ಮಲೆನಾಡು ಟುಡೆ ನ್ಯೂಸ್ ಆಗಸ್ಟ್ 28 2025, ಶಿವಮೊಗ್ಗ : ಜಿಲ್ಲೆಯಲ್ಲಿ ಗಣೇಶೋತ್ಸವ ಆರಂಭವಾಗಿದೆ. ಅದ್ದೂರಿಯಾಗಿ ಹಬ್ಬ ಮುಗಿಸಿರುವ ಜನತೆ ಗಣಪತಿಯ ಆರಾಧನೆಯಲ್ಲಿ ತೊಡಗಿದ್ದಾರೆ. ಜಿಲ್ಲೆಯ ವಿವಿದ ಕಡೆಗಳಲ್ಲಿ ವಿವಿಧ ರೂಪದ ಗಣಪತಿಯನ್ನುಇರಿಸಲಾಗಿದೆ.

ಅದರಲ್ಲಿಯು ಎಪಿಎಂಸಿಯ ಗಣಪತಿಯು ವಿಶೇಷವಾಗಿ ಗಮನ ಸೆಳೆಯುತ್ತಿದೆ. ವಿವಿಧ ರೀತಿಯ ಪುಷ್ಪಾಲಂಕಾರದಿಂದಾಗಿ ಗಣಪತಿ ವಿಶೇಷ ಆಕರ್ಷಣೆ ಪಡೆದುಕೊಂಡಿದೆ. ವಿಡಿಯೋ ಲಿಂಕ್ ಇಲ್ಲಿ ಗಮನಿಸಬಹುದು : https://www.facebook.com/share/r/19PBU9dN9X/
ಈ ನಡುವೆ ಜಿಲ್ಲೆಯಲ್ಲಿ 3672 ಗಣಪತಿಗಳನ್ನು ಪ್ರತಿಷ್ಟಾಪನೆ ಮಾಡಲಾಗಿದೆ ಎಂದು ಎಸ್ಪಿ ಮಿಥುನ್ ಕುಮಾರ್ ಮಾಹಿತಿ ನೀಡಿದ್ದಾರೆ. ಅಲ್ಲದೆ ಗೌರಿ-ಗಣೇಶ ಮತ್ತು ಈದ್ ಮಿಲಾದ್ ಹಬ್ಬಗಳ ಹಿನ್ನೆಲೆಯಲ್ಲಿ, ಶಿವಮೊಗ್ಗದ ರಾಗಿಗುಡ್ಡ ಪ್ರದೇಶದಲ್ಲಿ ನಿನ್ನೆ ದಿನ ರೂಟ್ ಮಾರ್ಚ್ ನಡೆಸಲಾಗಿದೆ. ರ್ಯಾಪಿಡ್ ಆಕ್ಷನ್ ಫೋರ್ಸ್ (RAF) ಮತ್ತು ರಾಜ್ಯ ಸಶಸ್ತ್ರ ಪೊಲೀಸ್ ಪಡೆ (SAF) ಯ ಅಧಿಕಾರಿಗಳು ಮತ್ತು ಸಿಬ್ಬಂದಿ ಈ ರೂಟ್ ಮಾರ್ಚ್‌ನಲ್ಲಿ ಭಾಗವಹಿಸಿದ್ದರು.
ಸಾಗರ ರಿಪ್ಪನ್ ಪೇಟೆಯಲ್ಲಿ ಪೊಲೀಸ್ ಗಣಪತಿ /ganeshotsava
ಹಿಂದಿನಿಂದ ನಡೆದುಕೊಂಡು ಬಂದಂತೆ ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಗಣಪನನ್ನು ಪ್ರತಿಷ್ಟಾಪನೆ ಮಾಡಲಾಗಿತ್ತು. ಪೊಲೀಸ್ ಇಲಾಖೆಯ ಈ ಗಣೇಶೋತ್ಸವಕ್ಕೆ ಸಾಗರದಲ್ಲಿ ತನ್ನದೆ ಆದ ಇತಿಹಾಸದ ಕಥೆಯು ಇದೆ.ಇನ್ನೂ ಈ ಸಲವೂ ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ಗಣಪತಿಯನ್ನ ಪ್ರತಿಷ್ಟಾಪಿಸಿ, ಸಂಜೆಹೊತ್ತಿಗೆ ಗಣೇಶನನ್ನು ಮೆರವಣಿಗೆಯಲ್ಲಿ ಕರೆದೊಯ್ದು ವಿಸರ್ಜಿಸಲಾಯಿತು. ಈ ವೇಳೆ ಪೊಲೀಸ್ ಸಿಬ್ಬಂದಿ, ಅಧಿಕಾರಿ, ಕುಟುಂಬಸ್ಥರು ಎಲ್ಲರೂ ಕುಣಿದು ಕುಪ್ಪಳಿಸಿ, ಗಣೇಶನಿಗೆ ಬೋಪರಾಕ್ ಹೇಳಿದರು.
ಇತ್ತ ರಿಪ್ಪನ್ ಪೇಟೆಯಲ್ಲಿ ಇದೇ ಮೊದಲ ಸಲ ಸ್ಟೇಷನ್ ಆವರಣದಲ್ಲಿ ಗಣಪತಿ ಕೂರಿಸಲಾಗಿತ್ತು, ಇಲ್ಲಿಯು ಪೊಲೀಸ್ ಠಾಣೆಗೆ ಹಾಗೂ ಗಣಪತಿಯ ಮೆರವಣಿಗೆಗೆ ಸಂಬಂಧಿಸಿದಂತೆ ಹಿಂದಿನ ಕಥೆಯೊಂದಿತ್ತು. ಆದರೆ ಈ ಸಲ ಪೊಲೀಸ್ ಠಾಣೆಯ ಆವರಣದಲ್ಲಿಯೇ ಗಣಪತಿ ಕೂರಿಸಿದ್ದು ವಿಶೇಷವಾಗಿತ್ತು. ಪಿಎಸ್‌ಐ ರಾಜುರೆಡ್ಡಿ ಅವರ ನೇತೃತ್ವದಲ್ಲಿ ಮೆರವಣಿಗೆಯ ಮೂಲಕ ಗಣಪತಿಯನ್ನು ಠಾಣೆಗೆ ತಂದು ಪ್ರತಿಷ್ಠಾಪಿಸಲಾಗಿತ್ತು.
