monkey holding phone 11-06-25 ನಂಜಪ್ಪ ಆಸ್ಪತ್ರೆಯ ಬಳಿ ಯುವತಿಯ ಮೊಬೈಲ್​​ ಕಿತ್ತುಕೊಂಡು ಮರ ಹತ್ತಿದ ಮಂಗ | ನಂತರ ನಡೆದಿದ್ದೇನು

monkey holding phone ನಂಜಪ್ಪ ಆಸ್ಪತ್ರೆಯ ಬಳಿ ಯುವತಿಯ ಮೊಬೈಲ್​​ ಕಿತ್ತುಕೊಂಡು ಮರ ಹತ್ತಿದ ಮಂಗ | ನಂತರ ನಡೆದಿದ್ದೇನು

ಶಿವಮೊಗ್ಗದ ನಂಜಪ್ಪ ಆಸ್ಪತ್ರೆಯಲ್ಲಿ ಮಂಗವೊಂದು ಲ್ಯಾಬ್​ ಟೆಕ್ನಿಷಿಯನ್​ ಯುವತಿಯೊಬ್ಬರ ಮೊಬೈಲ್​ನ್ನು  ಕಿತ್ತುಕೊಂಡು ಹೋಗಿ ಮರವೇರಿ ಕುಳಿತ  ಘಟನೆ ಇಂದು ನಡೆದಿದೆ.

monkey holding phone ನಂಜಪ್ಪ ಆಸ್ಪತ್ರೆಯಲ್ಲಿ ಲ್ಯಾಬ್​ ಟೆಕ್ನಿಷಿಯನ್​ ಕೆಲಸ ಮಾಡುತ್ತಿರುವ ಯುವತಿ ತನ್ನ ಮೊಬೈಲ್​ನ್ನು ಕಿಟಕಿಯ ಬಳಿ ಇಟ್ಟು ಕೆಲಸ ಮಾಡುತ್ತಿದ್ದರು, ಆ ವೇಳೆ ಸ್ಥಳಕ್ಕೆ ಬಂದ ಮಂಗವೊಂದು ಕಿಟಕಿಯಲ್ಲಿ ಇಟ್ಟಿದ್ದ ಮೊಬೈಲನ್ನು ತೆಗೆದುಕೊಂಡು ಆಸ್ಪತ್ರೆಯ ಎದುರಿದ್ದ ದೊಡ್ಡ ಮರದ ತುದಿಗೆ ಹೋಗಿ ಕುಳಿತಿದೆ. ಆಗ ಅಲ್ಲಿದ್ದ ಜನರು ಮಂಗನಿಗೆ ಬಾಳೆಹಣ್ಣು ನೀಡಿ ಮೊಬೈಲ್​ ಪಡೆಯುವ ಪ್ರಯತ್ನವನ್ನು ಮಾಡಿದರು ಸಹ ಮಂಗ ಮೊಬೈಲ್​ನ್ನು ಗಟ್ಟಿಯಾಗಿಯೇ ಹಿಡಿದು ಕುಳಿತಿತ್ತು. ಹೀಗೆ ಸುಮಾರು 1 ಗಂಟೆಗಳ ಕಾಲ ಮರದ ಕೆಳಗೆ ಮೊಬೈಲ್​ಗೆ ಕರೆ ಮಾಡಿ, ಗಲಾಟೆ ಮಾಡಿ, ಬಾಳೆಹಣ್ಣು ನೀಡಿ ಮೊಬೈಲ್​ನ್ನು ಹಿಂಪಡೆಯುವ  ಸಾಕಷ್ಟು  ಪ್ರಯತ್ನಗಳು ನಡೆಯಿತು.  ಆದರೆ ಮಂಗ ತನ್ನಷ್ಟಕ್ಕೆ ತಾನು ಮೊಬೈಲ್​ ನೋಡುತ್ತಾ ಅದನ್ನು ಕಿವಿಗೆ ಇಟ್ಟುಕೊಂಡು ಸಾಕಷ್ಟು ಚೇಷ್ಟೆ ಮಾಡುತ್ತಿತ್ತು. ಅದನ್ನು ನೋಡಲು ರಸ್ತೆಯಲ್ಲಿ ಹಲವಾರು ಜನ ಸೇರಿದ್ದರು. ಇದರಿಂದ ಕೆಲಕಾಲ ರಸ್ತೆಯಲ್ಲಿ ಸಂಚಾರ ದಟ್ಟಣೆಯೂ ಸಹ ಆಯಿತು. ಅದು ಸಹ ಭಯದಿಂದ ಕೆಳಗೆ ಬರಲೇ ಇಲ್ಲ. ಕೊನೆಗೆ ಮಂಗ  ಬಾಳೆ ಹಣ್ಣನ್ನು ನೊಡಿ ಆಸ್ಪತ್ರೆಯ ಸ್ಲ್ಯಾಬ್​ ಮೇಲೆ ಬಂದಿತು. ಆಗ ಯುವಕರು ಪಟಾಕಿಯನ್ನು ಹೊಡೆದರು. ಇದರಿಂದ ಭಯಗೊಂಡ ಮಂಗ ಮೊಬೈಲ್​ನ್ನು ಕೈಬಿಟ್ಟು ಬಾಳೆಹಣ್ಣು ತೆಗೆದುಕೊಂಡು  ಹೋಯಿತು.

ಈ ಹಿಂದೆಯೂ ಸಹ ನಂಜಪ್ಪ ಆಸ್ಪತ್ರೆಯಲ್ಲಿ  4 ಬಾರಿ ಇದೇ ರೀತಿ ಮಂಗಗಳು ಮೊಬೈಲ್​ನ್ನು  ತೆಗೆದುಕೊಂಡು ಮರವೇರಿ ಕುಳಿತಿದ್ದವು.

monkey holding phone ಮೊಬೈಲ್​ ಹಿಡಿದು ಮರವೇರಿದ ಮಂಗ
monkey holding phone ಮೊಬೈಲ್​ ಹಿಡಿದು ಮರವೇರಿದ ಮಂಗ

Leave a Comment

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು