Thirthahalli Police Station : ಕೊಣಂದೂರಿನ ಮಹಿಳೆಗೆ ಪಕ್ಕದ ಮನೆಯಿಂದ ಬಂತೊಂದು ಫೋನ್​ ಕಾಲ್​ :  ಮನೆಗೆ ಬಂದು ನೋಡಿದಾಗ ಕಾದಿತ್ತು ಶಾಕ್​

prathapa thirthahalli
Prathapa thirthahalli - content producer

Thirthahalli Police Station : ಕೊಣಂದೂರಿನ ಮಹಿಳೆಗೆ ಪಕ್ಕದ ಮನೆಯಿಂದ ಬಂತೊಂದು ಫೋನ್​ ಕಾಲ್​ :  ಮನೆಗೆ ಬಂದು ನೋಡಿದಾಗ ಕಾದಿತ್ತು ಶಾಕ್​

ಮಗಳ ಮನೆಗೆ ತೆರಳಿದ್ದಾಗ ಕೋಣಂದೂರಿನ ಮಹಿಳೆಯೊಬ್ಬರ ಮನೆಯಲ್ಲಿ ಕಳ್ಳತನ ನಡೆದಿದ್ದು, ಬೀರುವಿನಲ್ಲಿದ್ದ 40 ಸಾವಿರ ರೂಪಾಯಿ ನಗದು ದೋಚಲಾಗಿದೆ. ಈ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೇಗಾಯ್ತು ಘಟನೆ

ಜುಲೈ 15 ರಂದು ಕೋಣಂದೂರಿನ ಸೋನಗರ ಕೇರಿಯ ಮಹಿಳೆ ಮಗಳ ಮನೆಗೆಂದು ಆನವಟ್ಟಿಗೆ ತೆರಳಿದ್ದರು. ಆಗ ಪಕ್ಕದ ಮನೆಯವರು ನಿಮ್ಮ ಮನೆಯಲ್ಲಿ ಕಳ್ಳತನವಾಗಿದೆ ಎಂದು ಫೋನ್​ ಮಾಡಿದ್ದಾರೆ. ಕೂಡಲೇ ಮಹಿಳೆ ಮನೆಗೆ ಬಂದು ನೋಡಿದಾಗ ಕಳ್ಳರು ಮನೆ ಬೀಗ ಒಡೆದು ಬೀರುವಿನಲ್ಲಿಟ್ಟಿದ್ದ 40 ಸಾವಿರ ಹಣವನ್ನು ಕದ್ದು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

Thirthahalli Police Station

Share This Article