car accident in mandagadde ಜುಲೈ 1 : ಮಂಡಗದ್ದೆ ಬಳಿ ನದಿಗೆ ಉರುಳಿದ ಕಾರು, ತೆಕ್ಕಟ್ಟೆಯ ಮಹಿಳೆ ಸಾವು

car accident in mandagadde : ಮಂಡಗದ್ದೆ ಬಳಿ ನದಿಗೆ ಉರುಳಿದ ಕಾರು, ತೆಕ್ಕಟ್ಟೆಯ ಮಹಿಳೆ ಸಾವು

ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ಮಂಡಗದ್ದೆ ಬಳಿ ಜೂನ್ 29ರಂದು ಚಾಲಕನ ನಿಯಂತ್ರಣ ತಪ್ಪಿ ಕಾರು ನದಿಗೆ ಉರುಳಿ ಓರ್ವ ಮಹಿಳೆ ಸಾವನ್ನಪ್ಪಿರುವ ಘಟನೆ ನಡೆದಿದ್ದು, ವಿಷಯ ತಡವಾಗಿ ಬೆಳಕಿಗೆ ಬಂದಿದೆ. ಕುಂದಾಪುರದ ತೆಕ್ಕಟ್ಟೆ ನಿವಾಸಿ ಸವಿತಾ ದೇವಾಡಿಗ (57) ಮೃತ ದುರ್ದೈವಿಯಾಗಿದ್ದಾರೆ.

ಕುಂದಾಪುರ ತೆಕ್ಕಟ್ಟೆಯ ಶಂಕರ ದೇವಾಡಿಗ ಅವರು ತಮ್ಮ ಮಾರುತಿ ಸ್ವಿಫ್ಟ್‌ ಕಾರಿನಲ್ಲಿ ಕುಟುಂಬದ ಆರು ಮಂದಿ ಸದಸ್ಯರೊಂದಿಗೆ ಶಿವಮೊಗ್ಗದಲ್ಲಿರುವ ಮಗಳ ಮನೆಗೆ ತೆರಳುತ್ತಿದ್ದರು. ಬೆಳಿಗ್ಗೆ 11 ಗಂಟೆ ಸುಮಾರಿಗೆ ಮಂಡಗದ್ದೆ ಬಳಿ ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಪಲ್ಟಿಯಾಗಿ ರಸ್ತೆ ಸಮೀಪದ ನದಿಗೆ ಉರುಳಿತು.

car accident in mandagadde :  ಕಾರು ನೀರಿನಲ್ಲಿ ಮುಳುಗುತ್ತಿದ್ದಂತೆಯೇ ಸ್ಥಳೀಯರು ಕೂಡಲೇ ಧಾವಿಸಿ ಬಂದು ರಕ್ಷಣಾ ಕಾರ್ಯದಲ್ಲಿ ತೊಡಗಿದರು. ಆದರೆ, ಶಂಕರ ದೇವಾಡಿಗ ಅವರ ಪತ್ನಿ ಸವಿತಾ ದೇವಾಡಿಗ (57) ಅವರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಅಪಘಾತದ ಸಂದರ್ಭದ ಆಘಾತದಿಂದಲೇ ಸಾವು ಸಂಭವಿಸಿರಬಹುದು ಎಂದು ವೈದ್ಯರು ತಿಳಿಸಿದ್ದಾರೆ.

ಶಂಕರ ದೇವಾಡಿಗ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರ ಪುತ್ರರಾದ ಅರುಣ್‌ ದೇವಾಡಿಗ ಮತ್ತು ಎಂಜಿನಿಯರ್ ಅಶ್ವತ್ಥ ದೇವಾಡಿಗ, ಪುತ್ರಿ ಅಮೃತಾ, ಅಳಿಯ ಸುರೇಶ್‌ ದೇವಾಡಿಗ ಹಾಗೂ ಎರಡೂವರೆ ವರ್ಷದ ಮೊಮ್ಮಗ ಅಭಿಶ್ರೇಯ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದಿಂದ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಕ್ರೇನ್ ಸಹಾಯದಿಂದ ನದಿಯಿಂದ ಹೊರತೆಗೆಯಲಾಯಿತು. ಈ ಸಂಬಂಧ ಮಾಳೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

car accident in mandagadde ನದಿಗೆ ಉರುಳಿದ ಕಾರು
car accident in mandagadde ನದಿಗೆ ಉರುಳಿದ ಕಾರು

Leave a Comment

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು