ಬೆಜ್ಜವಳ್ಳಿ ಗಣೇಶೋತ್ಸವದಲ್ಲಿ ‘ಪರಮಾತ್ಮ ಪಂಜುರ್ಲಿ’ ನಾಟಕ ಯಶಸ್ವಿ: 2 ಸಾವಿರಕ್ಕೂ ಹೆಚ್ಚು ಪ್ರೇಕ್ಷಕರಿಂದ ಮೆಚ್ಚುಗೆ

prathapa thirthahalli
Prathapa thirthahalli - content producer

Bejjavalli ganesha :ಬೆಜ್ಜವಳ್ಳಿ: ಬೆಜ್ಜವಳ್ಳಿಯ ಶ್ರೀ ಗಜಾನನ ಯುವ ಸೇವಾ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಈ ವರ್ಷದ ಗಣೇಶೋತ್ಸವದಲ್ಲಿ, ಕಲಾ ಕುಂಭಾ ಕೂಟ ಕುಳಾಯಿ ತಂಡದ ‘ಪರಮಾತ್ಮ ಪಂಜುರ್ಲಿ’ ನಾಟಕವು ಯಶಸ್ವಿಯಾಗಿ ಪ್ರದರ್ಶನಗೊಂಡಿತು. ಗಣೇಶೋತ್ಸವದ ಪ್ರಮುಖ ಆಕರ್ಷಣೆಯಾದ ಈ ಕಾರ್ಯಕ್ರಮದಲ್ಲಿ ಸಾವಿರಾರು ಕಲಾಭಿಮಾನಿಗಳು ಪಾಲ್ಗೊಂಡಿದ್ದರು.

ಪ್ರತಿ ವರ್ಷ ಹೊಸ ನಾಟಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಸಂಪ್ರದಾಯದಂತೆ, ಈ ಬಾರಿಯೂ ಸಮಿತಿಯು ‘ಪರಮಾತ್ಮ ಪಂಜುರ್ಲಿ’ ನಾಟಕವನ್ನು ಪ್ರದರ್ಶಿಸಿತ್ತು. ನಾಟಕ ಆರಂಭದಿಂದ ಕೊನೆಯವರೆಗೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಯಿತು.

ಮೊದಲು ಮಹಾಲಕ್ಷ್ಮಿ ಹಾಗೂ ನಾರಾಯಣ ದೇವರ ಸಂಭಾಷಣೆಯಿಂದ ಆರಂಭವಾಗುವ ನಾಟಕ, ನಂತರ ದೇವತೆಗಳಿಗೆ ಉಪಟಳ ನೀಡುತ್ತಿದ್ದ ಹಿರಣ್ಯಾಕ್ಷನನ್ನು ವಾರಾಹಿ ದೇವ ಸಂಹಾರ ಮಾಡುವುದು ಮತ್ತು ಆತನ ನೆಲೆ ಎಲ್ಲಿ ಎಂಬ ವಿಚಾರದಲ್ಲಿ ಮುಂದುವರಿಯುತ್ತದೆ. ಹೀಗೆ ಸಾಗುವ ನಾಟಕದ ಪ್ರತಿಯೊಂದು ದೃಶ್ಯವೂ ಪ್ರೇಕ್ಷಕರನ್ನು ಒಂದು ದೈವಿಕ ಲೋಕಕ್ಕೆ ಕರೆದೊಯ್ದಂತೆ ಭಾಸವಾಯಿತು.

ನಾಟಕವನ್ನು ವೀಕ್ಷಿಸಲು ಸುಮಾರು 2 ಸಾವಿರಕ್ಕೂ ಹೆಚ್ಚು ಜನರು ಸೇರಿದ್ದರು. ಅವರೆಲ್ಲರೂ ಯಾವುದೇ ಬೇಸರವಿಲ್ಲದೆ, ಕಣ್ಣು ಮಿಟುಕಿಸದೆ ನಾಟಕ ವೀಕ್ಷಿಸಿದ್ದು ಕಲಾವಿದರ ಅಭಿನಯಕ್ಕೆ ಸಿಕ್ಕ ದೊಡ್ಡ ಮೆಚ್ಚುಗೆಯಾಗಿದೆ. ಇಂದಿನ ಮೊಬೈಲ್ ಯುಗದಲ್ಲಿ ಜನರು ನಾಟಕಗಳನ್ನು ನೋಡಲು ಆಸಕ್ತಿ ತೋರುವುದಿಲ್ಲ ಎಂಬ ಭಾವನೆಯನ್ನು ಈ ಪ್ರದರ್ಶನ ಸುಳ್ಳು ಮಾಡಿತು.

ಶ್ರೀ ಗಜಾನನ ಯುವ ಸೇವಾ ಸಮಿತಿಯು ಕಾರ್ಯಕ್ರಮದ ಯಶಸ್ಸಿಗೆ ಉತ್ತಮ ವ್ಯವಸ್ಥೆಗಳನ್ನು ಮಾಡಿತ್ತು. ಜನರಿಗೆ ಕುಳಿತುಕೊಳ್ಳಲು ಕುರ್ಚಿ ಮತ್ತು ಅನ್ನದಾಸೋಹದ ಮೂಲಕ ಸೇವೆ ಸಲ್ಲಿಸಿದ್ದು ಸಾರ್ವಜನಿಕರ ಮೆಚ್ಚುಗೆ ಗಳಿಸಿತು. ಒಟ್ಟಾರೆ, ನಾಟಕವು ಕಲಾತ್ಮಕ ಮತ್ತು ವ್ಯವಸ್ಥಿತವಾಗಿ ಮೂಡಿಬಂದು ಬೆಜ್ಜವಳ್ಳಿಯ ಗಣೇಶೋತ್ಸವಕ್ಕೆ ಮೆರಗು ತಂದಿತು.

ಪರಮಾತ್ಮ ಪಂಜುರ್ಲಿ ನಾಟಕದ ದೃಶ್ಯ
ಪರಮಾತ್ಮ ಪಂಜುರ್ಲಿ ನಾಟಕದ ದೃಶ್ಯ

 

Bejjavalli ganesha ಶ್ರೀ ಗಜಾನನ ಯುವ ಸೇವಾ ಸಮಿತಿಯು 38ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದೆ. ಈ ಬಾರಿ ಒಂಬತ್ತು ದಿನಗಳ ಕಾಲ ಗಣೇಶನ ಪ್ರತಿಷ್ಠಾಪನೆ ಮಾಡಲಾಗಿದೆ. ಇಂದು ಗಣಪತಿಯನ್ನು ವಿಸರ್ಜನೆ ಮಾಡಲಿದ್ದು, ಮಧ್ಯಾಹ್ನ 3 ಗಂಟೆಗೆ ರಾಜ ಬೀದಿ ಉತ್ಸವದ ಮೂಲಕ ಗಣೇಶನ ಮೆರವಣಿಗೆ ಹೊರಡಲಿದೆ. ಈ ರಾಜ ಬೀದಿ ಉತ್ಸವದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಸಹ ಸಾವಿರಾರು ಜನರು ಭಾಗವಹಿಸುತ್ತಾರೆ. ವಿವಿಧ ವೇಷ ಭೂಷಣಗಳು, ಡಿಜೆ ಹಾಡುಗಳಿಗೆ ಯುವಕ ಯುವತಿಯರು ಹಾಕುವ ಹೆಜ್ಜೆಗಳು ಕಾರ್ಯಕ್ರಮಕ್ಕೆ ವಿಶಿಷ್ಟ ಮೆರಗು ನೀಡುತ್ತವೆ.

Bejjavalli ganesha
Bejjavalli ganesha

Bejjavalli ganesha

Share This Article