SHIVAMOGGA | MALENADUTODAY NEWS | ಮಲೆನಾಡು ಟುಡೆ | Nov 15, 2024
ಇಡೀ ರಾಜ್ಯದೆಲ್ಲೆಡೆ ನವಂಬರ್ 20 ರಂದು ಬಾರ್ ಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸುತ್ತೇವೆಂದು ಪೆಡರೇಷನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಕರ್ನಾಟಕ ಬಂದ್ ಗೆ ಕರೆ ನೀಡಿದೆ.
ಅಬಕಾರಿ ಇಲಾಖೆ ಹಣ ವಸೂಲಿ, ಲೈಸೆನ್ಸ್ ನವೀಕರಣಕ್ಕೆ ಲಂಚ ಸೇರಿದಂತೆ ಅನೇಕ ರೀತಿಯಲ್ಲಿ ತೊಂದರೆ ಕೊಡುತ್ತಿದ್ದು, ಇದರ ವಿರುದ್ಧ ಮದ್ಯದಂಗಡಿ ಬಂದ್ ಮಾಡಿ ಪ್ರತಿಭಟನೆ ಮಾಡಲು ಮಧ್ಯ ಮಾರಾಟಗಾರರ ಸಂಘ ಮುಂದಾಗಿವೆ.
ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಬಂದ್ ಆಗಬೇಕು. ಹಾಗೂ ನಮ್ಮ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು. ಎಂದು ಒತ್ತಾಯಿಸಿ ರಾಜ್ಯಾದ್ಯಂತ ಮದ್ಯದಂಗಡಿಗಳ ಬಂದ್‌ಗೆ ಪೆಡರೇಷನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಕರ್ನಾಟಕ ಕರೆ ನೀಡಿದೆ. ಬಂದ್ ಮಾಡುವ ನಿರ್ಧಾರದರಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯಲ್ಲ ಎಂದು ಸ್ಪಷ್ಟನೆ ನೀಡಿದೆ.
ಪೆಡರೇಷನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಇಟ್ಟಿರುವ ಬೇಡಿಕೆಗಳೇನು?
ಅಬಕಾರಿ ಇಲಾಖೆಯ ಅಧಿಕಾರಿಗಳು ಮದ್ಯ ಮಾರಾಟ ವ್ಯಾಪಾರಿಗಳಿಂದ ಪ್ರತಿ ತಿಂಗಳು ಹಣ ವಸೂಲಿ ಮಾಡುತ್ತಿದ್ದಾರೆ.
ಲೈಸೆನ್ಸ್ ನವೀಕರಣ ಸೇರಿದಂತೆ ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದ್ದು ಇದಕ್ಕೆಲ್ಲಾ ಬ್ರೇಕ್ ಹಾಕುವಂತೆ ಬೇಡಿಕೆ ಇಡಲಾಗಿದೆ.
ಇಲಾಖೆಯಲ್ಲಿ ವರ್ಗಾವಣೆ, ಪ್ರಮೋಷನ್‌ಗೆ ಅಧಿಕಾರಿಗಳು ಲಕ್ಷ, ಕೋಟಿಗಟ್ಟಲೆ ಲಂಚ ನೀಡುತ್ತಿದ್ದಾರೆ.
ಪ್ರಮೋಶನ್ ಮಾಡಿದ ಹಣವನ್ನು ರಿಕವರಿ ಮಾಡಲು ಮದ್ಯದಂಗಡಿಗಳಿಂದ ಲಂಚ ಪಡೆಯುತ್ತಿದ್ದಾರೆ.
ಬೇರೆ ಬೇರೆ ರಾಜ್ಯಗಳಿಂದ ಮದ್ಯ ನಮ್ಮ ರಾಜ್ಯಕ್ಕೆ ಹೆಚ್ಚಾಗಿ ಬರುತ್ತಿದ್ದು, ಅಕ್ರಮ, ನಕಲಿ ಮದ್ಯದ ಮಾರಾಟ ಕೂಡ ಹೆಚ್ಚಾಗಿದೆ.
ಇದನ್ನೆಲ್ಲ ತಡೆಯಲು ಹಣಕಾಸು ಇಲಾಖೆ ಸಚಿವರೇ ಅಬಕಾರಿ ಇಲಾಖೆ ಜವಾಬ್ದಾರಿ ವಹಿಸಿಕೊಳ್ಳುವಂತೆ ಒತ್ತಾಯಿಸಿದ್ದಾರೆ.
SUMMARY| The Federation of Wine Merchants Association has called for a Karnataka bandh on November 20 to protest against the closure of bars across the state.
KEY WORDS | Federation of Wine Merchants Association, Karnataka bandh on November 2̧0 wine store,
