SHIVAMOGGA | MALENADUTODAY NEWS | ಮಲೆನಾಡು ಟುಡೆ | Jan 11, 2025
ಶಿವಮೊಗ್ಗ| ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (nsui) ಇದೀಗ ವಿಶ್ವಾಸ್ ಎಂಬ ನೂತನ ಯಾಪ್ ಅನ್ನು ಬಿಡುಗಡೆಗೊಳಿಸಿದ್ದು, ವಿದೇಶದಲ್ಲಿ ವಿದ್ಯಾಬ್ಯಾಸ ಮಾಡಬೇಕೆಂದುಕೊಂಡಿರುವ ವಿದ್ಯಾರ್ಥಿಗಳು ಆ ಆ್ಯಪ್ ಮೂಲಕ ಬಡ್ಡಿರಹಿತ ಸಾಲವನ್ನು ಪಡೆಯಬಹುದು ಎಂದು ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ ಸಂಸ್ಥೆಯ ರಾಜ್ಯಾಧ್ಯಕ್ಷರಾದ ಕೀರ್ತಿ ಗಣೇಶ್ ತಿಳಿಸಿದರು.
ಇಂದು ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (nsui) ಶಿವಮೊಗ್ಗ ಇವರ ವತಿಯಿಂದ ಸ್ವಾಮಿ ವಿವೇಕಾನಂದರ 162ನೇ ವರ್ಷದ ಜಯಂತೋತ್ಸವ ಕಾರ್ಯಕ್ರಮವನ್ನು ಶಿವಮೊಗ್ಗದ ಮಹಾವೀರ ವೃತ್ತದಲ್ಲಿ ಬಹಳಾ ವಿಜೃಂಬಣೆಯಿಂದ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್ ಸ್ವಾಮಿ ವಿವೇಕಾನಂದರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು. ಈ ಸಂದರ್ಭದಲ್ಲಿ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಕೀರ್ತಿ ಗಣೇಶ್ ಸ್ವಾಮಿ ವಿವೇಕಾನಂದರು ದೇಶದ ಯುವಕರ ಬಗ್ಗೆ ಕಾಳಜಿ ಹೊಂದಿದ್ದರು. ಆ ಕಾಲದಲ್ಲಿ ಅನೇಕ ಯುವಕರಿಗೆ ಮಾರ್ಗದರ್ಶನವನ್ನು ಸಹ ನೀಡಿದ್ದರು. ಮೇರು ವ್ಯಕ್ತಿತ್ವ ಹೊಂದಿದ್ದ ಮಹಾನ್ ನಾಯಕರು ಅವರು ಎಂದರು. ಹಾಗೆಯೇ ನ್ಯಾಷನಲ್ ಸ್ಟೂಡೆಂಟ್ ಯೂನಿಯನ್ ಆಫ್ ಇಂಡಿಯಾ ನಿಗಮದಲ್ಲಿ ವಿದ್ಯಾರ್ಥಿಗಳಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಇದೀಗ ವಿಶ್ವಾಸ್ ಎಂಬ ನೂತನ ಆ್ಯಪ್‌ನ್ನು ಜಾರಿಗೆ ತಂದಿದ್ದು, ಇದರಲ್ಲಿ ವಿದೇಶಕ್ಕೆ ವಿದ್ಯಾಬ್ಯಾಸಕ್ಕೆಂದು ಹೋಗುವ ವಿದ್ಯಾರ್ಥಿಗಳಿಗೆ ಸಾಲವನ್ನು ಸಹ ನೀಡುತ್ತಿದ್ದೇವೆ. ಇದಕ್ಕೆ ಯಾವುದೇ ಬಡ್ಡಿ ಇರುವುದಿಲ್ಲ ಅಗತ್ಯವಿರುವ ವಿದ್ಯಾರ್ಥಿಗಳು ಇದನ್ನು ಸದುಪಯೋಗಪಡಿಸಿಕೊಳ್ಳಿ ಎಂದರು.
ನಂತರ ಮಾಜಿ ಕಾರ್ಪೊರೇಟರ್ ಆದ ಹೆಚ್ ಸಿ ಯೋಗೆಶ್ ಮಾತನಾಡಿ ಮಹಾವೀರರು ದೇಶಕ್ಕೆ ಧರ್ಮದ ಸಂದೇಶವನ್ನು ಕೊಟ್ಟಂತಹ ವ್ಯಕ್ತಿ ಅಂತಹ ವ್ಯಕ್ತಿಯ ವೃತ್ತದಲ್ಲಿ (ಮಹಾವೀರ ವೃತ್ತ) ಮತ್ತೊಬ್ಬ ವಿಶ್ವಕ್ಕೆ ಧರ್ಮದ ಸಂದೇಶವನ್ನು ಕೊಟ್ಟ ಮಹಾನ್ ನಾಯಕರಾದ ಸ್ವಾಮಿ ವಿವೇಕಾನಂದರ ಜಯಂತಿ ವಿಶೇಷವಾಗಿ ಆಚರಿಸುತ್ತಿದ್ದೇವೆ ಇದು ನಮಗೆ ಸಂತಸ ತಂದಿದೆ ಎಂದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕಿರಣ್,ಮುರುಗೇಶ್, ಮುರುಳಿ, ಅರುಣ್ ಶೆಟ್ಟಿ, ಸಿರಾಜ್ ರವರಿಗೆ ಸನ್ಮಾನ ಮಾಡಲಾಯಿತು.
SUMMARY | National Students’ Union of India (NSUI) state president Keerthi Ganesh said that students who want to study abroad will be given interest-free loans through the app.
KEYWORDS | NSUI, Keerthi Ganesh, loan app,