Thirthahalli news : ಸಾಲಾ ಭಾದೆ ಲಾರಿ ಮಾಲೀಕ ಅತ್ಮಹತ್ಯೆ
ಫೈನಾನ್ಸ್ ಹಾಗೂ ಇನ್ನಿತರೇ ಸಂಸ್ಥೆಗಳಿಂದ ಸಾಲ ಮಾಡಿ ಸಾಲ ತೀರಿಸಲಾಗದೆ ಲಾರಿ ಮಾಲೀಕರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ವರದಿಯಾಗಿದೆ.
ತೀರ್ಥಹಳ್ಳಿ ತಾಲೂಕಿನ ಕುರುವಳ್ಳಿ ನಿವಾಸಿ ಮಂಜುನಾಥ್ ಹೆಚ್.(37) ಆತ್ಮಹತ್ಯೆಗೆ ಶರಣಾಗಿರುವ ವ್ಯಕ್ತಿ.
ಮಂಜುನಾಥ್ ಫೈನಾನ್ಸ್ನಲ್ಲಿ ಸಾಲಮಾಡಿಕೊಂಡಿದ್ದರು. ಈ ಹಿನ್ನೆಲೆ ನಿಗದಿತ ಸಮಯದಲ್ಲಿ ಸಾಲ ತೀರಿಸಲಾಗದೆ ಇದ್ದುದ್ದರಿಂದ ಕಿರುಕುಳ ಉಂಟಾಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
