Mane manege police ಶಿವಮೊಗ್ಗದಲ್ಲಿ ‘ಮನೆ-ಮನೆಗೆ ಪೊಲೀಸ್’ ಕಾರ್ಯಕ್ರಮಕ್ಕೆ ಚಾಲನೆ
Mane manege police ಶಿವಮೊಗ್ಗ, ಜುಲೈ 24: ಮನೆಸಾರ್ವಜನಿಕರೊಂದಿಗೆ ಪೊಲೀಸರ ಸಂಬಂಧವನ್ನು ಬೆಸೆಯುವ ಮೂಲಕ ಸೌಹಾರ್ದಯುತ ಸಮಾಜ ನಿರ್ಮಿಸುವ ಉದ್ದೇಶದಿಂದ ಶಿವಮೊಗ್ಗದಲ್ಲಿ ಆರಂಭಿಸಲಾಗಿರುವ ‘ಮನೆ-ಮನೆಗೆ ಪೊಲೀಸ್’ (Police to Every Home) ಕಾರ್ಯಕ್ರಮಕ್ಕೆ ಇವತ್ತು ಚಾಲನೆ ಸಿಕ್ಕಿದೆ.
ನಗರದ ರಾಮಣ್ಣ ಶೆಟ್ಟಿ ಪಾರ್ಕ್‌ನಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಮತ್ತು ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯೋಜನೆಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಂಜುನಾಥ ನಾಯಕ್, ಚಾಲನೆ ನೀಡಿದರು.
ಅಲ್ಲದೆ ಈ ಸಂದರ್ಭದಲ್ಲಿ ಪೊಲೀಸರು ಜನರ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸಿ ಸ್ಪಂದಿಸಬೇಕು ಎಂದು ಸಲಹೆ ನೀಡಿದರು. ಅಲ್ಲದೆ, ಸಾರ್ವಜನಿಕರು ಕೂಡ ಪೊಲೀಸರೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು.


ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ಮಾತನಾಡಿ, ಸ್ವಾತಂತ್ರ್ಯ ಪೂರ್ವದ ಬ್ರಿಟಿಷ್ ಕಾಲದ ಪೊಲೀಸ್ ವ್ಯವಸ್ಥೆಯ ಭಯವನ್ನು ಹೋಗಲಾಡಿಸಲು ಸರ್ಕಾರ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದು ವಿವರಿಸಿದರು.

ಪೊಲೀಸ್ ಠಾಣೆಗಳಲ್ಲಿ ನೇರವಾಗಿ ಒಡನಾಟ ಹೊಂದಿರುವವರಲ್ಲಿ ಪೊಲೀಸ್ ವ್ಯವಸ್ಥೆಯ ಬಗ್ಗೆ ಶೇ.90ರಷ್ಟು ಉತ್ತಮ ಪ್ರತಿಕ್ರಿಯೆ ಇದೆ. ಆದರೆ, ಸಿನಿಮಾ ಮತ್ತು ಧಾರಾವಾಹಿಗಳಲ್ಲಿನ ಚಿತ್ರಣದಿಂದಾಗಿ ಕೆಲವರಲ್ಲಿ ನಕಾರಾತ್ಮಕ ಅಭಿಪ್ರಾಯ ಮೂಡಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಏನಿದು ಮನೆ ಮನೆಗೆ ಪೊಲೀಸ್ /Mane manege police
ಈ ಹಿಂದೆ ಇದ್ದ ಬೀಟ್ ವ್ಯವಸ್ಥೆಗಿಂತಲೂ ಮನೆ ಮನೆಗೂ ಪೊಲೀಸ್ ಕಾನ್ಸೆಪ್ಟ್ ಒಂದು ಹೆಜ್ಜೆ ಮುಂದಿದ್ದು, ಮೈಕ್ರೊ ಲೆವೆಲ್‌ನಲ್ಲಿ (Micro Level) ಜನರೊಂದಿಗೆ ಸಂವಾದ ನಡೆಸಲು ಸಹಕಾರಿಯಾಗಲಿದೆ. ತಮ್ಮ ವ್ಯಾಪ್ತಿಯಲ್ಲಿ ನಿಯೋಜನೆಗೊಂಡ ಪೊಲೀಸರು ಪ್ರತಿ ಮನೆಗೂ ಭೇಟಿಕೊಡಲಿದ್ದಾರೆ.

ಈ ವೇಳೆ ಆ ಮನೆಯವರನ್ನು ತಮ್ಮ ವಿಶ್ವಾಸಕ್ಕೆ ತೆಗೆದುಕೊಂಡು, ಅವರಿಗೆ ಕಾನೂನಿನ ಮಾಹಿತಿಯನ್ನು ಸಹ ನೀಡಲಿದ್ದಾರೆ. ಅಲ್ಲದೆ ಈ ವೇಳೇ ಯಾವುದೇ ಸಮಸ್ಯೆಗಳಿದ್ದರೂ ಪೊಲೀಸರ ಜೊತೆ ಮುಕ್ತವಾಗಿ ಹಂಚಿಕೊಳ್ಳಬಹುದು, ಮನೆಯ ಒಳಗೆ ಹಾಗೂ ಮನೆಯಿಂದ ಹೊರಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಮಾತನಾಡಬಹುದು. ಮಕ್ಕಳನ್ನು ಸಹ ಪೊಲೀಸರು ಮಾತನಾಡಿಸಿ, ವಿವರಗಳನ್ನು ಪಡೆದುಕೊಳ್ಳುತ್ತಾರೆ.
ಈ ಯೋಜನೆಯಡಿ 50-60 ಮನೆಗಳ ಸಮೂಹ ರಚಿಸಿ, ಪ್ರತಿ ಬೀಟ್ ಪೊಲೀಸ್‌ಗೆ ಜವಾಬ್ದಾರಿ ನೀಡಿ, ಸಾರ್ವಜನಿಕರೊಂದಿಗೆ ಸಂವಾದ ನಡೆಸಲಾಗುತ್ತದೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಅನಿಲ್ ಕುಮಾರ್ ಭೂಮರೆಡ್ಡಿ ಮಾಹಿತಿ ನೀಡಿದ್ದಾರೆ. ಸುರಕ್ಷತೆ (Safety), ಭದ್ರತೆ (Security) ಮತ್ತು ಅಪರಾಧಗಳ (Crimes) ಬಗ್ಗೆ ಮಾಹಿತಿ ಸಂಗ್ರಹಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಪ್ರತಿ ತಿಂಗಳ ಎರಡನೇ ಶನಿವಾರದಂದು ಆಯಾ ಠಾಣಾ ವ್ಯಾಪ್ತಿಗಳಲ್ಲಿ ಸಾರ್ವಜನಿಕ ಸಂಪರ್ಕ ಸಭೆಗಳನ್ನು ನಡೆಸಲಾಗುವುದು ಎಂದು ಅವರು ತಿಳಿಸಿದರು.
Mane manege police Program Launched 24
ಮನೆ ಮನೆಗೆ ಪೊಲೀಸ್, Mane manege police, ಶಿವಮೊಗ್ಗ ಪೊಲೀಸ್, Shivamogga Police, Community Policing, People-Friendly Police, #PoliceToEveryHome #KarnatakaPolice #PublicSafety