SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 27, 2024
ಶಿವಮೊಗ್ಗ | ಶಿವಮೊಗ್ಗದ ಹಾಸ್ಯ ಕಲಾವಿದೆ ಕವಿತಾ ಸುಧೀಂದ್ರ ಅವರು ಕರ್ನಾಟಕ ವಿಭೂಷಣ ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದೇ ಡಿ.27 ರಂದು ಅಂದರೆ ಇವತ್ತು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಕವಿಗಳ ಸಮ್ಮೇಳನದ 11ನೇ ಆವೃತ್ತಿ ಕಾರ್ಯಕ್ರಮದಲ್ಲಿ ಅವರಿಗೆ ಪ್ರಶಸ್ತಿ ಪ್ರಧಾನ ನಡೆಯಲಿದೆ.
ಈ ಪ್ರಶಸ್ತಿಯನ್ನು ಕವಿತಾ ಸುಧೀಂದ್ರ ಅವರಿಗೆ ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಎಂ.ವೆಂಕಟೇಶ್ ಮತ್ತು ಜಿಲ್ಲಾ ಘಟಕದ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ. ಶಿವಮೊಗ್ಗದ ಕವಿತಾ ಸುಧೀಂದ್ರ ಅವರು ಮಹಿಳಾ ಹಾಸ್ಯ ಕಲಾವಿದರಾಗಿದ್ದು, ವಿವಿಧ ಚಾನಲ್‌ಗಳಲ್ಲಿ ಹಾಗೂ ರಾಜ್ಯಾದ್ಯಂತ ವಿವಿಧ ವೇದಿಕೆಗಳಲ್ಲಿ ಕಾರ್ಯಕ್ರಮ ನೀಡುತ್ತಿದ್ದಾರೆ. ಜೀವನ ಕೌಶಲ್ಯ ಹಾಗೂ ಮೌಲ್ಯ ಕುರಿತು ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ. ತೀರ್ಥಹಳ್ಳಿ ಬಿ.ಇ.ಒ .ಕಚೇರಿಯಲ್ಲಿ ವಿಶೇಷ ಮಕ್ಕಳಿಗೆ ಸಮನ್ವಯ ಸಂಪನ್ಮೂಲ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಎನ್‌ಎಸ್‌ಎಸ್ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ. ಭರತನಾಟ್ಯ ಕಲಾವಿದೆ, ಹಾಡುಗಾರ್ತಿ, ಬರಹಗಾರ್ತಿಯಾಗಿದ್ದಾರೆ.
ಅಖಿಲ ಭಾರತ ಕನ್ನಡ ಕವಿಗಳ ಕಾವ್ಯ ಪರಿಷತ್ ಉದ್ಘಾಟನೆ ಹಾಗೂ ಅಕಾಡೆಮಿ ವತಿಯಿಂದ ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ರಂಗಭೂಮಿ ಕಲಾವಿದೆ, ಸುರ್ವೆ ಕಲ್ಚರಲ್ ಅಕಾಡೆಮಿ ಗೌರವಾಧ್ಯಕ್ಷೆ ಡಾ. ಸುಮತಿಶ್ರೀ ನವಲಿ ಹಿರೇಮಠ, ಅಕಾಡೆಮಿ ಅಧ್ಯಕ್ಷ ಕಿಶನ್ ಸುರ್ವೆ, ಸ್ಥಾಪಕ ಅಧ್ಯಕ್ಷ ರಮೇಶ ಸುರ್ವೆ ಉಪಸ್ಥಿತರಿರುವರು.
SUMMARY | Shivamogga based comedian Kavitha Sudhindra has been awarded the Karnataka Vibhushan State Award.
KEYWORDS | Kavitha Sudhindra, comedian, Karnataka Vibhushan State Award,