ಎಂದಿದ್ದಾರೆ.  ಆದರೆ ಎಲ್ಲವೂ ಸುಳ್ಳು. ಯಾಕೆ ಅಂದರೆ ಎಂಪಿ ಮಾಡುತ್ತಾರೆ ಎಂದವರು ಮಾಡಿದ್ರಾ ಎಂದು ಪ್ರಶ್ನಿಸಿದ್ರು. 

ಇಡೀ ದೇಶದ ನರೇಂದ್ರ ಮೋದಿ ಎನ್ನುತ್ತಿರುವಾಗ ರಾಜ್ಯದಲ್ಲಿ ನಿಮಗೆ ಬೇಕಾದವರಿಗೆ ಟಿಕೆಟ್ ಕೊಡಿಸಿದ್ದೀರಿ. ಇಲ್ಲಿ ಯಾರು ಗೆಲ್ಲುತ್ತಾರೋ ಸೋಲುತ್ತಾರೋ ಆದರೆ ಸೋತರೇ ಆ ಸೋಲಿಗೆ ಕಾರಣ ನೀವೆ ಯಡಿಯೂಪ್ಪನವರೇ ಎಂದ ಕೆಎಸ್​ ಈಶ್ವರಪ್ಪನವರೇ ನಾನು ಆಕಸ್ಮಾತ್ ಆಗಿ ಚುನಾವಣೆಗೆ ನಿಂತರೇ ಪಕ್ಷ ನೋಟಿಸ್ ನೀಡಬೇಕು. ಹಾಗೆ ನಾನು ಗೆದ್ದರೇ ಎರಡೇ ತಿಂಗಳಿನಲ್ಲಿ ಪಕ್ಷಕ್ಕೆ ವಾಪಸ್ ಸೇರಿಸಿಕೊಳ್ಳುತ್ತಾರೆ. 

ಹಿಂದುತ್ವದ ಪ್ರತಿಪ್ರಾದನೆ ಮಾಡುವ ನಿಟ್ಟಿನಲ್ಲಿ, ಕೇಂದ್ರದ ನಾಯಕರ ಗಮನ ಸೆಳೆಯುವ ನಿಟ್ಟಿನಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ನಾನು ಸ್ಪರ್ಧೆ ಮಾಡೇ ಮಾಡುತ್ತೇನೆ ಎಂದು ಕೆ.ಎಸ್​.ಈಶ್ವರಪ್ಪ ಹೇಳಿದ್ರು. 

 

ನಾನು ಆತುರದ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ. ಮಗನಿಗಾಗಿ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ. ಆದರೆ ಕಾರ್ಯಕರ್ತರಿಗಾಗಿ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ. ನೀವು ಚಪ್ಪಾಳೆ ತಟ್ಟಿದ್ದು ಸಂತೋಷ. ಆದರೆ ಈ ಉತ್ಸಾಹ ಇಲ್ಲಿಂದ ಹೊರಕ್ಕೆ ಹೋದ ಮೇಲೂ ಇರಬೇಕು. ಯಾಕೆಂದರೆ ಚುನಾವಣೇಯಲ್ಲಿ ಗೆದ್ದರೆ ಮಾತ್ರ ನನಗೆ ಬೆಲೆ. ಇಲ್ಲಾವಾದರೆ ನಮ್ಮ ವಿರುದ್ಧ ಹೋದ್ರು ಸೋತರು ಎನ್ನುತ್ತಾರೆ. ನಾನು ಈ ಹೋರಾಟಕ್ಕೆ ಇಳಿದಿದ್ದೇನೆ. ಇದರ ಪರಿಣಾಮ ಏನೇ ಆದರೂ ಎದುರಿಸುತ್ತೇನೆ ಎಂದ ಕೆ.ಎಸ್​.ಈಶ್ವರಪ್ಪ ಚುನಾವಣೆ ನಡೆಯುವ ಈ ಒಂದುವರೆ ತಿಂಗಳು ಬಿಜೆಪಿ ಪಕ್ಷ ಒಂದು ಕುಟುಂಬದ ಕೈಗೆ ಸಿಗಬಾರದು, ಹಿಂದೂತ್ವದ ಕಾರ್ಯಕರ್ತರಿಗೆ ಮತ್ತೆ ಪಕ್ಷ ಒಲಿಯಬೇಕು ಎನ್ನುವುದಾದರೆ ನೀವು ತಯಾರಿದ್ದೀರಾ ಎಂದು ಕೇಳಿದ್ರು. 

 

ನೀವು ನನ್ನ ಹಿಂದೇ ನಿಲ್ಲುವ ಅವಶ್ಯಕತೆ ಇಲ್ಲ.  ನಾನು ನರೇಂದ್ರ ಮೋದಿ ಪರವಾಗಿ ಚುನಾವಣೆ ನಿಲ್ಲುತ್ತಿದ್ದೇನೆ. ಅನೇಕರಿಗೆ ಟಿಕೆಟ್​ ನೀಡಲಾಗಿದೆ. ನನಗೂ ಅವರಿಗೂ ಹೋಲಿಕೆ ಮಾಡಿ. ಮೋದಿಯ ಭಕ್ತನಾಗಿ ಅವರೆಲ್ಲರಿಗಿಂತಲೂ ಒಂದು ಗುಲುಗಂಜಿ ಜಾಸ್ತಿ ಇದ್ದೇನೆ. ಚುನಾವಣೆ ಸಂದರ್ಭದಲ್ಲಿ ಜಾತಿ ರಾಜಕಾರಣ ಜಾಸ್ತಿ. ನನಗೆ ಎಲ್ಲಾ ಜಾತಿಯವರು ಫೋನ್ ಮಾಡುತ್ತಿದ್ಧಾರೆ. ಮೋದಿ ಪರವಾಗಿ ಇರುವ ಈಶ್ವರಪ್ಪರವರನ್ನ ದೆಹಲಿಗೆ ಕಳುಹಿಸಿಕೊಡುತ್ತೇನೆ ಎಂದು ನೀವು ಪ್ರತಿಜ್ಞೆ ಮಾಡಿದ್ರೆ ನನ್ನ ಪ್ರಯತ್ನ ಸಾರ್ಥಕವಾಗುತ್ತದೆ ಎಂದರು.

Leave a Comment

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು