ಸರ್ಕಿಟ್‌ಹೌಸ್‌ ಬಳಿ ನಿನ್ನೆ ರಾತ್ರಿ ಮೃತಪಟ್ಟ ಇಬ್ಬರು ಯುವಕರು ಯಾರು ಗೊತ್ತಾ? | ಪೋಷಕರಿಗೆ ಎಚ್ಚರಿಕೆ ನೀಡುತ್ತಿದೆ ತಂದೆಯೊಬ್ಬರ ವಿಡಿಯೋ

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 23, 2024 ‌‌  

ಶಿವಮೊಗ್ಗ ನಗರದ ಸರ್ಕಿಟ್‌ ಹೌಸ್‌ ಬಳಿ ನಿನ್ನೆ ನಡೆದ ಭೀಕರ ಬೈಕ್‌ ಅಪಘಾತದಲ್ಲಿ ಮೃತಪಟ್ಟವರ ಗುರುತು ಪತ್ತೆಯಾಗಿದೆ. ರೋಹಿತ್ (25)  ಹಾಗೂ 20 ವರ್ಷದ ಜೀವನ್‌ ಎಂದು ಗುರುತಿಸಲಾಗಿದೆ. ಈ ಪೈಕಿ ರೋಹಿತ್‌ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದು ಹಾಗೂ ಜೀವನ್(20) ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ. ಜೀವನ್‌ ಮಲೆಬೆನ್ನೂರಿನ ಬೇವಿಹಳ್ಳಿ ನಿವಾಸಿಯಾಗಿದ್ದ. ಇನ್ನೂ ರೋಹಿತ್‌ ಸೊರಬ ತಾಲ್ಲೂಕು  ಬೆಣ್ಣೆಗೆರೆಯವನು. ಇವರಿಬ್ಬರು ಬೊಮ್ಮನಕಟ್ಟೆಗೆ ಹೋಗುತ್ತಿದ್ದರು ಎನ್ನಲಾಗಿದೆ. 

Malenadu Today

ನಡೆದಿದ್ದೇನು? 

ನಿನ್ನೆ ರಾತ್ರಿ ಸಾಗರ ರಸ್ತೆಯಲ್ಲಿ ಸರ್ಕಿಟ್‌ ಹೌಸ್‌ ಬಳಿ ಬಸ್‌ವೊಂದು ಮುಂದಕ್ಕೆ ಹೋಗುತ್ತಿತ್ತು. ಈ ವೇಳೆ ಲೆಫ್ಟ್‌ ಸೈಡ್‌ನಲ್ಲಿ ಓವರ್‌ ಟೇಕ್‌ ಮಾಡಲು ಹೋಗಿ ನೇರವಾಗಿ ಬಂದು ಬಸ್‌ಗೆ ಕೆಟಿಎಂ ಬೈಕ್‌ ಡಿಕ್ಕಿಯಾಗಿದೆ. ಘಟನೆಯಲ್ಲಿ ಬೈಕ್‌ನಲ್ಲಿ ಇಬ್ಬರು ಸಹ ಸಾವನ್ನಪ್ಪಿದ್ದಾರೆ. ತೀಬ್ರ ರಕ್ತಸ್ತ್ರಾವದಿಂದಾಗಿ ಇಬ್ಬರು ಸಾವನ್ನಪ್ಪಿದ್ದು ಕುಟುಂಬಸ್ಥರಲ್ಲಿ ದುಃಖ ಮಡುಗಟ್ಟಿದೆ. 

 Malenadu Today

ಈ ನಡುವೆ ಬೈಕ್‌ ಸವಾರರಿಗೆ ಹೆಲ್ಮೆಟ್‌ನ ಮಹತ್ವದ ಬಗ್ಗೆ ತಂದೆಯೊಬ್ಬರು ತಮ್ಮ ಮಗನ ದುಸ್ಥಿತಿಯನ್ನು ತೋರಿಸಿ, ಕಣ್ಣೀರಿಡುತ್ತಾ, ನಿಮ್ಮಮಕ್ಕಳಿಗೆ ಹೆಲ್ಮೆಟ್‌ ಕಡ್ಡಾಯವಾಗಿ ಧರಿಸುವಂತೆ ಹೇಳಿ. ಲಕ್ಷಗಟ್ಟಲೆ ದುಡ್ಡುಕೊಟ್ಟು ಗಾಡಿ ಕೊಡಿಸುತ್ತೀರಿ. ಆದರೆ ಹೆಲ್ಮೆಟ್‌ ಹಾಕದೆ ಹೋದರೆ, ನನ್ನ ಮಗನಿಗೆ ಆದ ಸ್ಥಿತಿ ನಿಮ್ಮ ಮಕ್ಕಳಿಗೂ ಆಗಬಹುದು ಎಂದು ಹೇಳುವ ವಿಡಿಯೋವೊಂದನ್ನು ಶಿವಮೊಗ್ಗ ಟ್ರಾಫಿಕ್‌ ಪೊಲೀಸರು ತಮ್ಮ ಟ್ವಿಟ್ಟರ್‌ ಅಕೌಂಟ್‌ನಲ್ಲಿ ಷೇರ್‌ ಮಾಡಿದ್ದಾರೆ. 



SUMMARY | Two youths die after a KTM bike collides with a bus near Circuit House in Shivamogga city

KEY WORDS |  KTM bike collides bus , Circuit House in Shivamogga city

Leave a Comment

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು