ಶಿವಮೊಗ್ಗದಲ್ಲಿ ಪ್ರಥಮ ಬಾರಿಗೆ ಮತ್ಸ್ಯ ಕನ್ಯೆಯರ  ಪ್ರದರ್ಶನ | ಹೇಗಿರಲಿದೆ ಗೊತ್ತಾ

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Mar 27, 2025

ವರದಿ ಗಬಡಿ ಪ್ರತಾಪ್

ಶಿವಮೊಗ್ಗ ಉತ್ಸವದಲ್ಲಿ ಈ ಬಾರಿ ಪ್ರಪ್ರಥಮ ಬಾರಿಗೆ ಮತ್ಸ್ಯ ಕನ್ಯೆಯರ ಪ್ರದರ್ಶನವನ್ನು  ನಗರದ ಫ್ರೀಡಂ ಪಾರ್ಕ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಉತ್ಸವಕ್ಕೆ  ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪನವರು ಚಾಲನೆ ನೀಡಿದರು.

ಹೇಗಿರುತ್ತೆ ಮತ್ಸ್ಯೆ ಕನ್ಯೆಯರ  ಉತ್ಸವ | ಪ್ರವೇಶ ಶುಲ್ಕವೆಷ್ಟು

ಹಿಂದೆಲ್ಲಾ ಪುರಾಣಗಳಲ್ಲಿ  ಮತ್ಸ್ಯ ಕನ್ಯೆಯರು ಇದ್ದರು ಎಂಬ ಮಾತುಗಳನ್ನು ನೀವೆಲ್ಲ ಕೇಳಿಯೇ ಇರುತ್ತೀರಿ. ಅಷ್ಟೇ ಅಲ್ಲದೆ ಹಲವಾರು ಸಿನಿಮಾ ಹಾಗೂ ಫೋಟೋಗಳಲ್ಲಿ ನೋಡಿರುತ್ತೀರಿ. ಆದರೆ ಇದೀಗ ಶಿವಮೊಗ್ಗದ ಜನರು  ಮತ್ಸ್ಯ ಕನ್ಯೆಯರು ಹೇಗಿರುತ್ತಾರೆ ಎಂದು ನೈಜ್ಯವಾಗಿ ನೋಡಲಿ ಎಂಬ ಉದ್ದೇಶದಿಂದ ಫನ್ ವಲ್ಡ್ ಸಂಸ್ಥೆ ಮತ್ಸ್ಯಕನ್ಯೆಯರ ಉತ್ಸವವನ್ನು ಶಿವಮೊಗ್ಗದಲ್ಲಿ ಆಯೋಜಿಸಿದೆ.  ಸುಮಾರು 45 ದಿನಗಳ ಕಾಲ ನಡೆಯುವ ಈ ಉತ್ಸವದಲ್ಲಿ  ವಿಧವಿಧವಾದ ನೂರಾರು ಜಾತಿಯ  ಮೀನುಗಳನ್ನು ಅಕ್ವೇರಿಯಂನಲ್ಲಿ  ಪ್ರದರ್ಶಿಸಲಾಗುತ್ತದೆ. ಅಷ್ಟೇ ಅಲ್ಲದೆ  ಅಕ್ವೇರಿಯಂನಲ್ಲಿ ಫಿಲಿಫೈನ್ಸ್ ಯುವತಿಯರ ಈಜು ಪ್ರದರ್ಶನ ಉತ್ಸವದ ಪ್ರಮುಖ ಆಕರ್ಷಣೆಯಾಗಿದೆ.  ಕಡಿಮೆ ಪ್ರದೇಶವಿರುವ ನೀರಿನಲ್ಲಿ ಒಬ್ಬರು ಈಜುವುದೇ ಕಷ್ಟಕರ. ಅದರಲ್ಲೂ  ಅಕ್ವೇರಿಯಮ್ ಒಂದರಲ್ಲಿ ಒಟ್ಟಿಗೆ ಮೂವರು ಯವತಿಯರು ಲೀಲಾಜಾಲವಾಗಿ ಈಜುತ್ತಿರುವುದು ಆಶ್ಚರ್ಯವೇ ಸರಿ. ಇದಕ್ಕೆ 100 ರೂಪಾಯಿ ಪ್ರವೇಶ ಶುಲ್ಕವನ್ನು ನಿಗದಿಪಡಿಸಲಾಗಿದ್ದು, ಈ ಪ್ರದರ್ಶನ  ಸಂಜೆ 4 ರಿಂದ 9 ಗಂಟೆಯವರೆಗೆ ತೆರೆದಿರುತ್ತದೆ. ಇದರಲ್ಲಿ ಮತ್ಸ್ಯ ಕನ್ಯೆಯರ  ಪ್ರದರ್ಶನ ಅಷ್ಟೇ ಅಲ್ಲದೆ ವಿವಿಧ ತಿಂಡಿ ತಿನಿಸುಗಳ 35 ಮಳಿಗೆಗಳನ್ನು ಸಹ ತೆರೆಯಲಾಗಿದೆ. ವಿಧ ವಿಧವಾದ ವಿದ್ಯುತ್ ದೀಪಾಲಂಕಾಗಳಿನಂದ ಅಲಂಕರಿಸಲಾದ ಅಕ್ವೇರಿಯಂ ನೋಡುಗರ ಕಣ್ಣಿಗೆ ಹಬ್ಬದಂತೆ ಭಾಸವಾಗುತ್ತದೆ.



ಮತ್ಸ್ಯ ಕನ್ಯೆಯರಉತ್ಸವ ವೀಕ್ಷಿಸಿ ಕೆ ಎಸ್‌ ಈಶ್ವರಪ್ಪ ಹೇಳಿದ್ದೇನು

ಮತ್ಸ್ಯ ಕನ್ಯೆಯರ‌  ಪ್ರದರ್ಶನವನ್ನು  ವೀಕ್ಷಿಸಿ ಮಾತನಾಡಿದ ಕೆ ಎಸ್ ಈಶ್ವರಪ್ಪ  ಶಿವಮೊಗ್ಗ ನಗರಕ್ಕೆ ಅಕ್ವೇರಿಯಂ ಬಂದಿರುವುದು ಇದೇ ಮೊದಲು. ನಾನು ಹಲವಾರು ಬಾರಿ ವಿದೇಶಕ್ಕೆ ಹೋಗಿದ್ದೇನೆ ಆದರೂ ಸಹ  ಇದನ್ನು  ನೋಡಲು ಸಾಧ್ಯವಾಗಿರಲಿಲ್ಲ. ಇಂದು ಶಿವಮೊಗ್ಗದಲ್ಲಿ  ಮತ್ಸ್ಯ ಕನ್ಯೆಯರ  ಉತ್ಸವವನ್ನು ಆಯೋಜಿಸಿರುವುದು ತುಂಬಾ ಸಂತೋಷವಾಗಿದೆ. ಇದರಲ್ಲಿ  ಮಕ್ಕಳು ಕಲಿತುಕೊಳ್ಳುವ ವಿಚಾರ ಬಹಳಷ್ಟಿದೆ. ಮಕ್ಕಳು ಅಕ್ವೇರಿಯಂನಲ್ಲಿ  ಮತ್ಸ್ಯ ಕನ್ಯೆಯರ ಈಜುವುದನ್ನು ನೋಡುವಾಗ  ಅವರು ನೀರಿನಲ್ಲಿ ಹೇಗೆ ಉಸಿರಾಡುತ್ತಾರೆ ಅವರು ನಿಜವಾಗಿಯೂ ಮನುಷ್ಯರ ಅಥವಾ ಮೀನುಗಳ ಎಂಬ ಇತ್ಯಾದಿ  ಪ್ರಶ್ನೆಗಳು ಅವರಲ್ಲಿ ಮೂಡುವುದು ಸಹಜ. ಅದನ್ನೆಲ್ಲ ಅವರ ತಮ್ಮ ಪೋಷಕರ ಬಳಿ ಕೇಳಿ ತಿಳಿದುಕೊಳ್ಳುತ್ತಾರೆ. ವಿದೇಶಕ್ಕೆ ಮಕ್ಕಳನ್ನು ಕರೆದುಕೊಂಡು ಹೋಗಿ ಇದನ್ನು ತೋರಿಸಲು ಸಾಧ್ಯವಿಲ್ಲ. ಆದ್ದರಿಂದ ಇಲ್ಲಿಯೇ ತಮ್ಮ ತಮ್ಮ ಮಕ್ಕಳನ್ನು ಎಲ್ಲಾ ಪೋಷಕರು ಕರೆದುಕೊಂಡು ಬಂದು ತೋರಿಸಿ ಎಂದರು.

SUMMARY | For the first time, an exhibition of mermaids will be held at freedom park premises in the city.

KEYWORDS | exhibition, freedom park,  mermaids,  shivamogga,

 

Share This Article