Sn channabasappa : SSLC ಮತ್ತು PUC ವಿದ್ಯಾರ್ಥಿಗಳಿಗೆ ‘ವಿವೇಕ ವಿದ್ಯಾ ನಿಧಿ’ ಯೋಜನೆ ಎಷ್ಟಿದೆ ಆರ್ಥಿಕ ನೆರವು, ಅರ್ಜಿ ಸಲ್ಲಿಕೆ ಹೇಗೆ
ಶಿವಮೊಗ್ಗ: ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ವಿಧ್ಯಾರ್ಥಿಗಳಿಗೆ ಶೈಕ್ಷಣಿಕ ಬೆಂಬಲ ನೀಡುವ ಉದ್ದೇಶದಿಂದ ವಿದ್ಯಾನಿಧಿ ಯೋಜನೆಗೆ ಚಾಲನೆ ನೀಡಿದ್ದೇವೆ ಎಂದು ಶಾಸಕ ಎಸ್ ಎನ್ ಚನ್ನಬಸಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ನನ್ನ ನೇತೃತ್ವದ ಅನವರತ ತಂಡವು “ವಿವೇಕ ವಿದ್ಯಾ ನಿಧಿ’ ಎಂಬ ಕಾರ್ಯಕ್ರಮವನ್ನು ರೂಪಿಸಿದೆ. ಯೋಜನೆಯಡಿಯಲ್ಲಿ, ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಲಾಗುವುದು. ಕಳೆದ ಸಾಲಿನಲ್ಲಿ 50% ರಿಂದ 75% ವರೆಗೆ ಅಂಕ ಗಳಿಸಿ ಉತ್ತೀರ್ಣರಾದ SSLC ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಈ ನೆರವಿಗೆ ಅರ್ಹರಾಗಿರುತ್ತಾರೆ. ಪ್ರತಿ ಅರ್ಹ ವಿದ್ಯಾರ್ಥಿಗೆ 5,ಸಾವಿರ ರೂಪಾಯಿ ಆರ್ಥಿಕ ನೆರವು ನೀಡಲಾಗುವುದು. 80-90% ಅಂಕ ಗಳಿಸಿದ ಬಡ ವಿದ್ಯಾರ್ಥಿಗಳಿಗೂ ಸಹಾಯ ಮಾಡಲು ಚಿಂತಿಸಲಾಗುವುದು ಎಂದು ಶಾಸಕರು ತಿಳಿಸಿದರು.ಈ ಅರ್ಜಿಯನ್ನು ಜುಲೈ 11 ರಿಂದ ಕೊಡಲಾಗುತ್ತಿದೆ. ಆಗಸ್ಟ್ 15 ರ ಒಳಗೆ ಶಾಸಕರ ಕರ್ತವ್ಯ ಭವನದಲ್ಲಿ ಅರ್ಜಿಯನ್ನು ಪಡೆದು ತುಂಬಿವಾಪಾಸ್ ನೀಡಬಹುದಾಗಿದೆ ಎಂದರು.
Sn channabasappa : ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳೇನು
ಅರ್ಜಿಗೆ 10 ರೂ. ನಿಗದಿ ಮಾಡಲಾಗಿದೆ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಹಿಂದಿನ ವರ್ಷದ ಮಾರ್ಕ್ಸ್ ಕಾರ್ಡ್ ನೀಡಬೇಕಿದೆ. ಪೋಷಕರ ಓಟರ್ ಐಡಿ ಬೇಕಿದೆ. ನಗರ ವಿಧಾನ ಸಭಾ ಕ್ಷೇತ್ರಕ್ಕೆ ಈ ಯೋಜನೆ ಸೀಮಿತವಾಗಿದ್ದು ವಿಧಾನ ಸಭಾ ಕ್ಷೇತ್ರ ವಾಪ್ತಿಯಲ್ಲಿ SSLC ಯಲ್ಲಿ 7355 ಜನ ವಿದ್ಯಾರ್ಥಿಗಳು, ಪಿಯು ನಲ್ಲಿ 6574 ವಿದ್ಯಾರ್ಥಿಗಳಿದ್ದಾರೆ. ಎರಡೂ ಸೇರಿ ಒಟ್ಟು 13875 ಜನ ವಿದ್ಯಾರ್ಥಿಗಳಿದ್ದಾರೆ ಎಂದರು.

