SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 12, 2024
ಶಿವಮೊಗ್ಗ| ಶಾರದಾ ಸಂಗೀತ ನೃತ್ಯ ವಿದ್ಯಾಲಯದ ವತಿಯಿಂದ ಶ್ರೀ ಕೃಷ್ಣನ ಜೀವನ ಚರಿತ್ರೆಯನ್ನು ನೃತ್ಯದಲ್ಲಿ ತೋರಿಸುವ “ಅವತರಿಸು ಬಾ” ಎಂಬ ವಿಶೇಷ ಕಾರ್ಯಕ್ರಮವನ್ನು ಡಿಸೆಂಬರ್ 15 ರಂದು ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಇದರ ಬಗ್ಗೆ ಶಾರದಾ ಸಂಗೀತ ನೃತ್ಯ ವಿದ್ಯಾಲಯದ ಪ್ರಾಂಶುಪಾಲರಾದ ಜೆ ಅರುಣ್ ಕುಮಾರ್ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ನೃತ್ಯ ಕಾರ್ಯಕ್ಮದಲ್ಲಿ ಶ್ರಿ ಕೃಷ್ಣನ ಜೀವನ ಬಾಲ್ಯದಿಂದ ಕೊನೆವರೆಗೆ ಹೇಗಿತ್ತು ಎಂಬುದನ್ನು ತೋರಿಸಲಿದ್ದೇವೆ. ಈ ಕಾರ್ಯಕ್ರಮದಲ್ಲಿ 100 ಕ್ಕೂ ಹೆಚ್ಚು ಜನ ಕಲಾವಿದರು ಭಾಗವಹಿಸಲಿದ್ದಾರೆ. ಇದರ ನೃತ್ಯ ಸಂಯೋಜನೆಯನ್ನು ಕಥಕ್ ನೃತ್ಯ ಗುರುಗಳಾದ ವೀಣಾ ಅರುಣ್ ರವರು ಮಾಡಿದ್ದು, ರೂಪಕಗಳನ್ನು ಪ್ರವೀಣ್ ಹಾಗೂ ಪವನ್ ಕಾರಂಜಿ ಅವರು ನಿರ್ವಹಿಸಿದ್ದಾರೆ. ಹಾಗೆಯೇ ಸಂಗೀತ ಸಂಯೋಜನೆಯನ್ನು ಅರುಣ್ ಕುಮಾರ್ ರವರು ಮಾಡಿದ್ದು, ನವನೀತ್ ಕೀಬೋರ್ಡ್ ಸಹಕಾರ ನೀಡಲಿದ್ದಾರೆ ಎಂದರು. ಹಾಗೆಯೇ ಈ ನೃತ್ಯ ಪ್ರದರ್ಶನವನ್ನು ಶ್ರೀ ಕೃಷ್ಣನ ಜೀವನಚರಿತ್ರೆಯನ್ನು ಸಾರ್ವಜನಿಕರಿಗೆ ತಿಳಿಸುವ ಉದ್ದೇಶದಿಂದ ಹಮ್ಮಿಕೊಂಡಿದ್ದೇವೆ. ಈ ಕಾರ್ಯಕ್ರಮಕ್ಕೆ ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ ಎಂದರು.
SUMMARY | Sarada Sangeetha Nritya Vidyalaya has organised a special programme titled “Avatarisu Baa” which showcases the life story of Lord Krishna in dance. The event will be held at Kuvempu Rangamandira in Shivamogga on The 15th.
KEYWORDS | sharada Sangeetha Nritya Vidyalaya, Avatarisu Baa, Lord Krishna, Kuvempu Rangamandira, Shivamogga,