SHIVAMOGGA | MALENADUTODAY NEWS | ಮಲೆನಾಡು ಟುಡೆ | Mar 31, 2025
ಶಿವಮೊಗ್ಗ | ಇಂದು ದೇಶದಾದ್ಯಂತ ಎಲ್ಲಾ ಮುಸ್ಲಿಮರು ಅದ್ದೂರಿಯಾಗಿ ಪವಿತ್ರ ರಂಜಾನ್ ಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ. ಅದರಂತೆಯೇ ಇಂದು ಶಿವಮೊಗ್ಗ ಜಿಲ್ಲೆಯಲ್ಲೂ ಸಹ ಮುಸ್ಲಿಂ ಸಮುದಾಯದ ವತಿಯಿಂದ ರಂಜಾನ್ ಆಚರಣೆ ಮಾಡಲಾಯಿತು.
ಶಿವಮೊಗ್ಗದ ಡಿಸಿ ಕಚೇರಿ ಮುಂಬಾಗದಲ್ಲಿರುವ ಈದ್ಗಾ ಮೈದಾನದಲ್ಲಿ ಸಾವಿರಾರು ಮುಸ್ಲಿಮ್ ಭಾಂದವರು ಭಾಗವಹಿಸಿ ಭಕ್ತಿ ಪೂರ್ವದಿಂದ ಪ್ರಾರ್ಥನೆಯನ್ನು ಸಲ್ಲಿಸಿದರು. ನಂತರ ಅವರ ಸಾಂಪ್ರದಾಯದಂತೆ ಒಬ್ಬರನ್ನೊಬ್ಬರು ತಬ್ಬಿಕೊಂಡು ಪರಸ್ಪರ ಹಬ್ಬದ ಶುಭಾಶಯಗಳನ್ನು ಕೋರಿದರು. ಬೆಳಿಗ್ಗೆ 9 ಗಂಟೆಗೆ ಶುರುವಾದ ಪ್ರಾರ್ಥನೆ ಸುಮಾರು ಅರ್ಧ ಗಂಟೆಗಳ ಕಾಲ ನೆರವೇರಿತು.
ಈ ವೇಳೆ ಸಂಚಾರದಲ್ಲಿ ಯಾವುದೇ ತೊಂದರೆಯಾಗದಂತೆ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ಪ್ರಾರ್ಥನಾ ಸಂದರ್ಭದಲ್ಲಿ ಕೋರ್ಟ್ ಸರ್ಕಲ್ ಕಡೆ ಬರುವ ವಾಹನಗಳಿಗೆ ಪರ್ಯಾಯ ಮಾರ್ಗವನ್ನು ಕಲ್ಪಿಸಲಾಗಿತ್ತು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಎಂ ಶ್ರೀಕಾಂತ್ ಹಾಗೂ ಮಾಜಿ ಕಾರ್ಪೊರೇಟರ್ ಯೋಗೆಶ್ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು. ಮುಸ್ಲಿಮರ ಪ್ರಾರ್ಥನೆ ಮುಗಿದ ನಂತರ ಒಬ್ಬರನ್ನೊಬ್ಬರು ತಬ್ಬಿಕೊಂಡು ಹಬ್ಬದ ಶುಭಾಶಯವನ್ನು ಕೋರಿದರು.
SUMMARY | Today, all Muslims across the country are celebrating the holy month of Ramzan in a grand manner
KEYWORDS | Muslims, Ramzan, celebrating, shivamogga,