18 ವರ್ಷದೊಳಗಿನ ಸವಾರರಿಗಾಗಿ ಹೊಸ ಎಲೆಕ್ಟ್ರಿಕ್‌ ವಾಹನ ಬಿಡುಗಡೆ | ಅಗ್ಗದ ಬೆಲೆ

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Mar 15, 2025

ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್‌ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಬೇಡಿಕೆ ಹೆಚ್ಚಾಗುತ್ತಿದ್ದಂತೆ ವಿವಿಧ ಕಂಪನಿಗಳು ಅತ್ಯಂತ ಅಗ್ಗದ  ಬೆಲೆಯಲ್ಲಿ  ಉತ್ತಮ ಫೀಚರ್ಸ್ ಹೊಂದಿರುವಂತಹ ವಾಹನಗಳನ್ನು ಬಿಡುಗಡೆ ಮಾಡುತ್ತಿದೆ. ಅದರಂತೆ ಈಗ ZELIO E ಮೊಬಿಲಿಟಿ ತನ್ನ ಹೊಸ ಅಟಲ್‌ ಗ್ರೇಸಿ ಎಂಬ ಎಲೆಕ್ಟ್ರಿಕ್‌ ಬೈಕ್‌ನ್ನು ಬಿಡುಗಡೆಗೊಳಿದೆ. ಇದರ ಬೆಲೆ ಮೈಲೇಜ್‌ ಬ್ಯಾಟರಿ ಕ್ಯಪಾಸಿಟಿ ಸೇರಿದಂತೆ ಇನ್ನಿತರ ಮಾಹಿತಿಗಳನ್ನು ಈ ಕೆಳಕಂಡಂತೆ ನೋಬಹುದು.

ಅಟಲ್‌ ಗ್ರೇಸಿ 18 ವರ್ಷದ ಒಳಗಿನ ಯುವಕರು ಓಡಿಸಲು ಅನುಕೂಲವಾಗಲಿ ಎಂದೇ ಕಂಪನಿ ತಯಾರು ಮಾಡಿದ ಬೈಕ್‌ ಆಗಿದೆ.  ಈ ಬೈಕ್‌ನ್ನು ಓಡಿಸಲು ಯಾವುದೇ ಪರವನಿಗೆ ಅಗತ್ಯವಿಲ್ಲ. ಅತಿಹೆಚ್ಚು ವೇಗ ಮಿತಿ ಹೊಂದಿಲ್ಲದ  ಈ ಬೈಕ್‌ನ್ನು ಯಾವುದೇ  ನಿಶ್ಚಿಂತೆ ಇಲ್ಲದೆ ಯುವಕರು ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರರು ಓಡಿಸಬಹುದು.

ಅಟಲ್‌ ಗ್ರೇಸಿ ಬೈಕ್‌ನ ಮೈಲೇಜ್‌ ಹಾಗೂ ಬೆಲೆ ಎಷ್ಟು

ಅಟಲ್‌ ಗ್ರೇಸಿ ಬೈಕ್‌ ಮೂರು ವೇರಿಯಂಟ್‌ಗಳಲ್ಲಿ ಲಭ್ಯವಿದ್ದು, ಬ್ಯಾಟರಿ ಕ್ಯಪಾಸಿಟಿಗೆ ತಕ್ಕಂತೆ ಬೆಲೆಯನ್ನು ನಿಗದಿಪಡಿಸಲಾಗಿದೆ. 48V/32AH ಹೊಂದಿರುವ ಬೈಕ್‌ಗೆ 49500 ರೂಪಾಯಿ ಬೆಲೆಯನ್ನು ನಿಗದಿಪಡಿಸಲಾಗಿದ್ದು, ಇದು ಒಮ್ಮೆ ಚಾರ್ಜ್‌ ಆಗಲು ಸರಿಸುಮಾರು 7 ರಿಂದ 8 ಗಂಟೆ  ಸಮಯವನ್ನು ತೆಗೆದುಕೊಳ್ಳುತ್ತದೆ. ಹಾಗೆಯೇ ಇದನ್ನು ಒಮ್ಮೆ ಚಾರ್ಜ್‌ ಮಾಡಿದ್ದರೆ 55 ರಿಂದ 60 ಮೈಲೇಜ್‌ ನೀಡುತ್ತದೆ. 60V/32 AH ಲೀಡ್‌ ಅಯಾಸಿಡ್‌ ಹೊಂದಿರುವ ಸ್ಕೂಟರ್‌ಗೆ 52 ಸಾವಿರ ರೂಪಾಯಿಯನ್ನು ನಿಗದಿಪಡಿಸಲಾಗಿದ್ದು, ಇದನ್ನು 7 ರಿಂದ ಒಂಬತ್ತು ಗಂಟೆ ಚಾರ್ಚ್‌ ಮಾಡಿದರೆ 70 ಕಿಲೋಮೀಟರ್‌ ಮೈಲೇಜ್‌ನ್ನು ನೀಡುತ್ತದೆ. 60V/30AH ಲಿ-ಐಯಾನ್ ಬ್ಯಾಟರಿ ಹೊಂದಿರುವ ಸ್ಕೂಟರ್ 58,000 ರೂ. ಬೆಲೆಯಿದ್ದು, 8 ರಿಂದ 9 ಗಂಟೆಗಳ ಚಾರ್ಜಿಂಗ್ ಸಮಯದೊಂದಿಗೆ 70 ರಿಂದ 75 ಕಿ.ಮೀ. ರೇಂಜ್ ನೀಡುತ್ತದೆ. ಪ್ರತಿಯೊಂದು ಮಾದರಿಯು 48/60V BLDC ಮೋಟಾರ್ ಹೊಂದಿದ್ದು, 80 ಕೆ.ಜಿ ತೂಕವಿರುತ್ತವೆ. ಹಾಗೆಯೇ 150 ಕೆ.ಜಿ ಲೋಡಿಂಗ್ ಸಾಮರ್ಥ್ಯವನ್ನು ಹೊಂದಿವೆ. 25 ಕಿ.ಮೀ ಗರಿಷ್ಠ ವೇಗ ಮತ್ತು ಪ್ರತಿ ಚಾರ್ಜ್‌ಗೆ ಕೇವಲ 1.5 ಯೂನಿಟ್‌ಗಳಷ್ಟು ವಿದ್ಯುತ್ ಬಳಕೆಯನ್ನು ಹೊಂದಿದೆ.

SUMMARY | ZELIO E Mobility has launched its new electric bike called Atal Gracie.

KEYWORDS |  ZELIO E Mobility, Atal Gracie, electric bike,

Share This Article