SHIVAMOGGA | MALENADUTODAY NEWS | ಮಲೆನಾಡು ಟುಡೆ | Jan 23, 2025
ಶಿವಮೊಗ್ಗ | ಸಂಸದ ಬಿವೈ ರಾಘವೇಂದ್ರರವರು ಶಿವಮೊಗ್ಗದಲ್ಲಿ ವಿವಿಐಪಿ ಸ್ಟೂಡಿಯೋ ಮಾಡಲು ಮನವಿ ಮಾಡಿಕೊಂಡಿದ್ದಾರೆ ಹಾಗಾಗಿ ಮುಂದಿನ ದಿನಗಳಲ್ಲಿ ಶಿವಮೊಗ್ಗದಲ್ಲಿ ವಿವಿಐಪಿ ಸ್ಟೂಡಿಯೋ ನಿರ್ಮಾಣ ಮಾಡುತ್ತೇವೆ ಎಂದು ಕೇಂದ್ರದ ಮಾಹಿತಿ ಮತ್ತು ಪ್ರಸರಣ ಹಾಗೂ ಸಂಸದೀಯ ವ್ಯವಹಾರಗಳ ಇಲಾಖೆಯ ರಾಜ್ಯ ಸಚಿವ ಎಲ್.ಮುರುಗನ್ ತಿಳಿಸಿದರು.
ವಿದ್ಯಾನಗರದ ಸಹ್ಯಾದ್ರಿ ಕಾಲೇಜು ಮುಂಬಾಗವಿರುವ ದೂರದರ್ಶನ ಮರುಪ್ರಸಾರಣ ಕೇಂದ್ರದ ಆವರಣದಲ್ಲಿ ಭದ್ರಾವತಿ ಆಕಾಶವಾಣಿಯ 10 ಕಿಲೋ ವ್ಯಾಟ್ ಸಾಮರ್ಥ್ಯದ ಟ್ರಾನ್ಸ್‌ಮೀಟರ್ ಅಳವಡಿಕೆಗೆ ಚಾಲನೆ ನೀಡಿ ಮಾತನಾಡಿದ ಸಚಿವರು, ಇದೊಂದು ಐತಿಹಾಸಿಕ ದಿನವಾಗಿದೆ. ಸಂಸದ ರಾಘವೇಂದ್ರರ ನಿರಂತರ ಪ್ರಯತ್ನದಿಂದ 10 ಕಿಲೋ ವ್ಯಾಟ್ ಸಾಮರ್ಥ್ಯದ ಟ್ರಾನ್ಸ್ ಮೀಟರ್ ಅಳವಡಿಕೆ ಕೆಲಸ ಆಗುತ್ತಿದೆ ಎಂದರು.
ಆಕಾಶವಾಣಿ ಮೂಲಕ ನಮ್ಮ ಮೂಲ ಸಂಸ್ಕೃತಿಯನ್ನು ಉಳಿಸಲಾಗುತ್ತಿದೆ. ಆಕಾಶವಾಣಿಯು ಜನ ಸಾಮಾನ್ಯರಿಗೆ ಸಂಪರ್ಕ ಸಾಧನವಾಗಿ ಕೆಲಸ ಮಾಡುತ್ತಿದೆ. ಇನ್ನುಮುಂದೆ ಟ್ರಾನ್ಸ್‌ಮೀಟರ್ ಅಳವಡಿಸಿಕೊಂಡು ಜನರಿಗೆ ಮಾಹಿತಿ ನೀಡುತ್ತದೆ. ಆಕಾಶವಾಣಿ ಕೇಂದ್ರ ಸರ್ಕಾರದ ಯೋಜನೆಗಳನ್ನು ಜನ ಸಾಮಾನ್ಯರಿಗೆ ತಲುಪಿಸುವ ಕೆಲಸ ಮಾಡುತ್ತಿದೆ ಎಂದರು.
ಜನರ ಜ್ಞಾನವನ್ನು ವೃದ್ದಿಸುವ ಕೆಲಸವನ್ನು ಆಕಾಶವಾಣಿ ಮಾಡುತ್ತಿದೆ| ಬಿವೈ ರಾಘವೇಂದ್ರ
ನಂತರ ಸಂಸದ ಬಿ. ವೈ ರಾಘವೇಂದ್ರ ಮಾತನಾಡಿ ಭದ್ರಾವತಿಯಲ್ಲಿ ಆಕಾಶವಾಣಿ 1 ಕೆವಿ ಸಾಮರ್ಥ್ಯ ದಿಂದ 10 ಕೆವಿ ಸಾಮರ್ಥ್ಯದ ಟ್ರಾನ್ಸ್ ಮೀಟರ್‌ಗೆ ಅಪ್‌ಡೇಟ್ ಆಗುತ್ತಿದೆ. ಹತ್ತು ಕೋಟಿ ವೆಚ್ಚದಲ್ಲಿ ಈ ಅಭಿವೃದ್ದಿ ಕೆಲಸ ಆಗುತ್ತಿದೆ. ಜನರ ಜ್ಞಾನವನ್ನು ವೃದ್ದಿಸುವ ಕೆಲಸವನ್ನು ಆಕಾಶವಾಣಿ ಮಾಡುತ್ತಿದೆ. ಈ ಕೆಲಸದ ಮೂಲಕ ಇನ್ಮುಂದೆ ಬಡವರು ಕೂಡ ಕಾರ್ಯಕ್ರಮ ಕೇಳಲು ಒಂದು ಉತ್ತಮ ಅವಕಾಶ ಮಾಡಿಕೊಡಲಾಗುತ್ತಿದೆ ಎಂದರು.
SUMMARY | Mp BY Raghavendra has requested to set up a VVIP studio in Shivamogga, so we will build a VVIP studio in Shivamogga in the coming days
KEYWORDS | Raghavendra, VVIP studio,Shivamogga,