SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 30, 2024
ಶಿವಮೊಗ್ಗ | ವಿಧಾನ ಪರಿಷತ್ ಚುನಾವಣೆಯಲ್ಲಿ ಶಿಕ್ಷಕರಿಗೆಂದು ಮೀಸಲಿಟ್ಟಿರುವ ಶಿಕ್ಷಕರ ಕ್ಷೇತ್ರವನ್ನು ಶಿಕ್ಷಕರಿಗೆ ಬಿಟ್ಟುಕೊಡಬೇಕೆಂದು ರಾಜ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ವ್ಯಾಪ್ತಿಯ ಶಿಕ್ಷಕರ ಸಂಘ ಆಗ್ರಹಿಸಿದೆ.
ಇಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಜಿ.ಆರ್.ಹೆಬ್ಬೂರು ಮಾತನಾಡಿ ಕರ್ನಾಟಕ ವಿಧಾನ ಪರಿಷತ್ ಸ್ಥಾನದಲ್ಲಿ ಒಟ್ಟು 75 ಸೀಟ್‌ಗಳಿದ್ದು ಅದರಲ್ಲಿ7 ಸೀಟನ್ನು ಶಿಕ್ಷಕರಿಗೆಂದು ಮೀಸಲಿಟ್ಟಿದ್ದಾರೆ. ಆದರೆ ಆ ಸ್ಥಾನವನ್ನು ಶಿಕ್ಷಕರ ಬದಲು ಇತರರು ಆಕ್ರಮಿಸಿಕೊಂಡಿದ್ದಾರೆ. ಶಿಕ್ಷಕರಲ್ಲದವರು ಶಿಕ್ಷಕರಿಗೆ ಮೀಸಲಿಟ್ಟಿರುವ ಸ್ಥಾನದಲ್ಲಿ ಭಾಗವಹಿಸುತ್ತಿರುವುದರಿಂದ ಅವರಿಗೆ ಶಿಕ್ಷಕರ ಸಮಸ್ಯೆ ಅರ್ಥವಾಗುವುದಿಲ್ಲ. ಆದ್ದರಿಂದ ಶಿಕ್ಷಕರಿಗೆ ಮೀಸಲಿಟ್ಟಿರುವ ಸ್ಥಾನದಲ್ಲಿ ಶಿಕ್ಷಕರು ಮಾತ್ರ ಭಾಗವಹಿಸಬೇಕೆಂಬ ಕಾನೂನನ್ನು ಜಾರಿಗೆ ತರಬೇಕು ಎಂದರು.
ಹಾಗೆಯೇ ಶಿಕ್ಷಕರಲ್ಲಿರುವ ಸಮಸ್ಯೆಗಳನ್ನು ಪರಿಹರಿಸಲು ಕರ್ನಾಟಕ ರಾಜ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ವ್ಯಾಪ್ತಿಯ ಶಿಕ್ಷಕರ ಸಂಘವನ್ನು ಸ್ಥಾಪಿಸುತ್ತಿದ್ದೇವೆ . ಸಂಸ್ಥೇ 2025 ಫೆಬ್ರವರಿಯಲ್ಲಿ ಜಾರಿಗೆ ಬರಲಿದೆ. ಅದರಲ್ಲಿರುವ ಕೆಲವೊಂದು ಅಂಶಗಳು ಈ ಕೆಳಕಂಡಂತಿವೆ.
ಸಂವಿಧಾನದಲ್ಲಿ ಶಿಕ್ಷಕರ ಕ್ಷೇತ್ರಕ್ಕೆ ನೀಡಿರುವ ಕರ್ನಾಟಕ ರಾಜ್ಯದ ಶಿಕ್ಷಕರ ವಿಧಾನ ಪರಿಷತ್ ಸದಸ್ಯತ್ವದ ಮಹತ್ವವನ್ನು ಶಿಕ್ಷಕರಿಗೆ ಮನವರಿಕೆ ಮಾಡುವುದು. ಶಿಕ್ಷಕರು ವಿದ್ಯಾರ್ಥಿಗಳನ್ನು ಸತ್ಪ್ರಜೆಗಳನ್ನಾಗಿ ಮಾಡುವವರಾಗಿರುವುದರಿಂದ, ಸಮಾಜದ ಸರಿ ತಪ್ಪುಗಳನ್ನು ಸರಿಪಡಿಸಬೇಕಾಗಿರುವುದರಿಂದ, ಸಂವಿಧಾನದಲ್ಲಿ ಶಿಕ್ಷಕರ ಕ್ಷೇತ್ರಕ್ಕೆ ನೀಡಿರುವ ಸ್ನಾನವನ್ನು ಶಿಕ್ಷಕರು ಪಡೆದು, ಶಿಕ್ಷಕರ ಕ್ಷೇತ್ರವನ್ನು ಮತ್ತು ಸಮಾಜವನ್ನು ಸರಿ ಮಾರ್ಗದಲ್ಲಿ ತೆಗೆದುಕೊಂಡು ಹೋಗುವಂತೆ ಮಾಡುವುದು. ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳನ್ನು ರಾಷ್ಟ್ರೀಕರಣ ಮಾಡಿಸುವುದು. ಸರ್ಕಾರ/ಅನುದಾನಿತ ಶಾಲಾ-ಕಾಲೇಜಿನ ಪಿಂಚಣಿ ರಹಿತ ಶಿಕ್ಷಕ ಸಿಬ್ಬಂದಿಗೆ ಪಿಂಚಣಿ ಕೊಡಿಸುವುದು.ಅನುದಾನ ರಹಿತ ಶಾಲಾ-ಕಾಲೇಜಿನ ಪಿಂಚಣಿ ರಹಿತ ಶಿಕ್ಷಕ ಸಿಬ್ಬಂದಿಗೆ ಸರ್ಕಾರ ನಿಗಧಿಪಡಿಸಿದ ಕನಿಷ್ಠ ವೇತನ, ಪಿ.ಎಫ್., ಗ್ರಾಯುಚಿಟಿ, ಇ.ಎಸ್.ಐ. ಸಿಗುವಂತೆ ಮಾಡುವುದು. ಸರ್ಕಾರ/ಅನುದಾನಿತ ನಿವೃತ್ತ ಶಿಕ್ಷಕ ಸಿಬ್ಬಂದಿಗೆ ಕಾರಣಾಂತರಗಳಿಂದ ಸರ್ಕಾರದಿಂದ ಪಿಂಚಣಿ ಸಿಗದೆ ಹೋದರೆ ಶಿಕ್ಷಕರ ಕಲ್ಯಾಣ ನಿಧಿ” ಸ್ಥಾಪಿಸಿ ಅದರ ಮುಖೇನ ಧನ ಸಹಾಯ ಮಾಡುವುದು.
ಶಿಕ್ಷಣ ಕ್ಷೇತ್ರದಲ್ಲಿ 25 ವರ್ಷಗಳ ಸೇವಾನುಭವ ಪಡೆದಿರುವ ಅನುಭವಿ ಶಿಕ್ಷಕರೇ ನಿಂತು ಶಿಕ್ಷಕರ ಕ್ಷೇತ್ರದ ವಿದಾನ ಪರಿಷತ್ ಗೆ ಆಯ್ಕೆಯಾಗಿ ಬರುವಂತೆ ಮಾಡುವುದು ಮತ್ತು ಅಂತಹವರನ್ನೇ ಶಿಕ್ಷಣ ಮಂತ್ರಿಗಳನ್ನಾಗಿ ಮಾಡುವಂತೆ ಮಾಡುವುದು ಆಗಿದೆ.
SUMMARY | The teachers’ association under the legislative council of the state teachers’ constituency has demanded that the teachers’ constituency, which is reserved for teachers in the legislative council elections, be given to teachers.
KEYWORDS | teachers, legislative, council, elections,