ಶಿವಮೊಗ್ಗದಲ್ಲಿ ಬೈಕ್‌ ವೀಲಿಂಗ್‌, 13500 ರೂ ದಂಡ | ವಿಡಿಯೋ ವೈರಲ್‌

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Apr 4, 2025

ಸಂಚಾರಿ ಪೊಲೀಸರು ಟ್ರಾಫಿಕ್‌ ನಿಯಮಗಳನ್ನು ಪಾಲಿಸುವುದರ ಬಗ್ಗೆ ಸವಾರರಿಗೆ ಆಗಾಗ ಜಾಗೃತಿಯನ್ನು ಮೂಡಿಸುತ್ತಿರುತ್ತಾರೆ. ಆದರೆ ಅದಕ್ಕೆ ಹೆಚ್ಚಾಗಿ ತಲೆ ಕೆಡಿಸಿಕೊಳ್ಳದ ಕೆಲ ಪುಂಡರು ಬೈಕ್‌ ವೀಲಿಂಗ್‌ ಸೇರಿದಂತೆ ಇನ್ನಿತರೆ ಸ್ಟಂಟ್‌ಗಳನ್ನು ಮಾಡಲು ಹೋಗಿ ತಮ್ಮ ಜೀವಕ್ಕೆ ಕುತ್ತು ತಂದುಕೊಳ್ಳುವುದಲ್ಲದೆ ಇತರೆ ವಾಹನ ಸವಾರರಿಗೂ ತೊಂದರೆಯನ್ನು ನೀಡುತ್ತಾರೆ. ಇದೀಗ ಶಿವಮೊಗ್ಗದಲ್ಲಿಯೂ ಸಹ ಅಂತಹುದ್ದೇ ಒಂದು ಘಟನೆ ನಡೆದಿದ್ದು, ಬೈಕ್‌ ವಿಲೀಂಗ್‌ ಮಾಡಿದ ಯುವಕರಿಗೆ ಶಿವಮೊಗ್ಗ ಸಂಚಾರಿ ಪೊಲೀಸರು ದುಬಾರಿ ಮೊತ್ತದ ದಂಡವನ್ನು ವಿಧಿಸಿದ್ದಾರೆ. ಅಷ್ಟೇ ಅಲ್ಲದೆ ಯುವಕರಿಂದ ವಾಹನ ಚಲಾಯಿಸುವಾಗ ಜಾಗೃತೆಯಿಂದ ಚಲಾಯಿಸಿ ಎಂಬ ವಿಡಿಯೋ ಒಂದನ್ನು ಮಾಡಿಸಿ ತಮ್ಮ ಅಧೀಕೃತ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವಿಡಿಯೋದಲ್ಲಿರುವಂತೆ ಶಿವಮೊಗ್ಗ ನಗರದಲ್ಲಿ ಇಬ್ಬರು ಯುವಕರ ತಮ್ಮ ಡಿಯೋ ಎಂಬ ಹೆಸರಿನ ಸ್ಕೂಟಿಯಲ್ಲಿ ಅಪಾಯಕಾರಿ ವೀಲಿಂಗ್‌ ಮಾಡಿದ್ದಾರೆ. ವೀಲಿಂಗ್‌ ಮಾಡಿದ್ದಷ್ಟೇ ಅಲ್ಲದೆ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದನ್ನು ಗಮನಿಸಿದ ಟ್ರಾಫಿಕ್‌ ಪೊಲೀಸರು ಯುವಕರನ್ನು ಪತ್ತೆ ಹಚ್ಚಿ ಕೋರ್ಟ್‌ನಲ್ಲಿ 13500 ದಂಡವನ್ನು ಕಟ್ಟಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಅವರೊಂದಿಗೆ ವಿಡಿಯೋ ಮಾಡಿಸಿದ್ದಾರೆ. ಯುವಕರು ವಿಡಿಯೋದಲ್ಲಿ ನಾವು ಶಿವಮೊಗ್ಗದಲ್ಲಿ ತುಂಬಾ ಸಲ ಬೈಕ್‌ ವೀಲಿಂಗ್‌ ಮಾಡಿದ್ದೇವೆ. ಆದ್ದರಿಂದ  ಪೊಲೀಸರು ನಮ್ಮನ್ನು ಹಿಡಿದು ದಂಡವನ್ನು ವಿಧಿಸಿದ್ದಾರೆ. ದಯವಿಟ್ಟು ಇನ್ನು ಮುಂದೆ ಯಾರೂ ವೀಲಿಂಗ್‌ ಮಾಡಲು ಹೋಗಬೇಡಿ ತಪ್ಪಿಗೆ ಶಿಕ್ಷೆ ತಪ್ಪದು ಎಂದು ಹೇಳಿದ್ದಾರೆ. 



ಈ ವಿಡಿಯೋವನ್ನು ತಮ್ಮ ಅದೀಕೃತ ಖಾತೆಯಲ್ಲಿ ಹಂಚಿಕೊಂಡಿರುವ ಶಿವಮೊಗ್ಗ ಸಂಚಾರಿ ಪೊಲೀಸರು ನಿಮಗೆ ಲೈಸೆನ್ಸ್  ಕೊಟ್ಟಿರುವುದು ವಾಹನ ಚಲಾಯಿಸಲು ಅಷ್ಟೇ ಅದನ್ನು ಹಾರಿಸಲು ಅಲ್ಲ. ಅತೀ ವೇಗ…ಆರೀತು ಜೀವ ಎಚ್ಚರ ಎಂಬ ಕ್ಯಾಪ್ಷನ್‌ನ್ನು ಕೊಟ್ಟಿದ್ದಾರೆ.

SUMMARY | In Shivamogga city, two youths were found wheeling dangerously on a scooty named Dio.

KEYWORDS |  Shivamogga, wheeling, scooty, traffic police, 

                                         

Share This Article